Saturday, July 27, 2024

ಪ್ರಶಾಂತ್‌ ಕಿಶೋರ್‌ ಬಿಜೆಪಿ ಸೇರ್ಪಡೆ ಎಂಬ ಸುಳ್ಳು ಸುದ್ದಿ ಎಲ್ಲೆಡೆ ವೈರಲ್‌

Most read

ಭಾರತೀಯ ಜನತಾ ಪಕ್ಷ (ಬಿಜೆಪಿ) ಚುನಾವಣಾ ತಂತ್ರಗಾರ ಮತ್ತು ರಾಜಕಾರಣಿ ಪ್ರಶಾಂತ್ ಕಿಶೋರ್ ಅವರನ್ನು ತಮ್ಮ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿದೆ ಎಂದು ಹೇಳುವ ಆದೇಶ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪ್ರಶಾಂತ್‌ ಕಿಶೋರ್‌ ಅವರನ್ನು ನಿಜವಾಗಿಯೂ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಿದೆ ಎಂದು ತಿಳಿದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿಯನ್ನು ಶೇರ್‌ ಮಾಡಿಕೊಂಡಿದ್ದಾರೆ. ಆದರೆ ಬಿಜೆಪಿಯ ಪತ್ರ ನಕಲಿ ಎಂದು ಪ್ರಶಾಂತ್ ಕಿಶೋರ್ ಅವರ ಪಕ್ಷ ಜನ್ ಸೂರಾಜ್ ಸ್ಪಷ್ಟನೆ ನೀಡಿದೆ.

“ಸಾಂಸ್ಥಿಕ ನೇಮಕಾತಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ಶ್ರೀ ಪ್ರಶಾಂತ್ ಕಿಶೋರ್ ಅವರನ್ನು ಬಿಜೆಪಿಯ ರಾಷ್ಟ್ರೀಯ ಮುಖ್ಯ ವಕ್ತಾರರನ್ನಾಗಿ ನೇಮಿಸಿದ್ದಾರೆ. ಈ ನೇಮಕಾತಿ ತಕ್ಷಣವೇ ಜಾರಿಗೆ ಬರುತ್ತದೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣಗ ಸಿಂಗ್‌ ಸಹಿ ಹಾಕಿರುವ ಬಿಜೆಪಿ ಲೆಟರ್ ಹೆಡ್ ಅನ್ನು ಹಲವಾರು ಬಳಕೆದಾರರು X ಮತ್ತು Facebook ನಲ್ಲಿ ಹಂಚಿಕೊಂಡಿದ್ದಾರೆ.

2014ರಲ್ಲಿ ಪ್ರಶಾಂತ್‌ ಕಿಶೋರ್‌ ಬಿಜೆಪಿಗೆ ಚುನಾವಣಾ ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ. ಅದಾದ ನಂತರ ಅವರು ವಿರೋಧ ಪಕ್ಷಗಳಾದ ಟಿಎಂಸಿ, ಜೆಡಿಯು ಮತ್ತು ಡಿಎಂಸಿ, ಎಎಪಿ ಇನ್ನಿತರೆ ಪಕ್ಷಗಳ ಜೊತೆ ಚುನಾವಣಾ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ.

ನಂತರ ಈ ಸುದ್ದಿ ಮೊದಲು ಎಲ್ಲಿ ಶೇರ್‌ ಆಗಿರಬಹುದು ಎಂದು ಸತ್ಯ ಶೋಧ ನಡೆಸಿದಾಗ, jharkhand.mukti.morcha.fan ಎಂಬ ಬಳಕೆದಾರರ ಪೇಜ್‌ ನಲ್ಲಿ ಇದು ಪೋಸ್ಟ್‌ ಆಗಿದ್ದು ಅಲ್ಲಿಂದ ದೇಶಾದ್ಯಂತ ವ್ಯಾಪಕ ಹಂಚಿಕೆಯಾಗಿದೆ.

ಸುಳ್ಳು ಸುದ್ದಿ ಹಂಚಿದ ಕಾಂಗ್ರೆಸ್‌ ನಾಯಕನಿಗೆ ಪ್ರಶಾಂತ್‌ ಪಕ್ಷದಿಂದ ಟೀಕೆ

ಪ್ರಶಾಂತ್ ಕಿಶೋರ್ ಅವರ ಪಕ್ಷವೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿತು, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ನಕಲಿ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಶಾಂತ್ ಪಕ್ಷದ ಜಾನ್ ಸೂರಾಜ್, ವಾಟ್ಸಾಪ್‌ನಲ್ಲಿ ಹಿರಿಯ ಕಾಂಗ್ರೆಸ್ ನಾಯಕರಿಂದ ಬಂದಿದ್ದ ಮೆಸೇಜ್‌ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್‌ ಮಾಡುವ ಮೂಲಕ ಕಾಂಗ್ರೆಸ್‌ ಅನ್ನು ಟೀಕಿಸಿದ್ದಾರೆ.

“ವಿಪರ್ಯಾಸ ನೋಡಿ! ಕಾಂಗ್ರೆಸ್, ರಾಹುಲ್ ಗಾಂಧಿ ನೀವೆಲ್ಲರೂ ಸುಳ್ಳು ಸುದ್ದಿಗಳ ಬಗ್ಗೆ ಮಾತನಾಡುತ್ತೀರಿ. ಅದರ ಬಲಿಪಶುಗಳ ಬಗ್ಗೆ ಹೇಳಿತ್ತಿದ್ದಾರೆ. ಈಗ ಕಾಂಗ್ರೆಸ್ ಪಕ್ಷದ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್, ಮೇಲ್ನೋಟಕ್ಕೆ ಹಿರಿಯ ನಾಯಕ, ಖುದ್ದಾಗಿ ನಕಲಿ ದಾಖಲೆಯನ್ನು ಹೇಗೆ ಹಂಚುತ್ತಿದ್ದಾರೆ ಮಾಡುತ್ತಿದ್ದಾರೆ ಎಂಬುದನ್ನು ನೀವೇ ನೋಡಿ. ” ಎಂದು ಪಕ್ಷವು ಕಾಂಗ್ರೆಸನ್ನು ಟೀಕಿಸಿ ಪೋಸ್ಟ್‌ ಮಾಡಿದ್ದಾರೆ.

ಮಂಗಳವಾರ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕಿಶೋರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಗೆಲುವಿನ ಬಗ್ಗೆ ಭವಿಷ್ಯ ನುಡಿದ ನಂತರ ಈ ಚಿತ್ರ ವೈರಲ್ ಆಗಿದೆ . ಆದರೆ ಬಿಜೆಪಿಯ ಪತ್ರ ನಕಲಿ ಎಂದು ಪ್ರಶಾಂತ್ ಕಿಶೋರ್ ಅವರ ಪಕ್ಷ ಜನ್ ಸೂರಾಜ್ ಸ್ಪಷ್ಟನೆ ನೀಡಿದೆ.

More articles

Latest article