ಬೆಂಗಳೂರಿಗೆ ಶರಾವತಿ ನೀರು: ಯೋಜನೆ ಕೈಬಿಡುವಂತೆ ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್‌ನಿಂದ ಮನವಿ

Most read

ಶರಾವತಿ ನದಿ ಅಣೆಕಟ್ಟು ಅಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಸರ್ಕಾರದ ಉದ್ದೇಶವನ್ನು ಕೈ ಬಿಟ್ಟು ಮಲೆನಾಡಿನ ಅರಣ್ಯವನ್ನು ಉಳಿಸಿ ಎಂದು ಶಿವಮೊಗ್ಗ ಜಿಲ್ಲೆಯ ಸಾಗರ ಬ್ಲಾಕ್‌ ಕಾಂಗ್ರೆಸ್ ಪಕ್ಷ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ವಿವಂತಿಸಿದೆ.

ಈ ಕುರಿತು ಬ್ಲಾಕ್‌ ಅಧ್ಯಕ್ಷ ಹಾಗೂ ಇತರೆ ಸದಸ್ಯರು ಮನವಿ ಪತ್ರ ಬರೆದಿದ್ದು,  ವಿದ್ಯುತ್‌ ಉತ್ಪಾದನೆಗಾಗಿ ಈ ಜಲಾಶಯದ ನೀರು ಬಳಕೆ ಆಗುತ್ತಿದೆ. ಸಾಗರ ಪಟ್ಟಣ ಹಾಗೂ ಎಲ್ಲ ಗ್ರಾಮಾಂತರದ ಪ್ರದೇಶಗಳಿಗೂ ಈ ಜಲಾಶಯದಿಂದಲೇ ಕುಡಿಯುವ ನೀರು ಸರಬರಾಜು ಆಗುತ್ತಿದೆ ಎಂದಿದ್ದಾರೆ.

ಬೆಂಗಳೂರಿಗೆ ಇಲ್ಲಿಂದ ನೀರು ಸರಬರಾಜು ಯೋಜನೆಯಿಂದ ವಿದ್ಯುತ್ ಉತ್ಪಾದನೆಗೆ ನೀರು ಕೊರತೆ ಅಗಬಹುದು. ಅಲ್ಲದೆ ಸುಮಾರು ರೂ.2000 ಕೋಟಿ (ಹನ್ನೆರಡು ಸಾವಿರ ಕೋಟಿ ರೂಪಾಯಿ) ಅಂದಾಜು ವೆಚ್ಚದ ನೀರು ಸರಬರಾಜು ಯೋಜನೆಯಿಂದ ಅರಣ್ಯ ಕೃಷಿ ಭೂಮಿ, ಪರಿಸರ ಎಲ್ಲವೂ ಹಾನಿ ಆಗುತ್ತದೆ ಬದಲಿಗೆ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಮಳೆ ನೀರನ್ನು ಸಂಗ್ರಹಿಸಿ ಬೆಂಗಳೂರು ಜನತೆಗೆ ನೀರು ಪೂರೈಕೆ ಮಾಡುವ ಯೋಜನೆಯನ್ನು ರೂಪಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಪತ್ರ ಬರೆದಿದ್ದಾರೆ.

ಆದ್ದರಿಂದ ಅಂಗನಮಕ್ಕಿ ಜಲಾಶಯದ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆಯನ್ನು ಕೈ ಬಿಡಬೇಕೆಂದು ಈ ಮೂಲಕನಾವು ಆಗ್ರಹಿಸುತ್ತೇವೆ ಎಂದಿದ್ದಾರೆ.

More articles

Latest article