ಗಣರಾಜ್ಯದ ಸಫಲತೆ: ಒಂದು ಚರ್ಚೆ

ಕಳೆದ ಒಂದು ದಶಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪ್ರಜಾಪ್ರಭುತ್ವದ ಮೂಲತತ್ವಗಳಿಗೆ ಕೊಡಲಿಯೇಟು ಹಾಕುತ್ತಿವೆ. ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಮೂಲಕ ಭ್ರಾತೃತ್ವದ ಕಲ್ಪನೆಯನ್ನು ಛಿದ್ರಗೊಳಿಸುವ ಯತ್ನ ಫ್ಯಾಸಿಸ್ಟ್ ಶಕ್ತಿಗಳು ನಡೆಸುತ್ತಿವೆ. ಇದು ಪರೋಕ್ಷವಾಗಿ ಜಾತಿ ವ್ಯವಸ್ಥೆಯನ್ನು ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಬಲಗೊಳಿಸುವ ಪ್ರಯತ್ನವೂ ಆಗಿದೆ. ಮೇಲ್ನೋಟಕ್ಕೆ ಅಲ್ಪಸಂಖ್ಯಾತರು ಇದರ ಟಾರ್ಗೆಟ್ ಎಂದೆನಿಸಿದರೂ, ಆಳದಲ್ಲಿ ಪಾರಂಪರಿಕ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಹುನ್ನಾರವಿದೆ. ಇದು ಪ್ರಜಾಪ್ರಭುತ್ವದ  ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ನಾಶಪಡಿಸುವ ಎಲ್ಲಾ ಸಾಧ್ಯತೆಗಳಿವೆ. -ಡಾ. ಗಣನಾಥ ಎಕ್ಕಾರು,
ಜಾನಪದ ವಿದ್ವಾಂಸರು

ಇಂದು ಬೆಳಿಗ್ಗೆ ಸ್ನೇಹಿತನೊಬ್ಬನಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ಹೇಳಿದೆ. ಅವನು ಎಂದಿನಂತೆ ಉತ್ತರಿಸಿದ “ಬ್ರಿಟೀಷರ ಕಾಲವೇ ಚೆನ್ನಾಗಿತ್ತು. ಈಗ ಎಲ್ಲಾ ಹಾಳಾಗಿದೆ. ಶಿಸ್ತು ಎಂಬುದೇ ಇಲ್ಲ”. ಹಲವು ಸಂದರ್ಭಗಳಲ್ಲಿ ಈ ಮಾತನ್ನು ಆಡಿದ ಆತ ಇಂದು ಪುನರಾವರ್ತಿಸಿದ ಅಷ್ಟೆ. ಏಕೆ ಎಂದು ಪ್ರಶ್ನಿಸಿದರೆ ಸಿದ್ಧ ಪ್ರತಿಕ್ರಿಯೆ-“ಇಂದು ಪ್ರತಿಭೆಗೆ ಅವಕಾಶವಿಲ್ಲ. ಎಲ್ಲರೂ ರಾಜರೇ. ರಾಜಕೀಯ ಕೆಟ್ಟುಹೋಗಿದೆ. ಮಿಲಿಟರಿ ರೂಲ್ ಬರಬೇಕು”. ಇಂದು ಹಲವಾರು ಹಿರಿಯರು ಮತ್ತು ನಾಗರೀಕರು ಇಂಥ ಪ್ರತಿಕ್ರಿಯೆಗಳನ್ನು ನೀಡುತ್ತಿರುವುದು ಸಹಜ ಎನ್ನುವಂತಿದೆ.

