ಸ್ವಾತಂತ್ರ್ಯ ದಿನವೆಂದರೆ ಕೇವಲ ಒಂದು ದಿನದ ಆಚರಣೆ ಅಲ್ಲ. ಅದು ನಮ್ಮ ದೇಶದ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಮತ್ತು ಸ್ವಾತಂತ್ರ್ಯ. ಈ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ನಿರಾಳವಾಗಿ ಅನುಭವಿಸುವ ದಿನಗಳನ್ನು ಎದುರು ನೋಡೋಣ...
ಕೇವಲ ಕಳೆದ ಒಂದು ದಶಕದ ಅವಧಿಯಲ್ಲಿ ಸ್ವಾತಂತ್ರ್ಯಗಳ ಕತೆ ಏನಾಗಿದೆ? ನಿಮಗೆ ಇಷ್ಟವಾಗುವ ಉಡುಪು ಧರಿಸುವ, ಇಷ್ಟವಾದುದನ್ನು ತಿನ್ನುವ ಸ್ವಾತಂತ್ರ್ಯದ ಕತೆ ಏನಾಗಿದೆ? ಜಾತಿ ಮತಗಳನ್ನು ಮೀರಿ ನಿಮಗೆ ಇಷ್ಟವಾದವರನ್ನು ಮದುವೆಯಾಗಿ ನೆಮ್ಮದಿಯ...