ಬೆಳಗಾವಿ ಡಿಸಿ ಕಚೇರಿಯಲ್ಲಿ ಗಣೇಶನ ವಿಗ್ರಹ: ಡಿಸಿ ಸಾಹೇಬರಿಗೆ ಚಿಂತಕ ಶಿವಸುಂದರ್ ಬಹಿರಂಗ ಪತ್ರ

Most read

ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಡಿಸಿ ಮೊಹಮ್ಮದ್ ರೋಷನ್ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಕುರಿತು ಹಲವು ಪರ ವಿರೋಧ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಚಿಂತಕ ಶಿವಸುಂದರ್ ಅವರು “ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ಅವರೇ” ಎಂಬ ಶೀರ್ಷಿಕೆಯಡಿ ಒಂದು ಬಹಿರಂಗ ಪತ್ರವನ್ನು ಬರೆದಿದ್ದಾರೆ.

ಜಿಲ್ಲಾಧಿಕಾರಿಗಳ ಈ ನಡೆಯನ್ನು ಪ್ರಶ್ನಿಸಿ ಹಲವು ತಕರಾರನ್ನು ಎತ್ತಿರುವ ಚಿಂತಕ ಶಿವಸುಂದರ್ ಅವರು,  ಎಷ್ಟೇ ಸದುದ್ದೇಶದಿಂದ ಕೂಡಿದ್ದರೂ ಡಿಸಿ ಕಚೇರಿಯಲ್ಲಿ ಗಣೇಶ ಪ್ರತಿಮೆ ಸ್ಥಾಪಿಸಿದ ನಿಮ್ಮ ನಡೆ ಅಪಾಯಕಾರಿ ಮತ್ತು ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತದ್ದು ಎಂದು ಮೂರು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ.

1. ಸರ್ಕಾರಿ ಕಚೇರಿಗಳು ಮತಧರ್ಮಗಳ ಆಚರಣೆಯ  ಕೇಂದ್ರಗಳಲ್ಲ. ಅಲ್ಲಿ ಯಾವುದೇ ಒಂದು ಧರ್ಮದ ದೇವರ ಪ್ರತಿಮೆಗಳನ್ನು ಸ್ಥಾಪಿಸುವುದು ಭಾರತದ ಸರ್ವಧರ್ಮ ಸಮಭಾವ ರೂಪಿ ಸೆಕ್ಯುಲಾರ್ ಆಶಯಗಳಿಗೂ ಕೂಡ ವಿರುದ್ಧವಾದಾದುದು.

2. ಒಬ್ಬ ಸರ್ಕಾರಿ ಅಧಿಕಾರಿ ಸರ್ಕಾರಿ ಕಚೇರಿಯಲ್ಲಿ ಗಣೇಶನ ಪ್ರತಿಮೆ ಸ್ಥಾಪಿಸುವುದು ಭಾರತೀಯರೆಲ್ಲಾ ಹಿಂದೂಗಳೇ ಎಂಬ ಸಂಘಿ ಹಿಂದೂತ್ವವಾದಿಗಳ ಕೋಮುವಾದಿ ಪ್ರಚಾರಕ್ಕೆ ಮತ್ತಷ್ಟು ಅಧಿಕೃತ ಮಾನ್ಯತೆ ತಂದುಕೊಂಡುತ್ತದೆ.

3. ಒಬ್ಬ ಮುಸ್ಲಿಂ ಅಧಿಕಾರಿ ಹಿಂದೂ ದೇವರ ಪೂಜೆ ಮಾಡಿದ್ದು ಮೇಲ್ನೋಟಕ್ಕೆ ಸೆಕ್ಯುಲಾರ್ ಎಂದು ಮೆಚ್ಚುಗೆಗೆ ಪಾತ್ರವಾದರೂ, ಇದನ್ನು ಮಾದರಿಯಾಗಿ ಮುಂದಿಡುತ್ತಾ ಮುಸ್ಲಿಮರ  ಮೇಲೆ  ಮಾತ್ರ ಅನಗತ್ಯ ಮತ್ತು ಅನಪೇಕ್ಷಣೀಯ  ಒತ್ತಡವನ್ನು ಅದು ಹುಟ್ಟುಹಾಕುತ್ತದೆ.

ಹೀಗಾಗಿ ತಮ್ಮದು ಸದುದ್ದೇಶವೇ ಆಗಿದ್ದರೂ, ದೇಶದ ಸಂವಿಧಾನವನ್ನು ಪಾಲಿಸಬೇಕಾದ ಅಧಿಕಾರಿಯಾಗಿ ನಿಮ್ಮ ನಡೆ ಖಂಡಿತಾ ಸರಿಯಲ್ಲ ಎಂದು ಹೇಳಿದ್ದಾರೆ.

More articles

Latest article