SIR: ಆಧಾರ್‌ ರೂವಾರಿ ನಂದನ್ ನಿಲೇಕಣಿ ಕುಟುಂಬದ ಹೆಸರು ‘ಡಿಸ್ಕ್ರೆಪೆನ್ಸಿ ಲಿಸ್ಟ್’ನಲ್ಲಿ

ಬೆಂಗಳೂರು: ಕರ್ನಾಟಕದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಹಾಗೂ ಅವರ ಕುಟುಂಬದ ಸದಸ್ಯರ ಹೆಸರುಗಳು ‘ಡಿಸ್ಕ್ರೆಪೆನ್ಸಿ ಲಿಸ್ಟ್’ನಲ್ಲಿ (“ದಾಖಲೆ ವ್ಯತ್ಯಾಸಗಳ ಪಟ್ಟಿ”) ಕಾಣಿಸಿಕೊಂಡಿವೆ.

ನಂದನ್ ನಿಲೇಕಣಿ, ಅವರ ಪತ್ನಿ ರೋಹಿಣಿ ನಿಲೇಕಣಿ, ಪುತ್ರ ನಿಹಾರ್ ನಿಲೇಕಣಿ ಹಾಗೂ ಪುತ್ರಿ ಜಾಹ್ನವಿ ನಂದನ್ ನಿಲೇಕಣಿ ಅವರ ಹೆಸರುಗಳನ್ನು “Unmapped with last SIR” ವಿಭಾಗದಲ್ಲಿ ಗುರುತಿಸಲಾಗಿದೆ. ಅಂದರೆ, ಅವರ ಪ್ರಸ್ತುತ ಮತದಾರರ ದಾಖಲೆಗಳನ್ನು 2002ರ ಹಿಂದಿನ SIR ಮತದಾರರ ಪಟ್ಟಿಯೊಂದಿಗೆ ಮ್ಯಾಪ್ ಮಾಡಲು ಸಾಧ್ಯವಾಗಿಲ್ಲ ಎಂಬುದು ಈ ವರ್ಗದ ಅರ್ಥ.

ನಿಲೇಕಣಿ ಕುಟುಂಬದ ಹೆಸರುಗಳು ಬೆಂಗಳೂರು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯಲ್ಲಿ ಮುಂದುವರಿದಿದ್ದು, ಕೋರಮಂಗಲದ ಮೂರನೇ ಬ್ಲಾಕ್‌ನ ರೆಡ್ಡಿ ಜನಸಂಘ ಹೈಸ್ಕೂಲ್ ಮತಗಟ್ಟೆಯ ವ್ಯಾಪ್ತಿಯಲ್ಲಿ ಮತದಾರರಾಗಿ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ನೋಟಿಸ್‌ ಬಗ್ಗೆ ಸ್ಪಷ್ಟತೆ ಏನು?

ನಿಲೇಕಣಿ ಕುಟುಂಬದ ಹೆಸರಿನಲ್ಲಿ SIR ಸಂಬಂಧಿತ ನೋಟಿಸ್‌ಗಳು ಸಿಸ್ಟಮ್‌ನಲ್ಲಿ generate ಆಗಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಯಾಗಿದೆ. ಆದರೆ ನೋಟಿಸ್‌ಗಳನ್ನು ಕುಟುಂಬದ ಸದಸ್ಯರಿಗೆ ವಾಸ್ತವವಾಗಿ ಜಾರಿಗೊಳಿಸಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ಸಮಸ್ಯೆಯನ್ನು ಪರಿಹರಿಸುವುದಾಗಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಒಟ್ಟು ಸುಮಾರು 43.8 ಲಕ್ಷ ಮತದಾರರ ದಾಖಲೆಗಳಲ್ಲಿ ವಿವಿಧ ರೀತಿಯ ವ್ಯತ್ಯಾಸಗಳು ಪತ್ತೆಯಾಗಿದ್ದು, ಅವುಗಳಲ್ಲಿ ಹೆಸರು/ಕಾಗುಣಿತ ವ್ಯತ್ಯಾಸ, ಹಿಂದಿನ SIR ದಾಖಲೆಗಳೊಂದಿಗೆ ಮ್ಯಾಪಿಂಗ್ ಆಗದಿರುವುದು ಸೇರಿದಂತೆ ಹಲವು ಕಾರಣಗಳಿವೆ. ಈ ನೋಟಿಸ್‌ಗಳ ಪ್ರಕ್ರಿಯೆ ವ್ಯವಸ್ಥೆಯಲ್ಲಿ ಕಂಡುಬಂದ ವ್ಯತ್ಯಾಸಗಳ ಆಧಾರದ ಮೇಲೆ ನಡೆಯುತ್ತಿದ್ದು, ಪ್ರಮುಖ ವ್ಯಕ್ತಿಗಳಿಗೆ ಮಾತ್ರ ಪ್ರತ್ಯೇಕವಾಗಿ ಅನ್ವಯಿಸುವ ಪ್ರಕ್ರಿಯೆಯಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿಲೇಕಣಿ ಮಾತ್ರವಲ್ಲ