ಈ ಪ್ರತಿಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಪ್ರಜಾಪ್ರಭುತ್ವದ ಮೂಲತತ್ತ್ವಗಳ ಬಗೆಗೆ ಮೇಲ್ವರ್ಗ ಮತ್ತು ಮೇಲ್ಜಾತಿಯ ಜನರ ಅಸಮಾಧಾನವನ್ನು ಗುರುತಿಸಬಹುದಾಗಿದೆ. ಪ್ರತಿಭೆಗೆ ಪುರಸ್ಕಾರವಿಲ್ಲ ಎಂಬ ಅಭಿಪ್ರಾಯ ಪರೋಕ್ಷವಾಗಿ ಮೀಸಲಾತಿಯನ್ನು ಪ್ರಶ್ನಿಸುವುದಾಗಿದೆ. ಇದು ಗಣರಾಜ್ಯದಲ್ಲಿ ಸಂವಿಧಾನದ ಸಾಮಾಜಿಕ ನ್ಯಾಯದ ಆಶಯವನ್ನು ಅಣಕಿಸುವಂತಿದೆ. ಸಾಮಾಜಿಕ ಕಾರಣಗಳಿಗಾಗಿ ನಮ್ಮ ವ್ಯವಸ್ಥೆಯಲ್ಲಿ ಶೋಷಣೆಗೆ ಒಳಗಾದ ದಲಿತ-ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳು ಆರ್ಥಿಕವಾಗಿ ಸಹಜವಾಗಿ ಹಿಂದುಳಿದಿವೆ. ಇವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಮೀಸಲಾತಿಯನ್ನು ಚಾಲನೆಗೆ ತರಲಾಗಿದೆ. ಸಂವಿಧಾನದ ಪ್ರಕಾರ ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ. ಸಮಾನತೆಯು ಸಮಾಜದಲ್ಲಿ ರೂಪುಗೊಳ್ಳುತ್ತಿದ್ದಂತೆ ಮೀಸಲಾತಿಯು ಮರೆಯಾಗಬಹುದು. ಈ ದೃಷ್ಟಿಯಿಂದಲೇ ಸುಪ್ರಿಂ ಕೋರ್ಟು ತನ್ನ ತೀರ್ಪಿನಲ್ಲಿ ಮೀಸಲಾತಿಯನ್ನು 50 ಶೇಕಡಾಕ್ಕೆ ಮಿತಿಗೊಳಿಸಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ಮೀಸಲಾತಿಯೊಂದು ಆರ್ಥಿಕ ಅನಿವಾರ್ಯವಾಗಿದೆ. ವಾಸ್ತವವಾಗಿ ದಲಿತವರ್ಗಕ್ಕೆ ಸಿಗುವ ಮೀಸಲಾತಿ ಕೇವಲ 18% ಮಾತ್ರ. ಉಳಿದಂತೆ ಹಿಂದುಳಿದ ವರ್ಗಕ್ಕೆ ಮೀಸಲು ನೀಡಲಾಗಿದೆ. ಉಳಿದ ಪ್ರತಿಭಾವಂತರಿಗೆ ಇವತ್ತು 50 ಶೇಕಡಾದಲ್ಲಿ ಬೇಕಾದಷ್ಟು ಅವಕಾಶವಿದೆ. ಇಂದು ಉದ್ಯೋಗಗಳ ಸಂಖ್ಯೆ ಸ್ವಾತಂತ್ರ್ಯ ಕಾಲಕ್ಕಿಂತ 100% ಹೆಚ್ಚಾಗಿದೆ. ಇದರಿಂದ ಪ್ರತಿಭೆಗೆ ಅವಕಾಶವಿಲ್ಲ ಎಂಬ ವಾದವು ಮೀಸಲಾತಿಯ ಕುರಿತಾದ ಅಸಹನೆಯಲ್ಲದೆ ಬೇರೆ ಏನೂ ಅಲ್ಲ.

:2:

“ಬ್ರಿಟಿಷರ ಕಾಲವೇ ಚೆನ್ನಾಗಿತ್ತು. ಈಗ ಹಾಳಾಗಿದೆ” ಎಂಬ ಚಿಂತನೆಯಲ್ಲಿ ಎರಡು ವಿಚಾರಗಳಿವೆ. ಹಿಂದಿನ ಪರಂಪರೆಯನ್ನು ವೈಭವೀಕರಿಸುವುದು ಭಾರತೀಯರ ಗುಣ. ಎರಡು, ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಯ ಕಾರಣದಿಂದ ದುರ್ಬಲಗೊಂಡ ಶ್ರೇಣೀಕೃತ ವ್ಯವಸ್ಥೆಯನ್ನು ಹಾಳಾಗಿದೆ ಎಂದು ಬಿಂಬಿಸಲಾಗುತ್ತಿದೆ. ಜಾತಿಯ ಕಾರಣದಿಂದ ಸಾಮಾಜಿಕ ಮನ್ನಣೆಯನ್ನು ಪಡೆಯುತ್ತಿದ್ದ ಜಾತಿಗಳ ಅಸಹನೆಯ ಅಭಿವ್ಯಕ್ತಿ ಇದಾಗಿದೆ. ಸಂವಿಧಾನದ ಮೂಲತತ್ವವಾದ ಸಮಾನತೆಯ ತತ್ವಕ್ಕೆ ವಿರುದ್ಧವಾದುದು ಈ ಮನೋಭಾವ. ಈ ಮನಸ್ಥಿತಿಯು ಗಣತಂತ್ರದಲ್ಲಿ ಇನ್ನೂ ಸಮಾನತೆಯ ಪರಿಕಲ್ಪನೆ ಸಾಕಾರಗೊಳ್ಳದಿರುವುದಕ್ಕೆ ಮುಖ್ಯ ಕಾರಣವಾಗಿದೆ.

