ದೇಶದಲ್ಲಿ ದರ್ಶನ್‌ ಸುದ್ದಿ ಒಂದೇನ ಇರೋದು? ಅವನೇನು ಏನು ಸಮಾಜಕ್ಕೆ ರೋಲ್ ಮಾಡೆಲಾ?: ಕೆಎನ್ ರಾಜಣ್ಣ ಗರಂ

ದೇಶದಲ್ಲಿ ದರ್ಶನ್ ಸುದ್ದಿ ಒಂದೇ ಇರೋದಾ? ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಅದೇ ಬರ್ತಿದೆ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲ? ಒಳ್ಳೆಯ ಕಲಾವಿದ ಜನರು ಇಷ್ಟ ಪಡ್ತಾರೆ ಅಂತ ಮಾಡಬಾರದ್ದನ್ನ ಮಾಡಿದ್ರೆ ಕಾನೂನು ಕ್ರಮ ತಗೊಳುತ್ತೆ ಎಂದು ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ದರ್ಶನ್ ವಿಚಾರಕ್ಕೆ ಗರಂ ಆಗಿದ್ದಾರೆ.

ನಿನ್ನೆ ನಿಧನರಾದ ಹಾಸನದ ಸಮಾಜಸೇವಕ ಮಹಂತಪ್ಪ ಅವರ ಅಂತಿಮ‌ ದರ್ಶನ ಪಡೆದ ಸಚಿವರು ಮಾಧ್ಯಮಗಳ ಜೊತೆ ಮಾತನಾಡಿ, ದೇಶದಲ್ಲಿ ದರ್ಶನದ್ದು ಒಂದೇ ಸುದ್ದಿನ ಇರೋದಾ, ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ತೋರುಸ್ತೀರಾ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲ? ಬರೀ ಅವನದ್ದೇ ಸುದ್ದಿ. ಒಳ್ಳೆಯ ಕಲಾವಿದ ಅಂತ ಎಲ್ಲರೂ ಒಪ್ಪುತ್ತೀವಿ. ಒಳ್ಳೆಯ ಕಲಾವಿದ ಜನರು ಇಷ್ಟ ಪಡ್ತಾರೆ ಅಂತ ಮಾಡಬಾರದ್ದನ್ನ ಮಾಡಿದ್ರೆ ಕಾನೂನು ಕ್ರಮ ತಗೊಳುತ್ತೆ. ಅದನ್ನು ಬೆಳಿಗ್ಗೆ, ಸಾಯಂಕಾಲ ತೋರಿಸುತ್ತಾ ಇದ್ದರೆ ನೋಡಲು ಅಸಹ್ಯ ಆಗುತ್ತೆ ಎಂದರು.

ಮುಂಜಾನೆ ದರ್ಶನ್ ಅನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಆಂಧ್ರ ಗಡಿ ಮೂಲಕ ಬಳ್ಳಾರಿ ಜೈಲಿಗೆ​ ಕರೆತಂದಿದ್ದಾರೆ. ಆರೋಗ್ಯ ತಪಾಸಣೆ ನಂತರ ಹೊಸ ಕೈದಿ ನಂಬರ್‌ ಸಹ ನೀಡಿದ್ದಾರೆ.

More articles

Latest article

Most read