ಅಮೆರಿಕದಲ್ಲಿ ಜನರ ಮೇಲೆ ಮತ್ತೆ ಗುಂಡಿನ ದಾಳಿ: ಒಬ್ಬರು ಸಾವು, ಹಲವು ಜನರಿಗೆ ಗಾಯ

ಅಮೆರಿಕದ ನ್ಯೂಯಾರ್ಕ್ ಸಿಟಿಯ ರೋಚೆಸ್ಟರ್ ನಗರದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಯಾರು ಅನ್ನೋದು ಈವರೆಗೂ ತಿಳಿದು ಬಂದಿಲ್ಲ.

ಅಮೆರಿಕದ ಸ್ಥಳೀಯ ಕಾಲಮಾನ ಭಾನುವಾರ ಸಂಜೆ 6:20ಕ್ಕೆ ಈ ಘಟನೆ ನಡೆದಿದೆ. ಭಾನುವಾರದ ರಜೆ ಪ್ರಯುಕ್ತ ರೋಚೆಸ್ಟರ್ ನಗರದ ಮಾಪ್ಲೇವುಡ್ ಪಾರ್ಕ್ನಲ್ಲಿ ನೂರಾರು ಮಂದಿ ಸೇರಿದ್ದ ಹೊತ್ತಲ್ಲಿ ಗುಂಡಿನ ದಾಳಿ ನಡೆದಿದೆ. ಗಾಯಗೊಂಡ ಜನರು ರಕ್ತದ ಮಡುವಲ್ಲಿ ನೆಲಕ್ಕುರುಳುತ್ತಿದ್ದಂತೆ. ತಮ್ಮ ಮಕ್ಕಳ ಜೊತೆ ಪಾರ್ಕ್ಗೆ ಬಂದಿದ್ದ ನೂರಾರು ಮಂದಿ ಗಾಬರಿಯಿಂದ ಓಡಿ ಹೋಗಿರುವ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ 20 ವರ್ಷ ವಯಸ್ಸಿನ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದ. ಇನ್ನಿತರ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಓರ್ವನನ್ನು ವಿಶೇಷ ಚಿಕಿತ್ಸೆಗೆ ರವಾನಿಸಲಾಗಿದೆ. ಮಿಕ್ಕ ಐವರನ್ನು ಬೇರೆಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗುಂಡಿನ ದಾಳಿ ಬಳಿಕ ಜನರು ಏಕಾಏಕಿ ಪಾರ್ಕ್ನಿಂದ ಹೊರಗೆ ಓಡಿ ಹೋಗುವಾಗ ಕಾಲ್ತುಳಿತ ಸಂಭವಿಸಿ ಗಾಯಗೊಂಡಿದ್ದಾರೆ.

More articles

Latest article

Most read