ಗಣರಾಜ್ಯದ ಮೂರನೇ ಮಹತ್ವದ ಅಡಿಗಲ್ಲು ಭ್ರಾತೃತ್ವ. ಭಾರತದಂತಹ ಬಹುಸಂಸ್ಕೃತಿಯ ರಾಷ್ಟ್ರದಲ್ಲಿ ಭ್ರಾತೃತ್ವವು ಗಟ್ಟಿಗೊಳ್ಳಲು ಹಲವು ಸವಾಲುಗಳಿವೆ. ಜಾತಿಯ ಕಾರಣದಿಂದ ಹುಟ್ಟಿದ ಮೇಲರಿಮೆಯು ಕಲ್ಪನೆಗೆ ತೊಡಕಾಗಿದೆ. ಅದರಲ್ಲೂ ಇತ್ತೀಚೆಗೆ ಅಲ್ಪಸಂಖ್ಯಾತರನ್ನು ಬಹು ಸಂಖ್ಯಾತರ ವಿರುದ್ಧ ಎತ್ತಿಕಟ್ಟುವ ವ್ಯವಸ್ಥಿತ ತಂತ್ರಗಾರಿಕೆ ಎದ್ದು ಕಾಣುತ್ತದೆ. ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲಾ ಧರ್ಮಗಳ ಜನರೂ ಪಾಲ್ಗೊಂಡಿದ್ದರು. ಸಂವಿಧಾನದ ರಚನೆಯಲ್ಲೂ ಎಲ್ಲಾ ಧರ್ಮಗಳ ಜನರ ಕೊಡುಗೆಯಿದೆ. ಅಲ್ಪಸಂಖ್ಯಾತರು ಈ ದೇಶದ ಮೂಲನಿವಾಸಿಗಳು ಎಂಬುದು ಚಾರಿತ್ರಿಕ ಸತ್ಯ. ಆದರೆ ಈ ದೇಶವು ಬಹುಸಂಖ್ಯಾತವರ್ಗಕ್ಕೆ ಸೇರಿದೆ ಎಂಬ ಮನಸ್ಥಿತಿಯನ್ನು ಗಟ್ಟಿಗೊಳಿಸಲಾಗುತ್ತಿದೆ. ಇದು ಸಂವಿಧಾನದ ಮಹತ್ವದ ತತ್ವವಾದ ಭ್ರಾತೃತ್ವಕ್ಕೆ  ಬಹುದೊಡ್ಡ ಸವಾಲು. ಗಣರಾಜ್ಯದ ಸಂವಿಧಾನದ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬ ಮನೋಭಾವ ವ್ಯಾಪಕವಾಗಿ ರೂಪುಗೊಂಡಾಗ ಭ್ರಾತೃತ್ವದ ಪರಿಕಲ್ಪನೆ ಬಲಗೊಂಡು ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ.

ಸಮಾನತೆ ಮತ್ತು ಭ್ರಾತೃತ್ವದ ಕಲ್ಪನೆ ಬಲಗೊಂಡಲ್ಲಿ ಸಂವಿಧಾನದ ಬಹುಮುಖ್ಯ ಪರಿಕಲ್ಪನೆಯಾದ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ. ಇಲ್ಲವಾದಲ್ಲಿ ಸ್ವಾತಂತ್ರ್ಯ ಎಂಬುದು ಮಾತಿನಲ್ಲಿ ಹೇಳಲಿರುವ ಸವಕಲು ಪದವಾಗಬಹುದು. ಮೇಲಿನ ಮೂರು ಸಾಂವಿಧಾನಿಕ ಪರಿಕಲ್ಪನೆಗಳು ಗಟ್ಟಿಗೊಂಡರೆ ಮಾತ್ರ ಸ್ವಾತಂತ್ರ್ಯವು ಅರ್ಥಪೂರ್ಣವಾಗುತ್ತದೆ.

