Saturday, December 7, 2024

ಹೊಂಬಾಳೆ ‌ಜೊತೆಗೆ ಪ್ರಭಾಸ್‌ ಹೊಸ ಮೂರು ಚಿತ್ರಗಳು : ಯಾವಾಗ?

Most read

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’​​​ ಇದೀಗ ಪ್ಯಾನ್​ ಇಂಡಿಯಾ ಸೂಪರ್ ಸ್ಟಾರ್​ ಪ್ರಭಾಸ್​​ ಅವರೊಂದಿಗೆ ಮೂರು ಹೊಸ ಸಿನಿಮಾಗಳನ್ನು ಮಾಡುವುದಾಗಿ ಘೋಷಿಸಿದೆ.

ಈಗಾಗಲೇ ಕೆಜಿಎಫ್​, ಕಾಂತಾರ, ಸಲಾರ್​ ನಂತಹ ಸಿನಿಮಾಗಳಿಂದ ಸಾಕಷ್ಟು ಹೆಸರು ಮಾಡಿರುವ ಹೊಂಬಾಳೆ ಫಿಲ್ಮ್ಸ್‌​ ಸೋಷಿಯಲ್​ ಮೀಡಿಯಾದಲ್ಲಿ ಸೂಪರ್‌ ಸ್ಟಾರ್‌ ಪ್ರಭಾಸ್‌-ಪ್ರಶಾಂತ್‌ ನೀಲ್‌  ಜೊತೆಗಿನ ಕಾಂಬಿನೇಷನ್‌ನಲ್ಲಿ ಮುಂದಿನ ಸಿನಿಮಾದ ಬಗ್ಗೆ ಮತ್ತು 2026ಕ್ಕೆ ಸಲಾರ್‌2 ಸಿನಿಮಾ ಬರಲಿದೆ ಎಂದು ಪೋಸ್ಟ್​ ಶೇರ್​ ಮಾಡಿದೆ.

ಕನ್ನಡ ಹಾಗೂ ತೆಲುಗಿನಲ್ಲಿ ಶ್ರೀಮುರಳಿ ಅಭಿನಯದ ʼಬಘೀರʼ ಸಿನಿಮಾ ಸದ್ದು ಮಾಡುತ್ತಿರುವ ಬೆನ್ನಲ್ಲೆ ಹೊಂಬಾಳೆ ಈ ಘೊಷಣೆ ಮಾಡಿದೆ. ಬರುವ ಮೂರು ವರ್ಷಗಳು ಅಂದರೇ, 2026, 2027, 2028 ರಂದು ಪ್ರಬಾಸ್‌ ಜೊತೆಗೆ ಸಿನಿಮಾ ನಿರ್ಮಾಣ ಮಾಡಲಿದ್ದೇವೆ ಎಂದು ಘೋಷಿಸಿಕೊಂಡಿದೆ.

ಪ್ಯಾನ್ ಇಂಡಿಯನ್ ಮಟ್ಟದಲ್ಲಿ ಸಾಕಷ್ಟು ಖ್ಯಾತಿ ಹೊಂದಿರುವ ಪ್ರಭಾಸ್ ಅವರು ಹೊಂಬಾಳೆ ಫಿಲ್ಮ್ಸ್ ಜೊತೆಗೆ ಮೂರು ಬಿಗ್​ ಪ್ರಾಜೆಕ್ಟ್​ಗೆ ಸಹಿ ಹಾಕಿದ್ದಾರೆ. ಆ್ಯಕ್ಷನ್-ಪ್ಯಾಕ್ಡ್ ”ಸಲಾರ್ 2” ಮಹತ್ವದ ಪ್ರಾಜೆಕ್ಟ್​ಗಳಲ್ಲೊಂದು. 2023ರ ಕೊನೆಗೆ ತೆರೆಕಂಡ ಈ ಚಿತ್ರದ ಸೀಕ್ವೆಲ್​​​ ಬರೋದು ನಿಮಗೆ ತಿಳಿದಿರುವ ವಿಚಾರವೇ. ಇಂದು ಅನೌನ್ಸ್ ಮಾಡಿರುವ ಮೂರು ಸಿನಿಮಾಗಳಲ್ಲಿ ಸಲಾರ್​ 2 ಕೂಡಾ ಒಂದು. ಬಹುನಿರೀಕ್ಷಿತ ಸಲಾರ್ 2 ಮತ್ತು ಎರಡು ಹೆಚ್ಚುವರಿ ಸಿನಿಮಾಗಳನ್ನೊಳಗೊಂಡಿರುವ ಈ ಒಪ್ಪಂದವು ಪ್ರಭಾಸ್ ಮತ್ತು ಹೊಂಬಾಳೆ ಸಂಸ್ಥೆಗಳೆರಡಕ್ಕೂ ಹೊಸ ಅಧ್ಯಾಯದ ಆರಂಭವನ್ನು ಸೂಚಿಸಿದೆ. ಈ ಸಿನಿಮಾಗಳು ಕ್ರಮವಾಗಿ 2026, 2027 ಮತ್ತು 2028ರಲ್ಲಿ ಚಿತ್ರಮಂದಿರ ಪ್ರವೇಶಿಸಲಿದೆ.

More articles

Latest article