ಮಕ್ಕಳನ್ನು ಗುಣಾತ್ಮಕ ಶಿಕ್ಷಣದಿಂದ ವಂಚಿತಗೊಳಿಸಿದ ಎಸ್. ಐ. ಆರ್.

ಎಸ್.ಐ.ಆರ್. ನಂತಹ ಕೆಲಸಗಳಿಗೆ ಶಿಕ್ಷಕರನ್ನು ಹಾಗೂ ಅಂಗನವಾಡಿ ಸಿಬ್ಬಂದಿಯನ್ನು ದೀರ್ಘಕಾಲ ಬಳಸುವುದು UNCRC ಅಂತರರಾಷ್ಟ್ರೀಯ ಒಪ್ಪಂದಗಳು, ಭಾರತದ ಸಂವಿಧಾನ ಮತ್ತು RTE ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಸರ್ಕಾರಿ ಶಾಲೆಯ ಮಕ್ಕಳ ಅಳಲನ್ನು ಆಲಿಸಿ, ಅವರ ಶಿಕ್ಷಣದ ಹಕ್ಕನ್ನು ರಕ್ಷಿಸುವುದು ಸರ್ಕಾರದ ಹಾಗೂ ಸಮಾಜದ ಕರ್ತವ್ಯವಾಗಿದೆ – ಕುಮಾರ್ ಶೃಂಗೇರಿ. ಹವ್ಯಾಸಿ ಬರಹಗಾರರು.

ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂಬ ಕಾಲ ಇದಲ್ಲ.  ಇಂದಿನ ಮಕ್ಕಳು ಇಂದಿನ ಪ್ರಜೆಗಳೇ ಎಂಬ ಕಾಲ ಇದು. ಇಂತಹ ಕಾಲ ಘಟದಲ್ಲಿ  ನಾವು ದೇಶದ ಭವಿಷ್ಯಕ್ಕೆ ಅಡಿಪಾಯ ಹಾಕುವ ಮೂಲಭೂತ ತತ್ವವಾದ ರಾಷ್ಟ್ರದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯು ಅಲ್ಲಿನ ಶಿಕ್ಷಣ ವ್ಯವಸ್ಥೆಯ ಮೇಲೆ, ವಿಶೇಷವಾಗಿ ಶಿಕ್ಷಣದ ಗುಣಮಟ್ಟದ ಮೇಲೆ ನೇರವಾಗಿ ಅವಲಂಬಿತವಾಗಿರುತ್ತದೆ. ಕೊಥಾರಿ ಅಯೋಗವು ಶಾಲಾ ಕೊಠಡಿಯೇ ದೇಶದ ಅಭಿವೃದ್ಧಿಯ ಕೇಂದ್ರ ವೆಂದು ಹೇಳಿತ್ತು.  ಆದರೆ ಪ್ರಸ್ತುತ ದೇಶಾದ್ಯಂತ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಗಳಿಗೆ ಸರ್ಕಾರಿ ಶಾಲಾ ಶಿಕ್ಷಕರನ್ನು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ  ಶಾಲಾ ಶೈಕ್ಷಣಿಕ ವರ್ಷ ಪ್ರಾರಂಭವಾದಾಗಿನಿಂದಲೇ ಶಿಕ್ಷಕರು ಈ ಕಾರ್ಯಗಳಲ್ಲಿ ನಿರತರಾಗಿರುವುದರಿಂದ, ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಲಕ್ಷಾಂತರ ಬಡ , ಹಿಂದುಳಿದ ಮತ್ತು ಮಧ್ಯಮ ವರ್ಗದ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ತೀವ್ರ ಹಿನ್ನಡೆಯಾಗಿದೆ. ಇದು ಮಕ್ಕಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದು, ದೇಶದ ಭವಿಷ್ಯದ ಅಭಿವೃದ್ಧಿಗೆ ಮಾರಕವಾಗಿದೆ.

