Saturday, May 18, 2024

ಮಿಸ್ಟರ್ ಅನಂತ್ ಕುಮಾರ್ ಹೆಗಡೆ ನಾನೇ ಶಿರಸಿಗೆ ಬರ್ಲ ಅಥವಾ ನೀವೇ ಬೆಂಗ್ಳೂರಿಗೆ ಬರ್ತಿರ? : ಪ್ರದೀಪ್ ಈಶ್ವರ್ ಸವಾಲ್

Most read

ಡಿಕೆಶಿ ಹಾಗೂ ಸಿದ್ದರಾಮಯ್ಯ ಇಬ್ಬರೂ ನನ್ನ ರಾಜಕೀಯ ಜೀವನದ ಎರಡು ಕಣ್ಣಗಳು. ಸಿದ್ದರಾಮಯ್ಯ ಸಾಹೇಬ್ರು ಬಗ್ಗೆ ಯಾರೇ ಮಾತನಾಡಿದ್ರೂ ಸುಮ್ಮನಿರಲ್ಲ. ಅನಂತ್ ಕುಮಾರ್ ಹೆಗಡೆ ಸಂಸ್ಕೃತಿ ಬಗ್ಗೆ ಮಾತನಾಡಿದ್ದೀರಾ? ಬನ್ನಿ ನನ್ನ ಜೊತೆ ಮೊದಲು ಚರ್ಚೆಗೆ ಬನ್ನಿ ಗೆದ್ದರೆ ನಿಮ್ಮನ್ನು ಸಿದ್ದರಾಮಯ್ಯ ಅವರ ಬಳಿ ನಾನೇ ಕರ್ಕೊಂಡ್ ಹೋಗ್ತಿ‌ನಿ ಎಂದು ಸವಾಲು ಹಾಕಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ನಾವು ಗೌರವ ಕೊಡ್ತಾ ಇದ್ದೇವೆ ಅಂದ್ರೆ, ಅದರ ಅರ್ಥ ನೀವು ಆ ಗೌರವಕ್ಕೆ ಅರ್ಹರು ಅಂತಲ್ಲ. ಮಿಸ್ಟರ್ ಅನಂತ್ ಕುಮಾರ್ ಹೆಗಡೆ ಅವರೇ ಬನ್ನಿ ಬಹಿರಂಗ ಚರ್ಚೆಗೆ ನಾನೇ ಶಿರಸಿಗೆ ಬರಲಾ? ನೀವೇ ಬೆಂಗಳೂರಿಗೆ ಬರ್ತೀರಾ ಎಂದು ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ಜೊತೆ ಚರ್ಚೆಗೆ ಮೊದಲು ನನ್ನ ಜೊತೆ ಚರ್ಚೆಗೆ ಬನ್ನಿ. ಆ ಚರ್ಚೆಯಲ್ಲಿ ನೀವು ಗೆದ್ದರೆ ನಾನೇ ಸಿದ್ದರಾಮಯ್ಯ ಅವರ ಬಳಿ ಕರೆದೊಯ್ಯುತ್ತೇನೆ ಎಂದು ಪ್ರತಿ ಸವಾಲು ಹಾಕಿದ್ದಾರೆ.

ಕಳೆದ ವರ್ಷ ಮೋದಿ ಅವರು ಅಂಕೋಲಾಗೆ ಬಂದಾಗ ಕನಿಷ್ಠ ಅವರಿಗೆ ಸ್ವಾಗತ ಮಾಡಲಿಲ್ಲ. ಇದೇನಾ ನೀವು ನಿಮ್ಮ ನಾಯಕನಿಗೆ ಕೊಡೋ ಗೌರವ? ಇದೇನ ನಿಮ್ಮ ಸಂಸ್ಕೃತಿ ಎಂದು ಟೀಕಿಸಿದ್ದಾರೆ.

More articles

Latest article