ಮಾಧ್ಯಮಗಳು ತಪ್ಪಾಗಿ ನಡೆದರೆ ಓದುಗರು ಇದನ್ನು ಖಂಡಿಸಬೇಕು. ಫೇಕ್ ನ್ಯೂಸ್ ಬಂದು ವ್ಯಕ್ತಿಯ ತೇಜೋವೊದೆ ಮಾಡುತ್ತಿರುವುದು ಕೆಟ್ಟ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಈದಿನ ಡಾಟ್ ಕಾಮ್ ನಡೆಸುತ್ತಿರುವ ಓದುಗರ ಸಮಾವೇಶದಲ್ಲಿ ಮಾತನಾಡಿದ ಅವರು ಮಾಧ್ಯಮಗಳು ಪ್ರಭಲವಾದ ಅಸ್ತ್ರವಾಗಬೇಕು. ಓದಿದವರಿಗೆ, ಓದದೆ ಇರುವವರಿಗೆ ಮಾಧ್ಯಮಗಳು ಧ್ವನಿ ಆಗಬೇಕು. ನಾನು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇಟ್ಟವನು. ಮಾಧ್ಯಮದವರು ಹೇಳುವ ಅಭಿಪ್ರಾಯವನ್ನು ಗೌರವಿಸುತ್ತೇನೆ ಎಂದು ಹೇಳಿದರು.
ಪತ್ರಿಕೆ, ಟಿವಿ, ಈಗ ಡಿಜಿಟಲ್ ಮಾಧ್ಯಮ ಬಂದಿದೆ. ಡಿಜಿಟಲ್ ಮಾಧ್ಯಮ ಅತಿ ಹೆಚ್ಚು ಕೆಲಸ ಮಾಡುತ್ತಿರುವುದನ್ನು ಗಮನಿಸುತ್ತಿದ್ದೇವೆ ಎಂದರು.
ದೇಶ ಹೇಗಿರಬೇಕು, ಯಾವ ದಿಕ್ಕಿನಲ್ಲಿ ಸಾಗಬೇಕು ಅಂತ ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1949 ನವೆಂಬರ್ 26 ನೇ ತಾರಿಕು ಸಂವಿಧಾನ ರಚನಾ ಸಭೆಯ ಭಾಷಣ ಮಾಡಿ, ಜನತಾ ಸಮಾಜ ನಿರ್ಮಾಣ ಆಗಬೇಕು ಅಂತ ಹೇಳಿದ್ದಾರೆ ಎಂದರು.
ಅನೇಕ ಶತಮಾನಗಳ ಕಾಲ ಶೂದ್ರರು, ಅಶ್ಪೂಶ್ಯರು, ಅಲ್ಪಸಂಖ್ಯಾತರು, ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಜಾತಿಯಿಂದ ಅವರ ಸಾಮಾರ್ಥ್ಯವನ್ನು ಅಳೆಯುತ್ತಿರುವುದು ದೊಡ್ಡ ದುರಂತ ಎಂದರು.
ರಾಜಕೀಯ ಪ್ರಜಾಪ್ರಭುತ್ವ ಸಿಕ್ಕಿದೆ, ಆದರೆ ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವ ಸಿಕ್ಕಿಲ್ಲ. ನಾವು ಸಮಾನತೆಯನ್ನು ಸಮಾಜವನ್ನು, ಜಾತಿ ರಹಿತ, ಕಂದಚಾರ-ಮೌಡ್ಯಗಳ ರಹಿತ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಎಂದು ಡಾ ಬಿ ಆರ್ ಅಂಬೇಡ್ಕರ್ ಅವರು ಹೇಳಿದ ಮಾತನ್ನು ನೆನೆಪಿಸಿಕೊಂಡರು.
ಬಹಳ ಜನ ವಿದ್ಯಾವಂತರೇ ಮೌಡ್ಯ- ಕಂದಚಾರಗಳನ್ನು ಮಾಡುತ್ತಿರುವುದು. ನಮಗೆ ಸಿಗುವ ಶಿಕ್ಷಣ ವೈಚಾರಿಕ, ವೈಜ್ಞಾನಿಕವಾಗಿ ಇದ್ದರೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬಹುದು. ಸಂವಿಧಾನದ ಪರವಾಗಿಯೂ ಇದ್ದಾರೆ ಮತ್ತು ವಿರೋಧಿಗಳು ನಮ್ಮ ನಡೆವೆ ಇದ್ದಾರೆ. Article 51A ಬಹಳ ಸ್ಪಷ್ಟವಾಗಿ ನಮ್ಮ ಕರ್ತವ್ಯಗಳ ಬಗ್ಗೆ ಹೇಳಿದೆ. ನಾವು ಸಂವಿಧಾನ ಹೇಳಿರುವ ಕರ್ತವ್ಯಗಳನ್ನು ಪಾಲನೆ ಮಾಡಬೇಕು ಎಂದರು.
2013ರಲ್ಲಿ ನಾವು ಅಧಿಕಾರಕ್ಕೆ ಬರುವಾಗ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೀವಿ. ಬಿಜೆಪಿಯವರು 600 ಭರವಸೆಗಳನ್ನು ಕೊಟ್ಟಿದ್ದರು, ಆದರೆ ಶೇ10 ರಷ್ಟು ಸಹ ಜಾರಿಗೆ ತರಲಿಲ್ಲ. ನಾವು ಮತ್ತೆ ಅಧಿಕಾರಕ್ಕೆ ಬಂದಮೇಲೆ ಐದು ಗ್ಯಾರಂಟಿಗಳನ್ನು ಕೊಟ್ಟಿದ್ದಿವಿ. ಆ ಗ್ಯಾರಂಟಿಗಳು ಮಹಿಳೆಯರಿಗೆ, ಬಡವರಿಗೆ, ವಿದ್ಯಾರ್ಥಿಗಳಿಗೆ ಶಕ್ತಿ ತುಂಬಿದೆ.
ಮಾಧ್ಯಮಗಳು ವಸ್ತು ಸ್ಥಿತಿಯನ್ನು ಜನರಿಗೆ ಕೊಡುವ ಕೆಲಸ ಮಾಡಬೇಕು. ಈದಿನ ಡಾಟ್ ಕಾಮ್ ಚುನಾವಣೆ ನಂತರ ಸಮೀಕ್ಷೆಯಲ್ಲಿ 136 ಕ್ಕೂ ಹೆಚ್ಚು ಸ್ಥಾನ ಗೆಲ್ಲತ್ತೆ ಅಂತ ಹೇಳಿದ್ದು ಸತ್ಯ ಆಯಿತು ಎಂದರು.