Saturday, December 7, 2024

ಕ್ರೈಂ ಪ್ಯಾಟ್ರೋಲ್‌ ಖ್ಯಾತಿಯ ಕಿರುತೆರೆ ನಟ ನಿತಿನ್‌ ಚೌಹಾಣ್‌ ಆತ್ಮಹತ್ಯೆ

Most read

ಕ್ರೈಂ ಪ್ಯಾಟ್ರೋಲ್ ಖ್ಯಾತಿಯ ನಟ ನಿತಿನ್ ಚೌಹಾಣ್ ಮುಂಬೈನಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 35 ವರ್ಷದ ನಿತಿನ್‌ ಸಾವು ಈಗಾಗಲೇ ಹಲವರನ್ನು ಅಚ್ಚರಿ ಉಂಟುಮಾಡಿದೆ.

‘ದಾದಾಗಿರಿ 2’ ಎಂಬ ರಿಯಾಲಿಟಿ ಶೋ ಗೆದ್ದ ನಂತರ ನಿತಿನ್ ಸಾಕಷ್ಟು ಜನಪ್ರಿಯರಾಗಿದ್ದರು. ನಿತಿನ್ ಮೂಲತಃ ಉತ್ತರ ಪ್ರದೇಶದ ಅಲಿಗಢಕ್ಕೆ ಸೇರಿದವರಾಗಿದ್ದಾರೆ.

ನಿತಿನ್‌ ಅವರ ಆತ್ಮಹತ್ಯೆ ಕಾರಣ ತಿಳಿದುಬಂದಿಲ್ಲ. ಪೊಲೀಸರ ತನಿಖೆಯಿಂದ ಸರಿಯಾದ ಮಾಹಿತಿ ಹೊರಬರುತ್ತದೆ ಎಂದು ಅವರ ಸ್ನೇಹಿತರು, ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

More articles

Latest article