SIR ಡಿಸ್ಕ್ರೆಪೆನ್ಸಿ ಪಟ್ಟಿಯಲ್ಲಿ ಭಾರತ ರತ್ನ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್, ಕನ್ನಡ ನಟ ಶಿವರಾಜ್‌ಕುಮಾರ್, ಝೆರೋಧಾ ಸಹ-ಸಂಸ್ಥಾಪಕರಾದ ನಿಖಿಲ್ ಕಾಮತ್ ಮತ್ತು ನಿತಿನ್ ಕಾಮತ್, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಸೇರಿದಂತೆ ಹಲವು ಪ್ರಮುಖರ ಹೆಸರುಗಳೂ ಕಾಣಿಸಿಕೊಂಡಿವೆ.

ಆದರೆ ಸಿ.ಎನ್.ಆರ್. ರಾವ್ ಅವರಿಗೆ SIR ನೋಟಿಸ್ ನೀಡಲಾಗಿಲ್ಲ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅವರ ಹೆಸರಿನಲ್ಲಿ ದಾಖಲೆ ವ್ಯತ್ಯಾಸ ಕಂಡುಬಂದಿದ್ದರೂ, BLO ಅಂತಿಮ ಮತದಾರರ ಪಟ್ಟಿಗೆ ಅವರ ಹೆಸರನ್ನು ಸೇರಿಸಲು ಶಿಫಾರಸು ಮಾಡಿದ್ದಾರೆ.

ಸಿ.ಎನ್.ಆರ್. ರಾವ್ ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ

ಎಸ್‌ಐಆರ್ (SIR) ವ್ಯತ್ಯಾಸದ ಕುರಿತು ಸಿ.ಎನ್.ಆರ್. ರಾವ್ ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. 

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಪ್ರೊ. ರಾವ್ ಅವರಿಗೆ ನೋಟಿಸ್ ನೀಡಲಾಗಿದೆ ಎಂಬ ವರದಿಗಳು ತಪ್ಪಾಗಿವೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಬಿಎ (GBA) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಬುಧವಾರ ತಿಳಿಸಿದರು.

ಎಸ್‌ಐಆರ್ ಪ್ರಕ್ರಿಯೆಯ ಭಾಗವಾಗಿ, ಹಿರಿಯ ಚುನಾವಣಾ ಅಧಿಕಾರಿಗಳು ಪ್ರೊ. ರಾವ್ ಮತ್ತು ಅವರ ಕುಟುಂಬದ ಸದಸ್ಯರ ನಿವಾಸಕ್ಕೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಸಂಗ್ರಹಣಾ ನಮೂನೆಗಳನ್ನು ತಲುಪಿಸಿದ್ದರು ಮತ್ತು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಲಾಗಿತ್ತು.

ತಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂಬುದನ್ನು ಪ್ರೊ. ರಾವ್ ಅವರ ಕಚೇರಿಯೂ ದೃಢಪಡಿಸಿದೆ.

More articles

Latest article

Most read