:3:

ಸಮಾಜವಾದವನ್ನು ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಸೇರಿಸಿದ್ದೇವೆ. ಸಮಾಜವಾದ ಎಂಬುದು ಮೇಲಿನ ಸಂವಿಧಾನದ ನಾಲ್ಕು ತತ್ವಗಳ ಪ್ರತಿರೂಪ. ಸ್ವಾತಂತ್ರ್ಯದ ಬಳಿಕ ಸರಕಾರಗಳು ಕೈಗೊಂಡ ಹಲವು ಮಹತ್ವದ ಕ್ರಮಗಳಲ್ಲಿ ಸಮಾಜವಾದದ ತತ್ವಗಳನ್ನು ಅಧಿಕೃತಗೊಳಿಸುವ ಉದ್ದೇಶವಿತ್ತು. ಬ್ಯಾಂಕು ರಾಷ್ಟ್ರೀಕರಣ, ಭೂಸುಧಾರಣೆ, ಹಲವು ಮೌಢ್ಯಗಳ ವಿರುದ್ಧ ಕಾನೂನುಗಳು, ಸ್ತ್ರೀಯರಿಗೆ ಸಂಬಂಧಿಸಿದಂತೆ ಸಬಲೀಕರಣದ ಕ್ರಮಗಳು, ಜನೋಪಯೋಗಿ ಯೋಜನೆಗಳು, ಸಾರ್ವಜನಿಕ ಸಂಸ್ಥೆಗಳನ್ನು ಬಲಗೊಳಿಸುವ ಯತ್ನಗಳು ನಡೆದವು. ಇವು ಸಮಾಜವಾದದ ತತ್ವಗಳಿಗೆ ಪೂರಕವಾಗಿತ್ತು. ಆದರೆ ಜಾಗತೀಕರಣ ಮತ್ತು ಖಾಸಗೀಕರಣದ ಹೆಸರಲ್ಲಿ ತೊಂಬತ್ತರ ದಶಕದಲ್ಲಿ ನಡೆದ ಪ್ರಕ್ರಿಯೆಗಳು ಸಮಾಜವಾದದ ಅಡಿಪಾಯವನ್ನು ಅಲುಗಾಡಿಸಲು ಆರಂಭಿಸಿತು. ಈ ಪ್ರಕ್ರಿಯೆ ಸಮಾಜವಾದವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದ ಕಾಂಗ್ರೇಸ್ ಸರಕಾರಗಳಿಂದಲೇ ನಡೆದುದು ಒಂದು ಕ್ರೂರ ವ್ಯಂಗ್ಯ.

ಚಿತ್ರ ಕೃಪೆ : ಪ್ರಜಾವಾಣಿ

ಕಳೆದ ಒಂದು ದಶಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಪ್ರಜಾಪ್ರಭುತ್ವದ ಮೂಲತತ್ವಗಳಿಗೆ ಕೊಡಲಿಯೇಟು ಹಾಕುತ್ತಿವೆ. ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಮೂಲಕ ಭ್ರಾತೃತ್ವದ ಕಲ್ಪನೆಯನ್ನು ಛಿದ್ರಗೊಳಿಸುವ ಯತ್ನ ಫ್ಯಾಸಿಸ್ಟ್ ಶಕ್ತಿಗಳು ನಡೆಸುತ್ತಿವೆ. ಇದು ಪರೋಕ್ಷವಾಗಿ ಜಾತಿ ವ್ಯವಸ್ಥೆಯನ್ನು ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಬಲಗೊಳಿಸುವ ಪ್ರಯತ್ನವೂ ಆಗಿದೆ. ಮೇಲ್ನೋಟಕ್ಕೆ ಅಲ್ಪಸಂಖ್ಯಾತರು ಇದರ ಟಾರ್ಗೆಟ್ ಎಂದೆನಿಸಿದರೂ, ಆಳದಲ್ಲಿ ಪಾರಂಪರಿಕ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಹುನ್ನಾರವಿದೆ. ಒಂದು ರೀತಿಯಲ್ಲಿ ಬಹುಸಂಖ್ಯಾತ ಜನರನ್ನು ವಶೀಕರಣಗೊಳಿಸಿ ಅವರ ಮೂಲಕ ಇದನ್ನು ಅನುಷ್ಠಾನಿಸುವ ಪ್ರಯತ್ನವಿದೆ. ಇದು ಪ್ರಜಾಪ್ರಭುತ್ವದ  ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ನಾಶಪಡಿಸುವ ಎಲ್ಲಾ ಸಾಧ್ಯತೆಗಳಿವೆ.

