Wednesday, June 12, 2024

ರೇವ್ ಪಾರ್ಟಿಯಲ್ಲಿ ಇದ್ದದ್ದು ನಾನಲ್ಲ.. ನಾನಲ್ಲ ಎಂದವರ ರಿಪೋರ್ಟ್ ಪಾಸಿಟಿವ್..!

Most read

ಬೆಂಗಳೂರು: ಇತ್ತಿಚೆಗಷ್ಟೇ ಹೊರವಲಯದ ಫಾರ್ಮ್ ಹೌಸ್ ನಲ್ಲಿ ದೊಡ್ಡಮಟ್ಟದಲ್ಲಿಯೇ ರಡೆವ್ ಪಾರ್ಟಿ ನಡೆದಿತ್ತು. ಇದರ ಪಕ್ಕಾ ಮಾಹಿತಿ ಪಡೆದಿದ್ದ ಪೊಲೀಸರು ದಾಳಿ ಮಾಡಿ, ಹಲವರನ್ನು ಅರೆಸ್ಟ್ ಮಾಡಿದ್ದರು. ಇದರಲ್ಲಿ ನಟ-ನಟಿಯರು ಸೇರಿದಂತೆ ಡಿಜೆಗಳು ತಗಲಾಕಿಕೊಂಡಿದ್ದರು. ತೆಲುಗು ನಟಿಯರ ವಿಡಿಯೋ ಹೊರ ಬೀಳುತ್ತಿದ್ದಂತೆ ಅಲ್ಲಿದ್ದವರು ನಾವಲ್ಲ ಅಂತ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಿಟ್ಟಿದ್ದರು. ಇದೀಗ ಆ ನಟಿಯರದ್ದು ಪಾಸಿಟಿವ್ ರಿಪೋರ್ಟ್ ಬಂದಿದೆ.

ರೇವ್ ಪಾರ್ಟಿಯಲ್ಲಿ ಸಿಕ್ಕ ಎಲ್ಲರಿಗೂ ಪೊಲೀಸ್ ಇಲಾಖೆ ವೈದ್ಯಕೀಯ ತಪಾಸಣೆ ಮಾಡಿಸಿದೆ. ಡ್ರಗ್ಸ್ ಸೇವನೆ ಮಾಡಿದ್ದಾರಾ ಎಂಬುದಕ್ಕೆ ರಕ್ತಪರೀಕ್ಷೆಯನ್ನು ಮಾಡಿದ್ದಾರೆ. ಬ್ಲಡ್ ಟೆಸ್ಟ್ ವರದಿ ಪೊಲೀಸರ ಕೈ ಸೇರಿದ್ದು, ತೆಲುಗು ನಟಿ ಹೇಮಾ ಹಾಗೂ ಆಶು ರೈ ರಿಪೋರ್ಟ್ ನಲ್ಲಿ ಪಾಸಿಟಿವ್ ಬಂದಿದೆ. ಈ ಮೂಲಕ ಇಬ್ಬರು ನಟಿಯರು ಕೂಡ ಡ್ರಗ್ಸ್ ಸೇವಿಸಿರುವುದು ನಿಜವಾಗಿದೆ.

ಸಿಸಿಬಿ ತಂಡ 103 ಜನರ ಪೈಕಿ 98 ಜನರ ಬ್ಲಡ್ ರಿಪೋರ್ಟ್ ಕಳುಹಿಸಿತ್ತುಮ ಅದರಲ್ಲಿ 86 ಜನರ ಬ್ಲಡ್ ನಲ್ಲಿ ಡ್ರಗ್ಸ್ ಇರುವುದು ಪತ್ತೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿಯ ಪೊಲೀಸ್ ಇನ್ಸ್‌ಪೆಕ್ಟರ್ ಮೊಹನ್ಮದ್ ಮುಕಾರಂ ಅವರಿಗೆ ಇನ್ಫಾರ್ಮರ್ ಕಡೆಯಿಂದ ಮಾಹಿತಿ ಸಿಕ್ಕಿತ್ತು. ಕೂಡಲೇ ಈ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಿ, ದಾಳಿ ಮಾಡಿಸಿದ್ದಾರೆ. ಮಾಹಿತಿಯಂತೆ ಅಲ್ಲಿ ಎಂಡಿಎಂಎ ಪಿಲ್ಸ್, ಹೈಡ್ರೋಗಾಂಜಾ ಸೇರಿದಂತೆ ಹಲವು ರೀತಿಯ ಡ್ರಗ್ಸ್ ಪತ್ತೆಯಾಗಿದೆ. ಜಿ ಆರ್ ಫಾರ್ಮ್ ಹೌಸ್ ನಲ್ಲಿ ಈ ಪಾರ್ಟಿ ಆಯೋಜನೆಯಾಗಿತ್ತು. ಇದೀಗ ಪಾರ್ಟಿಯಲ್ಲಿದ್ದವರ ವರದಿ ಬಂದಿದ್ದು, ಪಾಸಿಟವ್ ಆಗಿದೆ.

More articles

Latest article