ಶೈಕ್ಷಣಿಕೇತರ ಕೆಲಸಗಳ ಹೊರೆ ಮತ್ತು ಶಿಕ್ಷಣದ ಗುಣಮಟ್ಟದ ಕುಸಿತ

ಶಾಲೆ ಪ್ರಾರಂಭವಾದ ದಿನದಿಂದಲೂ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಬೋಧನಾ ಕೆಲಸ ಬಿಟ್ಟು ಬೀದಿ ಬೀದಿ ಅಲೆದು ಸಮೀಕ್ಷೆ, ನೋಂದಣಿ ಮತ್ತು ಮಾಹಿತಿ ಸಂಗ್ರಹಣೆಯಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಮೊದಲೇ ಕರ್ನಾಟಕದಲ್ಲಿ ಸುಮಾರು ಐವತ್ತು ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ ಇದೆ. ಒಂದರಿಂದ ಐದನೇ ತರಗತಿಯವರೆಗೆ ಒಂದೇ ಕೋಣೆಯಲ್ಲಿ ಒಬ್ಬ ಶಿಕ್ಷಕರು ಪಾಠಮಾಡವಂತಹ ವ್ಯವಸ್ಥೆ ಇನ್ನೂ ಜೀವಂತವಾಗಿರುವ ಈ ಕಾಲಘಟದಲ್ಲಿ  ಶಿಕ್ಷಕರನ್ನು ಈ ಎಸ್. ಐ. ಆರ್. ಪ್ರಕ್ರಿಯೆಗೆ  ತೊಡಗಿಸಿಕೊಳ್ಳ ಬೇಕಿತ್ತಾ?

ಮಗುವಿನ ಬುನಾದಿ ಶಿಕ್ಷಣ ಶುರುವಾಗುವುದೇ ಅಂಗನವಾಡಿ ಕೇಂದ್ರಗಳಿಂದ. ಇಲ್ಲಿನ ಮಕ್ಕಳಿಗೆ ಮೊದಲು ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅತ್ಯಂತ ಅವಶ್ಯಕ ಅವರ ಪೌಷ್ಟಿಕಾಂಶ ಆಹಾರ ಕಾರ್ಯಕ್ರಮಗಳು, ಲಸಿಕಾ ಕಾರ್ಯಕ್ರಮಗಳು ಇತ್ಯಾದಿ. ಬಹಳ ಮುಖ್ಯವಾಗಿ ಇವುಗಳು ಅಂಗನವಾಡಿ ಕೇಂದ್ರಗಳಲ್ಲಿ ನಡೆಯುತ್ತವೆ ಇಂತಹ ಕೆಲಸಗಳನ್ನು ದಿನನಿತ್ಯ ಮಾಡುವ ಕಾರ್ಯಕರ್ತೆಯರನ್ನು ಈ ಎಸ್. ಐ. ಆರ್. ಕಾರ್ಯದಲ್ಲಿ ತೊಡಗಿಸಿ ಅವರಿಗೂ ಮಾನಸಿಕವಾಗಿ ಹಿಂಸಿಸಿ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವುದು, ಅನೌಪಚಾರಿಕ ಶಿಕ್ಷಣ ನೀಡುವುದು ಇವುಗಳನ್ನು ಸರಿಯಾಗಿ ನಿರ್ವಹಿಸದಂತೆ ಮಾಡಿರುವ ಕ್ರಮ ನಿಜಕ್ಕೂ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ.

ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಹಿನ್ನಲೆಯನ್ನು ನೋಡಿದರೆ ಹೆಚ್ಚಿನದಾಗಿ ಅರ್ಥಿಕವಾಗಿ ಹಿಂದುಳಿದವರು, ಜಾತಿಯಲ್ಲಿ ಹಿಂದುಳಿದ ವರ್ಗದವರಾಗಿದ್ದಾರೆ. ಇಂತಹ ಮಕ್ಕಳಿಗೆ ಅಂಗನವಾಡಿಯೇ ಜ್ಞಾನ ಮತ್ತು ಪೌಷ್ಟಿಕ ಆಹಾರದ ಮೂಲವಾಗಿರುತ್ತದೆ. ಮಕ್ಕಳು ಅಲ್ಲಿಗೆ ಬಂದಾಗ ಅವರಿಗೆ ಒಂದು ಉತ್ಸಾಹವಿರಬೇಕು. ಅಲ್ಲಿ ಶಿಕ್ಷಕರೇ ಇಲ್ಲದಿದ್ದರೆ  ಎಂತಹ ಹುರುಪು ಬರುತ್ತದೆ?  ಹೀಗಾಗಿ ಮಕ್ಕಳು ಶಾಲೆಯಿಂದ ಹೊರಗುಳಿಯುವುದೇ  ಸಾಧ್ಯತೆಯೇ ಹೆಚ್ಚಿರುತ್ತದೆ.

