ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ರಾಜ್ಯದ 60 ಕಡೆಗಳಲ್ಲಿ  ನ್ಯಾಯಕ್ಕಾಗಿ ಜನಾಗ್ರಹ

Most read

ರಾಜ್ಯದ 60 ಕಡೆಗಳಲ್ಲಿ ಅಕ್ಟೋಬರ್ 09 ರಂದು ನ್ಯಾಯಕ್ಕಾಗಿ ಜನಾಗ್ರಹ

ಪ್ರತಿಭಟನೆ, ಸಭೆ, ಮನವಿ ಸಲ್ಲಿಕೆ, ಪುಸ್ತಕ ಬಿಡುಗಡೆ, ಭಿತ್ತಿಪತ್ರ, ಕ್ಯಾಂಡಲ್ ಲೈಟ್ ಪ್ರದರ್ಶನ

ಬೆಂಗಳೂರು : ಧರ್ಮಸ್ಥಳ ಸೌಜನ್ಯ ಅತ್ಯಾಚಾರ-ಕೊಲೆಯಾಗಿ 13 ವರ್ಷ ಸಂದಿರುವ ಹಿನ್ನಲೆಯಲ್ಲಿ ಧರ್ಮಸ್ಥಳದ ಅತ್ಯಾಚಾರ, ಕೊಲೆ, ಭೂಕಬಳಿಕೆ, ದಲಿತರ ಮೀಸಲು ಭೂಮಿ ಕಬಳಿಕೆ, ಮೈಕ್ರೋ ಫೈನಾನ್ಸ್ ಬಡ್ಡಿ ದಂಧೆಯನ್ನು ವಿರೋಧಿಸಿ  ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯು ಅಕ್ಟೋಬರ್ 09, 2025 ರಂದು ನ್ಯಾಯಕ್ಕಾಗಿ ಜನಾಗ್ರಹ ದಿನ ಆಯೋಜಿಸಿದೆ. ರಾಜ್ಯದ ಉದ್ದಗಲಗಳಲ್ಲಿ ಒಂದೇ ದಿನ 60 ಕಡೆಗಳಲ್ಲಿ ಜನಾಗ್ರಹ ಸಭೆ, ಆಗ್ರಹ ಪತ್ರ ಸಲ್ಲಿಕೆ,  ಸಮಾವೇಶ, ಪ್ರತಿಭಟನೆ, ಭಿತ್ತಿಪತ್ರ ಪ್ರದರ್ಶನ, ಕ್ಯಾಂಡಲ್ ಲೈಟ್ ಪ್ರದರ್ಶನಗಳು ನಡೆಯಲಿವೆ.

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು, ಕೊಲೆ ಅತ್ಯಾಚಾರ, ಭೂಕಬಳಿಕೆಯ ವಿರುದ್ದ 1980 ರಿಂದ ಹೋರಾಟ ನಡೆಯುತ್ತಿದೆ. ಆದರೆ ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಒಂದೇ ದಿನದಲ್ಲಿ ಗ್ರಾಮ ಗ್ರಾಮಗಳಲ್ಲಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ರಾಜ್ಯಾದ್ಯಂತ ನಡೆಯುವ ಆಯ್ದ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ :

1.ವಿಜನಾಪುರ – ಸಂಜೆ 6 ಕ್ಕೆ

2. ಚಿನ್ನಪ್ಪನ ಹಳ್ಳಿ – ಸಂಜೆ 6 ಕ್ಕೆ

3. ಬಿ ಚೆನ್ನಸಂದ್ರ – ಸಂಜೆ 6 ಕ್ಕೆ

4. ಚಿಕ್ಕದೇವಸಂದ್ರ – ಸಂಜೆ 5 ಕ್ಕೆ

5. ಕಪಿಲಾ ನಗರ – ಸಂಜೆ 5 ಕ್ಕೆ

6. ಶ್ರೀಗಂಧ ನಗರ – ಸಂಜೆ 4 ಕ್ಕೆ

7. ಶ್ರೀನಿವಾಸ ನಗರ – ಸಂಜೆ 5 ಕ್ಕೆ

8. ಶಿವಾನಂದ ನಗರ – ಸಂಜೆ 5 ಕ್ಕೆ

9. ಹೊಯ್ಸಳ ನಗರ – ಸಂಜೆ 5ಕ್ಕೆ

10. ಬೈರವೇಶ್ವರ ನಗರ – ಸಂಜೆ 6.30ಕ್ಕೆ

11. ನಾಗರಭಾವಿ ವಿಲೇಜ್ – ಸಂಜೆ 6 ಕ್ಕೆ

12. ಶಾಂತಿನಗರ – ಸಂಜೆ 5 ಕ್ಕೆ

13. ತ್ಯಾಗರಾಜನಗರ – ಸಂಜೆ 5.30ಕ್ಕೆ

14. ಹೊಸೂರು ಬಂಡೆ, ಕಣ್ಣೂರು –  ಸಂಜೆ 6ಕ್ಕೆ

  1. ಆನೇಕಲ್ ತಾಲೂಕು, ತಹಶೀಲ್ದಾರ್ ಕಚೇರಿ : ಮಧ್ಯಾಹ್ನ 12ಕ್ಕೆ
  1. ಬಿಜಿಪುರ ಗ್ರಾಮ ಪಂಚಾಯತ್ ಕಚೇರಿ – ಬೆಳಿಗ್ಗೆ 10 ಕ್ಕೆ
  2. ಪಂಡಿತಹಳ್ಳಿ ಗ್ರಾಮ ಪಂಚಾಯತ್ ಕಚೇರಿ –  ಬೆಳಿಗ್ಗೆ – 10 ಕ್ಕೆ
  3. ಬಂಡೂರು ಗ್ರಾಮ ಪಂಚಾಯತ್ ಕಚೇರಿ – ಬೆಳಿಗ್ಗೆ 10 ಕ್ಕೆ
  4. ದುಗ್ಗನಹಳ್ಳಿ ಗ್ರಾಮ ಪಂಚಾಯತ್ ಕಚೇರಿ – ಬೆಳಿಗ್ಗೆ 10 ಕ್ಕೆ
  5. ತಳಗವಾದಿ ಗ್ರಾಮ ಪಂಚಾಯತ್ ಕಚೇರಿ – ಬೆಳಿಗ್ಗೆ 10 ಕ್ಕೆ
  6. ಹಿಟ್ಟನಹಳ್ಳಿ ಕೂಪ್ಪಲು ಗ್ರಾಮ ಪಂಚಾಯತ್ ಕಚೇರಿ – ಬೆಳಿಗ್ಗೆ 10 ಕ್ಕೆ
  7. ತೊರೆಕಾಡನಹಳ್ಳಿ ಗ್ರಾಮ ಪಂಚಾಯತ್ ಕಚೇರಿ – ಬೆಳಿಗ್ಗೆ 10 ಕ್ಕೆ
  8. ನಿಡ್ಲಘಟ್ಟ ಗ್ರಾಮ ಪಂಚಾಯತ್ ಕಚೇರಿ – ಬೆಳಿಗ್ಗೆ 10 ಕ್ಕೆ
  9. ಕಂದೇಗಾಲ ಗ್ರಾಮ ಪಂಚಾಯತ್ ಕಚೇರಿ –  ಬೆಳಿಗ್ಗೆ 10 ಕ್ಕೆ

