ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಇಂದು 6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 58 ಸ್ಥಾನಗಳಿಗೆ ನಡೆಯುತ್ತಿದ್ದು, ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಶೇ. 25.76ರಷ್ಟು ಮತದಾನವಾಗಿರುವ ವರದಿಯಾಗಿದೆ.
ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಒಟ್ಟು 889 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ. ಇವತ್ತಿನದ ಮತದಾನದ ನಂತರ ಇನ್ನೊಂದು ಹಂತದ ಮತದಾನವಷ್ಟೇ 2024ರ ಲೋಕಸಭಾ ಚುನಾವಣೆಯಲ್ಲಿ ಬಾಕಿ ಉಳಿಯುತ್ತದೆ.
ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪ್ರಮುಖ ಅಭ್ಯರ್ಥಿಗಳಲ್ಲಿ ಕನ್ಹಯ್ಯ ಕುಮಾರ್, ಮನೇಕಾ ಗಾಂಧಿ, ಮನೋಹರ್ ಲಾಲ್ ಕಟ್ಟರ್, ನವೀನ್ ಜಿಂದಾಲ್, ರಾಜ್ ಬಬ್ಬರ್ ಪ್ರಮುಖರು.
ಬೆಳಿಗ್ಗೆ 11 ಗಂಟೆಯವರಗೆ ಆಗಿರುವ ಮತದಾನದ ವಿವರ ಈ ಕೆಳಕಂಡಂತಿದೆ.
ದಿಲ್ಲಿ: ಶೇ. 21.69
ಉತ್ತರ ಪ್ರದೇಶ: 27.06
ಹರಿಯಾಣ: 22.09
ಪಶ್ಚಿಮ ಬಂಗಾಳ: 36.88
ಜಾರ್ಖಂಡ್: 27.80
ಬಿಹಾರ: 23.67
ಒಡಿಶಾ: 21.30
ಜಮ್ಮು ಕಾಶ್ಮೀರ: 23.11