ಶಾಲಾ ಸಿಬ್ಬಂದಿಗಳು SIR ಪ್ರಕ್ರಿಯೆಯಲ್ಲಿ- ಸಾಂದರ್ಭಿಕ ಚಿತ್ರ

ಹೀಗೆ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಅಂತಾರಾಷ್ಟ್ರೀಯ ಕಾಯ್ದೆಗಳು ಅಂದರೆ UNCRC (United Nations Convention on the Rights of the Child)  ಪ್ರಕಾರ  ಪ್ರತಿಯೊಂದು ಮಗುವಿಗೂ ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪಲು ಸೂಕ್ತ ಶಿಕ್ಷಣ, ಆರೈಕೆ ಮತ್ತು ವಿಕಸನದ ಹಕ್ಕಿದೆ. ಈ ಒಡಂಬಡಿಕೆಗೆ ಭಾರತವೂ ಕೂಡ ಬದ್ಧ. ಏಕೆಂದರೆ ಅದು ೧೯೯೨ರಲ್ಲಿಯೇ ಈ ಒಡಂಬಡಿಕೆಗೆ ಸಹಿಯನ್ನು ಹಾಕಿದೆ.

ಇದರ ಅನುಚ್ಛೇದ 3ರ  ಪ್ರಕಾರ  ಮಕ್ಕಳಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಮಗುವಿನ  ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು. ಅಂದರೆ ಮಗು ತನ್ನನ್ನು ನಂಬಿ ಸರ್ಕಾರಿ ಶಾಲೆಗೆ ಸೇರಿದೆ, ನಾವು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯವಾಗಲಿಲ್ಲವಾದರೆ ನಾವು ಮಕ್ಕಳ ಹಕ್ಕನ್ನು ಉಲಂಘನೆ ಮಾಡಿದಂತಲ್ಲವೇ?

ಅನುಚ್ಛೇದ  6ರ ಪ್ರಕಾರ  ಮಕ್ಕಳಿಗೆ ಅಭಿವೃದ್ಧಿ ಹೊಂದುವ ಹಕ್ಕು ಇದೆ. ಇದರಂತೆ ಮಕ್ಕಳಿಗೆ ಒಳ್ಳೆಯ ಪೋಷಣೆ ಮತ್ತು ಶಿಕ್ಷಣ ಸಿಗದೇ ಇದ್ದಾಗ ಮಗು ಹೇಗೆ ಅಭಿವೃದ್ಧಿಯನ್ನು ಹೊಂದುತ್ತದೆ?  ಇನ್ನೂ ಮುಖ್ಯವಾಗಿ  ಅನುಚ್ಛೇದ  28ರ ಪ್ರಕಾರ  ಪ್ರತಿಯೊಂದು ಮಗುವಿಗೂ ಶಿಕ್ಷಣ ಪಡೆಯುವ ಹಕ್ಕಿದೆ.  ಶಿಕ್ಷಣವೆಂದರೆ ಬರೀ ಶಿಕ್ಷಣವಲ್ಲ ಗುಣಾತ್ಮಕ ಶಿಕ್ಷಣ. ಅದು ಮಗುವಿಗೆ ಶಾಲಾ ವಾತಾವರಣ ಶಾಲೆಯಲ್ಲಿ ನಡೆಯುವ ಪಾಠಗಳೂ ಸೇರಿದಂತೆ. ಆದರೆ ಇಂದು ಶಾಲೆಯಲ್ಲಿ ಶಿಕ್ಷಕರಿಲ್ಲದೇ ಮಕ್ಕಳು ಹೇಗೆ ತಾನೆ ಕಲಿಯಲು ಸಾಧ್ಯ?

