Saturday, December 7, 2024

ಬೋಯಿಂಗ್‌ ಬೆಂಗಳೂರಿನ ಐಡೆಂಟಿಟಿಯನ್ನೇ ಬದಲಿಸಲಿದೆ : ಪ್ರಧಾನಿ ಮೋದಿ

Most read

ಬೋಯಿಂಗ್‌ ಫೆಸಿಲಿಟಿ ಕೇವಲ ಒಂದು ಕಂಪನಿ ಮಾತ್ರವಲ್ಲ. ಬೆಂಗಳೂರಿನ ಐಡೆಂಟಿಟಿಯನ್ನು ಸಂಪೂರ್ಣವಾಗಿ ಇದು ಬದಲಿಸುವ ವಿಶ್ವಾಸ ನನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬೆಂಗಳೂರಿನ ಬಿ.ಮಾರೇನಹಳ್ಳಿಯಲ್ಲಿ ಬೋಯಿಂಗ್ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಅವರು, ವೈಮಾನಿಕ ಕ್ಷೇತ್ರದಲ್ಲಿ ಭಾರತ ಲೀಡರ್ ಆಗಬೇಕು. ಬೆಂಗಳೂರು ಭಾರತವನ್ನು ಜಗತ್ತಿನೊಂದಿಗೆ ಜೋಡಿಸಲು ಸಹಾಯ ಮಾಡುತ್ತಿದೆ. ಅಮೆರಿಕ ನಂತರ ಬೆಂಗಳೂರಿನಲ್ಲಿ ದೊಡ್ಡ ಕ್ಯಾಂಪಸ್ ಬಂದಿದ್ದು, ಭಾರತದ ಪ್ರತಿಭೆಗಳನ್ನು ಇದು ಪ್ರೇರೇಪಿಸುತ್ತಿದೆ ಎಂದು ಹೇಳಿದ್ದಾರೆ.

ಭಾರತ ತನ್ನದೇ ವಿಮಾನ ನಿರ್ಮಾಣ ಮಾಡಲಿದೆ. ಕರ್ನಾಟಕದಲ್ಲೇ ವಿಶ್ವದ ದೊಡ್ಡ ಹೆಲಿಕ್ಯಾಪ್ಟರ್ ಘಟಕ ಇದೆ. ವೈಮಾನಿಕ ಕ್ಷೇತ್ರದಲ್ಲಿ ಬೆಂಗಳೂರು ಬೆಳೆದು ನಿಲ್ಲುತ್ತಿದೆ. ವೈಮಾನಿಕ ಕ್ಷೇತ್ರದಲ್ಲಿ ಮಹಿಳಾ ಭಾಗಿದಾರಿಕೆ ಹೆಚ್ಚಬೇಕು. ಸ್ತ್ರೀ ನೇತೃತ್ವದ ಅಭಿವೃದ್ಧಿ ಇಂದಿನ ಅಗತ್ಯವಿದ್ದು, ದೇಶದಲ್ಲಿ ಇಂದು ಶೇ.15ರಷ್ಟು ಮಹಿಳಾ ಪೈಲೆಟ್ ಇದ್ದಾರೆ. ಮಹಿಳಾ ಪೈಲೆಟ್ ಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕು ಎಂದು ಹೇಳಿದ್ದಾರೆ.

ಆಕಾಂಕ್ಷೆಗಳನ್ನು ನಾವೀನ್ಯತೆ ಮತ್ತು ಸಾಧನೆಯೊಂದಿಗೆ ಸಂಪರ್ಕಿಸುವ ನಗರ ಬೆಂಗಳೂರು. ಬೆಂಗಳೂರು ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಜಾಗತಿಕ ಬೇಡಿಕೆಯೊಂದಿಗೆ ಸಂಪರ್ಕಿಸುತ್ತದೆ. ಈ ಹೊಸ ಬೋಯಿಂಗ್ ಕ್ಯಾಂಪಸ್ ಬೆಂಗಳೂರಿನ ಗುರುತನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.

ಬೋಯಿಂಗ್ ಸೆಂಟರ್ ಮೂಲಕ ಸ್ತ್ರೀ ಪಾಲುದಾರಿಕೆ ಹೆಚ್ಚಳದ ನಿರೀಕ್ಷೆ ಇದೆ. ಸರ್ಕಾರಿ ಸ್ಕೂಲ್ ಗಳಲ್ಲಿ ಕೋಚಿಂಗ್ ಸೌಲಭ್ಯ ಸಿಗಲಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ದೇವನಹಳ್ಳಿಯಲ್ಲಿ 1600 ಕೋಟಿ ರೂಪಾಯಿ ವೆಚ್ಚದಲ್ಲಿ 43 ಎಕರೆ ಪ್ರದೇಶದಲ್ಲಿ ಬೋಯಿಂಗ್‌ ನಿರ್ಮಾಣವಾಗಿದೆ.

More articles

Latest article