ಸಿಎಂ ಸಿದ್ದರಾಮಯ್ಯ, ಅರಣ್ಯ ಇಲಾಖೆ ಸಚಿವರನ್ನು ಭೇಟಿಯಾದ ಆಂಧ್ರ DMC ಪವನ್ ಕಲ್ಯಾಣ್: ಚರ್ಚೆಯಾಗಿದ್ದೇನು?

Most read

ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರು ಇಂದು ಬೆಂಗಳೂರಿಗೆ ಆಗಮಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರು ಭೇಟಿ ವೇಳೆ ಪವನ್ ಕಲ್ಯಾಣ್ ಅವರು ಆಂಧ್ರದಲ್ಲಿ ಕಾಡಾನೆಗಳ ಸೆರೆ, ಆನೆ ಕಾರ್ಯಾಚರಣೆ, ಆನೆಗಳನ್ನು ಪಳಗಿಸುವುದು, ಮಾವುತರಿಗೆ ತರಬೇತಿಯ ಕುರಿತು ಸಮಾಲೋಚನೆ ನಡೆಸಿದ್ದಾರೆ.

ರಾಜಧಾನಿಯ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪವನ್ ಕಲ್ಯಾಣ್ ಅವರು ಕುಶಲೋಪರಿ ವಿಚಾರಿಸಿದರು. ಆ ಬಳಿಕ ವಿಧಾನಸೌಧದಲ್ಲಿ ಅರಣ್ಯ ಸಚಿವರ ಜೊತೆ ಸಭೆ ನಡೆಸಿದರು. ಇದಕ್ಕೂ ಮುನ್ನ ಈಶ್ವರ್ ಖಂಡ್ರೆ ಅವರಿಗೆ ಶಾಲು ಹಾರ ಹಾಕಿ ತಿರುಪತಿ ಲಡ್ಡು ನೀಡಿ ಸನ್ಮಾನಿಸಿ ಗೌರವಿಸಿದರು.

ಪವನ್ ಕಲ್ಯಾಣ್ ಅವರು ಸಿಎಂ ಹಾಗೂ ಸಚಿವರ ಭೇಟಿ ವೇಳೆ, ಮುಖ್ಯವಾಗಿ ಕೆಂಪು ಚಂದನದ ಕಳ್ಳಸಾಗಣೆ ತಡೆಗೆ ಕೈಗೊಳ್ಳಬೇಕಾದ ಕ್ರಮಗಳು. ಕರ್ನಾಟಕದಿಂದ ಆರು ಕುಂಕಿ ಆನೆಗಳನ್ನು ಆಂಧ್ರ ಪ್ರದೇಶಕ್ಕೆ ನೀಡುವುದು ಸೇರಿದಂತೆ ಹಲವು ವಿಚಾರಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಿದರು. ಆಂಧ್ರ ಕೆಲ ಭಾಗಗಗಳಲ್ಲಿ ಕಾಡಾನೆಗಳು ರೈತರ ಹೊಲಗಳನ್ನು ಹಾಳು ಮಾಡುತ್ತಿರುವುದು, ಬೆಳೆ ನಾಶ ಮಾಡುವ ಆನೆಗಳ ಸೆರೆ ಹಿಡಿದು ಅವುಗಳನ್ನು ಫಳಗಿಸುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರ್ ಖಂಡ್ರೆ ಅವರು, ಆನೆ ಮಾನವ ಸಂಘರ್ಷ ತಡೆಯಲು ಆಂಧ್ರ ಕರ್ನಾಟಕದ ನಡುವೆ ಒಪ್ಪಂದ ಹಾಗೂ ಕೆಲ ಕುಮ್ಕಿ ಆನೆಗಳನ್ನ ಕೊಡಲು ಆಂಧ್ರ ಡಿಮ್ಯಾಂಡ್ ಮಾಡಿದೆ. ಎಂಟು ಆನೆಗಳನ್ನ ಕೊಡಲು ಮನವಿ ಮಾಡಿದ್ದಾರೆ, ಈ ಬಗ್ಗೆ ನಾವು ಪರಿಶೀಲನೆ ಮಾಡುತ್ತೇವೆ. ಕರ್ನಾಟಕದಲ್ಲಿ 103 ಕುಮ್ಕಿ ಆನೆಗಳಿವೆ, ಆದರೆ ತಕ್ಷಣ ಎಂಟು ಕುಮ್ಕಿ ಆನೆಗಳನ್ನ ಕೊಡಲು ಆಗಲ್ಲ. ಮಾವುತರಿಗೆ, ಕಾವಾಡಿಗಳಿಗೆ ತರಬೇತಿ ಕೊಡಬೇಕು. ಇದೇ ವೇಳೆ ಅರಣ್ಯ ಒತ್ತುವರಿ ಹಾಗೂ ಶ್ರೀಗಂಧ, ರಕ್ತ ಚಂಧನ ತಡೆಗೆ ಅಗತ್ಯ ಕ್ರಮ, ಮಾಹಿತಿ ವಿನಿಮಯ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

More articles

Latest article