ನಮ್ಮ ಭಾರತೀಯ ಸಂವಿಧಾನದಲ್ಲಿ  ವಿಧಿ 21ಎ  ಪ್ರಕಾರ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಮೂಲಭೂತ ಹಕ್ಕಾಗಿದೆ ಎಂಬುದನ್ನು ಸರ್ಕಾರವು ಮರೆತಂತಿದೆ. ಇನ್ನೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ (RTE – 2009)  ಸೆಕ್ಷನ್ 27ರ ಪ್ರಕಾರ  ಶಿಕ್ಷಕರನ್ನು “ದಶವಾರ್ಷಿಕ ಜನಗಣತಿ, ದುರಂತ ಪರಿಹಾರ ಕರ್ತವ್ಯಗಳು ಹಾಗೂ ತಳಮಟ್ಟದ ಚುನಾವಣೆಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಶೈಕ್ಷಣಿಕೇತರ/ಆಡಳಿತಾತ್ಮಕ ಕೆಲಸಗಳಿಗೆ ಶಿಕ್ಷಕರನ್ನು ನಿಯೋಜಿಸುವಂತಿಲ್ಲ”.

ಆದರೆ ಸರ್ಕಾರ ಮಾಡಿದ್ದೇನು? ಎಲ್ಲವನ್ನೂ ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ತಂದು ಅವರನ್ನು ಬಲವಂತವಾಗಿ ಈ ಕೆಲಸಕ್ಕೆ ನಿಯೋಜಿಸಿ ಅವರನ್ನು  ಪಾಠ ಮಾಡಲಾಗದ ಸ್ಥಿತಿಗೆ ದೂಡಿದ್ದು ಎಷ್ಟು ಸರಿ?. ಮಕ್ಕಳಿಂದ ವೋಟಿನ ಲಾಭವಿಲ್ಲವೆಂದೇ? ಸರ್ಕಾರವೇ ತನ್ನ ಕಾಯಿದೆಯನ್ನು ಮೀರಿ ಎಸ್.ಐ.ಆರ್. ನಂತಹ ಸುದೀರ್ಘ ಸಮೀಕ್ಷೆಗಳಿಗೆ ಶಿಕ್ಷಕರನ್ನು ಬಳಸುವುದು ಕಾನೂನುಬಾಹಿರ ಹಾಗೂ ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆಯಾಗಿದೆ.

ಇದನ್ನು ನಾವು ಚಿಕ್ಕ ವಿಷಯವಾಗಿ ತೆಗೆದು ಕೊಳ್ಳಬಾರದು. ಏಕೆಂದರೆ  ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳು ಒಳ್ಳೆಯ ಕೊಠಡಿಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು  ಪಡೆಯುತ್ತಿರುವಾಗ, ಸರ್ಕಾರಿ ಶಾಲೆಯ ಬಡ ಮಕ್ಕಳು ಶಿಕ್ಷಕರಿಲ್ಲದೆ ಹಿಂದುಳಿಯುತ್ತಾರೆ. ಇದು ಸಮಾಜದಲ್ಲಿ ಶೈಕ್ಷಣಿಕ ಮತ್ತು ಆರ್ಥಿಕ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಗುಣಮಟ್ಟದ ಶಿಕ್ಷಣ ಸಿಗದಿದ್ದರೆ, ಮುಂದಿನ ಪೀಳಿಗೆಯು ನಾವೀನ್ಯತೆ, ಕೌಶಲ ಮತ್ತು ಜಾಗತಿಕ ಸ್ಪರ್ಧೆಗಳಲ್ಲಿ ಹಿಂದುಳಿಯುತ್ತದೆ. ಇದರಿಂದ ದೇಶದ ಆರ್ಥಿಕ ಪ್ರಗತಿ ಮಂದಗತಿಯಲ್ಲಾಗುತ್ತದೆ. ತಳಮಟ್ಟದ ಶಿಕ್ಷಣ ಕುಸಿದರೆ ದೇಶದಲ್ಲಿ ನಿರುದ್ಯೋಗ, ಬಡತನ ಮತ್ತು ಅಪರಾಧಗಳ ಸಂಖ್ಯೆ ಹೆಚ್ಚಾಗುವ ಆತಂಕವಿರುತ್ತದೆ.