ಖಾಸಗೀಕರಣವು ಪ್ರತಿ ಹಂತದಲ್ಲು ಹೆಚ್ಚು ಪ್ರಬಲವಾಗುತ್ತಿದೆ. ಬಿ.ಎಸ್.ಎನ್.ಎಲ್., ವಿಮಾನ ನಿಲ್ದಾಣಗಳು, ಬಂದರುಗಳು ಮುಂದೆ ಜೀವವಿಮಾ ನಿಗಮ ಹೀಗೆ ಎಲ್ಲವೂ ಖಾಸಗಿಯವರ ತೆಕ್ಕೆಗೆ ಜಾರಿದೆ, ಜಾರುತ್ತಿದೆ. ಇದು ಒಂದು ರೀತಿಯಲ್ಲಿ ಭಾರತವನ್ನು ಸಮಾಜವಾದದಿಂದ ಮುಕ್ತಗೊಳಿಸಿ, ಕಟ್ಟಾ ಬಂಡವಾಳಶಾಹಿ ದೇಶವಾಗಿ ಪರಿವರ್ತಿಸುವತ್ತ ದಾಪುಕಾಲು ಹಾಕುವ ಹೆಜ್ಜೆಯಾಗಿದೆ. ಆರ್ಥಿಕ ಅಸಮಾನತೆಯು ಹೆಚ್ಚುತ್ತಿದ್ದು, ಕಾರ್ಮಿಕ ಚಳವಳಿಯನ್ನು ವ್ಯವಸ್ಥಿತವಾಗಿ ದಮನಿಸಲಾಗಿದೆ.

 :4:

ನಿರುದ್ಯೋಗ, ಬೆಲೆಯೇರಿಕೆ, ಶ್ರೀಸಾಮಾನ್ಯರ ಬದುಕನ್ನು ಅತಂತ್ರಗೊಳಿಸುತ್ತಿದೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ವಿಜೃಂಭಣೆಗಳು ಇದನ್ನು ಮರೆಮಾಚುತ್ತಿವೆ. ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ತಿಲಾಂಜಲಿ ನೀಡಿದ್ದು ಇದರ ಭಾಗವೇ ಆಗಿದೆ. ನಿಧಾನವಾಗಿ ಆಳುವ ವರ್ಗವು ಸರ್ವಾಧಿಕಾರಿ ಧೋರಣೆಯನ್ನೇ ಒಪ್ಪುವಂತೆ ಮಾಡಲಾಗುತ್ತಿದೆ.

ಈ ಬಗ್ಗೆ ದೇಶದ ಕೆಲವು ಕಡೆ ಕ್ಷೀಣಧ್ವನಿಯ ಪ್ರತಿಭಟನೆಗಳು ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಇದು ವ್ಯಾಪಕವಾದಾಗ ಮಾತ್ರ 1950ರಲ್ಲಿ ನಾವು ಭಾರತದ ಪ್ರಜೆಗಳು ಘೋಷಿಸಿದ ಗಣತಂತ್ರವು  ಉಳಿಯಬಹುದೇನೋ…

ಡಾ. ಗಣನಾಥ ಎಕ್ಕಾರು
ಜಾನಪದ ವಿದ್ವಾಂಸರು

ಮೊ: 9964583433

ಇದನ್ನೂ ಓದಿ – http://ಸಿನೆಮಾ | ಲ್ಯಾಂಡ್ ಲಾರ್ಡ್ -‌ ಕೊಡ್ಲಿ ರಾಚಯ್ಯನ ಸಂವಿಧಾನಾವತಾರ https://kannadaplanet.com/cinema-land-lord-kodli-rachaiahs-constitution/

More articles

Latest article

Most read