ಇನ್ನು ಮೂರು ವರ್ಷ ಹತ್ತು ತಿಂಗಳು ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಬಸವರಾಜ ರಾಯರೆಡ್ಡಿ

ಕಾಂಗ್ರೆಸ್ ಸರ್ಕಾರದ ಬಾಕಿ ಅವಧಿಯಾಗಿರುವ ಮುಂದಿನ 3 ವರ್ಷ 10 ತಿಂಗಳುಗಳ ಕಾಲವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನು ಮೂರು ವರ್ಷ ಹತ್ತು ತಿಂಗಳು ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಯಾರೂ ಕೂಡ ಅವರ ರಾಜೀನಾಮೆ ಪಡೆಯಲು ಆಗುವುದಿಲ್ಲ. ಹೈಕಮಾಂಡ್ ಕೂಡ ಅಂತಹ ಮನಸ್ಸು ಮಾಡುವುದಿಲ್ಲ. ರಾಜೀನಾಮೆ ಕೊಡ್ತೀನಿ ಅಂತ ಯಾರು ಬಾಂಡ್ ಪೇಪರ್ ಬರೆದು ಕೊಟ್ಟಿಲ್ಲ ಎಂದು ಹೇಳಿದ್ದಾರೆ.

ಮುಡಾ ಹಗರಣದ ಆರೋಪ ಸೇರಿದಂತೆ ವಿವಿಧ ಆರೋಪಗಳನ್ನು ನಿರಾಕರಣೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಪಕ್ಷದ ವರಿಷ್ಠ ಮಂಡಳಿ ಬೆನ್ನಿಗ ನಿಂತು ಬೆಂಬಲ ನೀಡುತ್ತಿದ್ದಾರೆ. ಈ ಬಗ್ಗೆ ನನಗೂ ಮಾಹಿತಿ ಬಂದಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಯಾರು ಕೂಡ ನಮ್ಮಲ್ಲಿ ಪ್ರಯತ್ನ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

More articles

Latest article

Most read