ಸರ್ಕಾರಗಳು ಮಕ್ಕಳ ಹಕ್ಕುಗಳನ್ನು ನಿರ್ಲಕ್ಷಿಸದೇ ಮುಂದಿನ ದಿನಗಳಲ್ಲಿ ಸಮೀಕ್ಷೆ, ನೋಂದಣಿ ಮತ್ತು ಆಡಳಿತಾತ್ಮಕ ಕೆಲಸಗಳಿಗಾಗಿ ಗುತ್ತಿಗೆ ಆಧಾರದ ಮೇಲೆ ಪ್ರತ್ಯೇಕ ಯುವಕರನ್ನು ಅಥವಾ ನಿರುದ್ಯೋಗಿ ಪದವೀಧರರನ್ನು ನಿಯೋಜಿಸಬೇಕು. ಡಿಜಿಟಲ್ ತಂತ್ರಜ್ಞಾನ ಮತ್ತು ಆನ್‌ಲೈನ್ ನಮೂನೆಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು.

ಶಾಲೆ ಪ್ರಾರಂಭವಾದ ತಕ್ಷಣ ಶಿಕ್ಷಕರನ್ನು ಕೇವಲ ಬೋಧನೆ, ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ತರಗತಿ ನಿರ್ವಹಣೆಗೆ ಮಾತ್ರ ಸೀಮಿತಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಕೇವಲ ಮಕ್ಕಳ ಪೋಷಣೆ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಬಳಸಿಕೊಳ್ಳಬೇಕು.

ಮಕ್ಕಳು ದೇಶದ ಆಸ್ತಿ. ಅವರ ಇಂದಿನ ಹಕ್ಕುಗಳನ್ನು ಕಸಿದುಕೊಂಡು ನಾಳೆಯ ಸಮೃದ್ಧ ಭಾರತವನ್ನು ನಿರ್ಮಿಸಲು ಸಾಧ್ಯವಿಲ್ಲ. ಎಸ್.ಐ.ಆರ್. ನಂತಹ ಕೆಲಸಗಳಿಗೆ ಶಿಕ್ಷಕರನ್ನು ಹಾಗೂ ಅಂಗನವಾಡಿ ಸಿಬ್ಬಂದಿಯನ್ನು ದೀರ್ಘಕಾಲ ಬಳಸುವುದು UNCRC ಅಂತರರಾಷ್ಟ್ರೀಯ ಒಪ್ಪಂದಗಳು, ಭಾರತದ ಸಂವಿಧಾನ ಮತ್ತು RTE ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಸರ್ಕಾರಿ ಶಾಲೆಯ ಮಕ್ಕಳ ಅಳಲನ್ನು ಆಲಿಸಿ, ಅವರ ಶಿಕ್ಷಣದ ಹಕ್ಕನ್ನು ರಕ್ಷಿಸುವುದು ಸರ್ಕಾರದ ಹಾಗೂ ಸಮಾಜದ ಕರ್ತವ್ಯವಾಗಿದೆ. ಸರ್ಕಾರ ತಕ್ಷಣವೇ ಎಚ್ಚೆತ್ತು ಶಿಕ್ಷಕರನ್ನು ಶೈಕ್ಷಣಿಕೇತರ ಕೆಲಸಗಳಿಂದ ಮುಕ್ತಗೊಳಿಸಿ, ದೇಶದ ಭವಿಷ್ಯವಾದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕಿದೆ. (ಇತ್ತೀಚೆಗೆ ಬೆಂಗಳೂರಿನ ಊಡಿ ಶಾಲೆಯ ಮಕ್ಕಳು ಶಾಲೆಯಲ್ಲಿ ಪಾಠ ಮಾಡದಿರುವ ಬಗ್ಗೆ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಬಂದಿದ್ದನ್ನು ಗಮನಿಸಬಹುದಾಗಿದೆ. ಸರ್ಕಾರವು ಈ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕಾಗಿದೆ. ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸಬೇಕಾಗಿದೆ.  ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ.

ಕುಮಾರ್ ಶೃಂಗೇರಿ.

ಹವ್ಯಾಸಿ ಬರಹಗಾರರು
ಇದನ್ನೂ ಓದಿ-  ಪಶ್ವಿಮ ಘಟ್ಟ ಉಳಿಸುವ ನೆಪದಲ್ಲಿ ಹೀಗೊಂದು…

More articles

Latest article

Most read