1.ದೊಡ್ಡ ಅರಸೀಕೆರೆ ಗ್ರಾಮ ಪಂಚಾಯತ್ ಕಚೇರಿ – ಬೆಳಿಗ್ಗೆ 10 ಕ್ಕೆ

1. ಹೊಸಕೋಟೆಯಲ್ಲಿ ಬೃಹತ್ ಮೆರವಣಿಗೆ ಬೆಳಿಗ್ಗೆ 10 ಕ್ಕೆ

ಶ್ರಮಿಕ ಭವನದಿಂದ ಪುನೀತ್ ರಾಜ್ ಕುಮಾರ್ ಪುತ್ಥಳಿಯವರೆಗೆ

1. ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ  ಬೆಳಿಗ್ಗೆ 11 ಕ್ಕೆ

1.ಕೊಡಗು ಜಿಲ್ಲಾಧಿಕಾರಿ ಕಚೇರಿ – ಬೆಳಿಗ್ಗೆ 11 ಕ್ಕೆ

1. ಬೀದರ್ ಜಿಲ್ಲಾಧಿಕಾರಿ ಕಚೇರಿ ಬೆಳಿಗ್ಗೆ 11 ಕ್ಕೆ

2.ಬಸವಕಲ್ಯಾಣ ತಾಲೂಕು ಬೆಳಿಗ್ಗೆ  11.30 ಕ್ಕೆ

3.ಹುಮನಾಬಾದ್ ತಾಲೂಕು ಬೆಳಿಗ್ಗೆ  11.30 ಕ್ಕೆ

1. ಮೈಸೂರು, ಗಾಂಧಿ ಚೌಕ್ ಬೆಳಿಗ್ಗೆ 11 ಕ್ಕೆ

1.ಹಾವೇರಿ ತಹಶೀಲ್ದಾರ್ ಕಚೇರಿ ಬೆಳಿಗ್ಗೆ 11ಕ್ಕೆ

1. ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ : ಬೆಳಿಗ್ಗೆ 11ಕ್ಕೆ

1. ರಾಯಚೂರು ಜಿಲ್ಲಾಧಿಕಾರಿ ಕಚೇರಿ – ಬೆಳಿಗ್ಗೆ  11.30 ಕ್ಕೆ

2. ಸಿಂಧನೂರು ತಾಲೂಕು ಕಚೇರಿ – ಬೆಳಿಗ್ಗೆ 11 ಕ್ಕೆ

3. ದೇವದುರ್ಗ ತಾಲೂಕು ಕಚೇರಿ – ಬೆಳಿಗ್ಗೆ 11 ಕ್ಕೆ

4. ಲಿಂಗಸಗೂರು ತಾಲೂಕು ಕಚೇರಿ – ಬೆಳಿಗ್ಗೆ 11 ಕ್ಕೆ

1.ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಬೆಳಿಗ್ಗೆ 11.30ಕ್ಕೆ

1. ಬಳ್ಳಾರಿ ಗಾಂಧಿ ಭವನದಲ್ಲಿ ಜನಾಗ್ರಹ ಸಮಾವೇಶ :ಬೆಳಿಗ್ಗೆ 11ಕ್ಕೆ 

1.ಹಾಸನ ಮಹಾವೀರ ವೃತ್ತ – ಸಂಜೆ 6 ಕ್ಕೆ

ಬೃಹತ್ ಜನಾಗ್ರಹ ಸಭೆ, ಪುಸ್ತಕ ಬಿಡುಗಡೆ, ಕ್ಯಾಂಡಲ್ ಲೈಟ್ ಪ್ರದರ್ಶನ

1. ಬೆಳ್ತಂಗಡಿ ಅಂಬೇಡ್ಕರ್ ಭವನ – ಬೆಳಿಗ್ಗೆ 10.30 ಕ್ಕೆ

2. ಮಂಗಳೂರು ‘ವಿಕಾಸ’ ಸ್ಟೇಟ್‌ ಬ್ಯಾಂಕ್‌ – ಸಂಜೆ 5 ಗಂಟೆಗೆ 

3. ಮುಡಿಪು ಕುರ್ನಾಡು ಜಂಕ್ಷನ್ – ಸಂಜೆ 5-30ಕ್ಕೆ

4. ಹರೇಕಳ ಡಿವೈಎಫ್ಐ ಕಚೇರಿ – ಸಂಜೆ 7-30ಕ್ಕೆ

5. ಕುತ್ತಾರ್ ತೇವುಲ ಪರಿಸರ – ಸಂಜೆ 7 ಕ್ಕೆ

6. ಬಜಾಲ್ ನಲ್ಲಿ ಪಕ್ಕಲಡ್ಕ ಜಂಕ್ಷನ್ – ಸಂಜೆ 7-30ಕ್ಕೆ

7. ಉರ್ವಸ್ಟೋರ್ ಸುಂಕದಕಟ್ಟೆಯಲ್ಲಿ – ಸಂಜೆ 7-30ಕ್ಕೆ

8. ಬೆಂಗರೆ ಕಸಬ ಬೆಂಗರೆ ಪಿ.ಜಿ ಪಾಯಿಂಟ್ ಸಂಜೆ 5-30ಕ್ಕೆ

9. ಬಂದರ್ ಸಿಟಿಪ್ರೆಸ್ ಬಳಿ ಬಂದರು – ರಾತ್ರಿ 8-30ಕ್ಕೆ

10. ಬೈಕಂಪಾಡಿ ಅಂಗರಗುಂಡಿ ಬಳಿ – ಸಂಜೆ 7-30ಕ್ಕೆ

11. ಸುರತ್ಕಲ್ ಕಾನ ಜಂಕ್ಷನ್  – ಸಂಜೆ 7.30ಕ್ಕೆ

12. ಕೊಂಚಾಡಿ ಯೆಯ್ಯಾಡಿ ಕಚೇರಿ – ಸಂಜೆ 6-30ಕ್ಕೆ

13. ಪಂಜಿಮೊಗರು ವಿದ್ಯಾನಗರ – ಸಂಜೆ 7-30ಕ್ಕೆ

14. ವಾಮಂಜೂರು ತಿರುವೈಲ್ – ಸಂಜೆ 7-30ಕ್ಕೆ

More articles

Latest article