ದರೋಡೆಕೋರರ ಬಂಧನ; ರೂ.11 ಲಕ್ಷ ನಗದು, 6 ಲಕ್ಷ ಬೆಲೆ ಬಾಳುವ 7 ಮೊಬೈಲ್ ವಶ

Most read

ಬೆಂಗಳೂರು: ಸಿದ್ದಯ್ಯ ರಸ್ತೆಯಲ್ಲಿರುವ  ಯೂನಿಯನ್ ಬ್ಯಾಂಕ್ ಬಿಲ್ಡಿಂಗ್, 4ನೇ ಮಹಡಿಯಲ್ಲಿರುವ ತಮ್ಮ ಕೊಠಡಿಗೆ ನುಗ್ಗಿ ಮಾರಕಾಸ್ತ್ರವನ್ನು ತೋರಿಸಿ 15, ಲಕ್ಷ ರೂ ನಗದು ಮತ್ತು ಮೊಬೈಲ್ ಪೋನ್‌ ಗಳನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆಂದು ರಾಮ್ ಪ್ರಸಾದ್ ಪಂಡಿತ್ ಅವರು ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸಸರು ಎಫ್‌ ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ದರೋಡೆ ನಡೆಸಿದ್ದ ಉಮರ್ ಅಹಮದ್ ಬಿನ್ ಬಷೀರ್ ಅಹಮದ್ (25 ವರ್ಷ). ಶಾಜದ್ ಪಾಷಾ (23), ಮಹಮದ್ ಮೊಯೀಜ್ (25), ಯಾಸೀನ್ ಅಹಮದ್ ಶರೀಫ್ (19), ಶೋಯೆಬ್ ಪಾಷಾ (20) ಇವರನ್ನು ಬಂಧಿಸಿ ದರೋಡೆ ಮಾಡಿದ್ದ ಹಣದಲ್ಲಿ 11,30,000 ರೂ ನಗದು, ವಿವಿಧ ಕಂಪನಿಗಳ 7 ಮೊಬೈಲ್ ಪೋನ್‌, ಕೃತ್ಯಕ್ಕೆ ಬಳಸಿದ್ದ ವೋಕ್ಸ್ ವ್ಯಾಗನ್ ಕಾರ್ ಮತ್ತು ರಾಯಲ್ ಎನ್‌ ಫೀಲ್ಡ್‌ ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

More articles

Latest article