Thursday, December 12, 2024

ಚಂಡಮಾರುತ; ತಮಿಳುನಾಡು, ಪುದುಚೆರಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ

Most read

ಚೆನ್ನೈ; ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಫೆಂಗಲ್ ಚಂಡಮಾರುತದ ಪರಿಣಾಮ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ತಮಿಳುನಾಡು ಮತ್ತು ಪುದುಚೇರಿಯ ಕೆಲವು ಭಾಗಗಳಲ್ಲಿ ಶಾಲಾ ಕಾಲೇಜುಗಳಿಗೆ ಶುಕರವಾರ ರಜೆ ನೀಡಲಾಗಿದೆ. ಚೆನ್ನೈ, ಚೆಂಗಲ್ಪಟ್ಟು ಮತ್ತು ಕಡಲೂರಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಪುದುಚೇರಿಯಲ್ಲಿ ಶುಕ್ರವಾರ ಮತ್ತು ಶನಿವಾರ ರಜೆ ನೀಡಲಾಗಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಆಳವಾದ ಒತ್ತಡದಿಂದ ಉತ್ತರ-ಈಶಾನ್ಯಕ್ಕೆ ಚಲಿಸುತ್ತಿದ್ದು, ಚಂಡಮಾರುತ ಮತ್ತಷ್ಟು ಬೆಳೆಯುವ ಸಾಧ್ಯತೆಯಿದೆ. ಇದು ನಿನ್ನೆ 2330 ಗಂಟೆಗಳ ಐಎಸ್‌ಟಿನಲ್ಲಿ ಟ್ರಿಂಕೋಮಲಿಯ ಈಶಾನ್ಯಕ್ಕೆ 240 ಕಿಲೋಮೀಟರ್, ನಾಗಪಟ್ಟಣಂನ ಪೂರ್ವ ಆಗ್ನೇಯಕ್ಕೆ 330 ಕಿಲೋಮೀಟರ್ ಪುದುಚೇರಿಯ ಪೂರ್ವ ಆಗ್ನೇಯಕ್ಕೆ 390 ಕಿಲೋಮೀಟರ್. ಚೆನ್ನೈನಿಂದ 430 ಕಿಲೋಮೀಟರ್ ಆಗ್ನೇಯಕ್ಕೆ ಕೇಂದ್ರೀಕೃತವಾಗಿತ್ತು ಎಂದು ಹವಾಮಾನ ಕಚೇರಿ ತಿಳಿಸಿದೆ. ಶನಿವಾರ ಬೆಳಿಗ್ಗೆ ಉತ್ತರ ತಮಿಳುನಾಡು ಪುದುಚೇರಿ ಕರಾವಳಿಯನ್ನು ಕಾರೈಕಾಲ್ ಮತ್ತು ಮಹಾಬಲಿಪುರಂ ನಡುವೆ ಪುದುಚೇರಿಗೆ ಸಮೀಪದಲ್ಲಿ ದಾಟುವ ಸಾಧ್ಯತೆಯಿದೆ. ಇದು ಒತ್ತಡದಿಂದಾಗಿ 45-55 ಕಿಮೀ ರಿಂದ ಗಂಟೆಗೆ 65 ಕಿಮೀ ವೇಗದಲ್ಲಿ ಬೀಸುತ್ತದೆ ಎನ್ನಲಾಗಿದೆ.

ಶುಕ್ರವಾರ ಮತ್ತು ಶನಿವಾರ ತಮಿಳುನಾಡಿನ ಚೆನ್ನೈ, ಚೆಂಗಲ್ಪಟ್ಟು, ವಿಲ್ಲುಪುರಂ, ಕಡಲೂರು, ಮೈಲಾಡುತುರೈ, ತಿರುವರೂರ್, ನಾಗಪಟ್ಟಣಂ, ತಿರುವಳ್ಳೂರು, ಕಾಂಚೀಪುರಂ, ಅರಿಯಲೂರು ಮತ್ತು ತಂಜಾವೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಪುದುಚೇರಿ ಮುಖ್ಯಮಂತ್ರಿ ಎನ್. ರಂಗಸಾಮಿ ಅವರು ಭಾರೀ ಮಳೆ ಮತ್ತು ಸಂಭಾವ್ಯ ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ.

More articles

Latest article