Saturday, July 27, 2024

ಪ್ರಧಾನಿ ಮೋದಿ ಸುಳ್ಳು ಭರವಸೆ : ತಮಿಳುನಾಡಿನಲ್ಲಿ ಪಕೋಡ, ವಡೆ ಪ್ರತಿಭಟನೆ

Most read

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸುಳ್ಳು ಭರವಸೆ, ಆಡಳಿತ ವೈಫಲ್ಯ ಖಂಡಿಸಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಭಾನುವಾರ ವಿಭಿನ್ನ ಪ್ರತಿಭಟನೆ ನಡೆಸಲಾಯಿತು. ರಸ್ತೆಯಲ್ಲೆ ಪಕೋಡ, ವಡೆ ಮಾಡಿ ಸಾರ್ವಜನಿಕರಿಗೆ ಹಂಚಿ, ನಿರುದ್ಯೋಗ ಸಮಸ್ಯೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಡಿಎಂಕೆ ಕಾರ್ಯಕರ್ತರು ಮತ್ತು ಬೆಂಬಲಿಗರು ಮೋದಿ ಮುಖವಾಡ ಧರಿಸಿ ಪಕೋಡ, ಮತ್ತು ವಡೆ ತಯಾರಿಸಿ ಸಾರ್ವಜನಿಕರಿಗೆ ವಿತರಿಸಿದರು. ಬಿಜೆಪಿಯು ಜನರನ್ನು ದಾರಿತಪ್ಪಿಸುವ ಅಥವಾ ಸುಳ್ಳು ಭರವಸೆಗಳನ್ನು ಮೋಸ ಮಾಡುತ್ತಿರುವ ಸಂಕೇತವಾಗಿ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು.

ಫೆಬ್ರವರಿ 27 ಮತ್ತು ಫೆಬ್ರವರಿ 28 ರಂದು ಪಿಎಂ ಮೋದಿಯವರು ತಿರುಪ್ಪೂರ್ ಮತ್ತು ತಿರುನೆಲ್ವೇಲಿಗೆ ಭೇಟಿ ನೀಡಿ, ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ತಮಿಳುನಾಡು ಸರ್ಕಾರವು ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು. ಇದೆಲ್ಲವೂ ಸುಳ್ಳು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಕೇಂದ್ರದಿಂದ ಬರಬೇಕಾದ ಪಾಲು ಮತ್ತು ಸವಲತ್ತುಗಳೇ ಬರುತ್ತಿಲ್ಲ. ಇನ್ನು ಯೋಜನೆಗಳನ್ನು ಎಲ್ಲಿ ತರುತ್ತಾರೆ ಎಂದು ಪ್ರತಿಭಟನೆಯಲ್ಲಿ ಡಿಎಂಕೆ ಕಾರ್ಯಕರ್ತರು ಕಿಡಿಕಾರಿದ್ದಾರೆ.

ಡಿಎಂಕೆ ಕಾರ್ಯಕರ್ತರು ಪ್ರಧಾನಿ ಮೋದಿಯವರ ಮುಖವಾಡವನ್ನು ಧರಿಸಿ, ಪ್ರಧಾನಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂಬ ಹೇಳಿಕೆಯನ್ನು ಹಿಡಿದುಕೊಂಡಿದ್ದಾರೆ.

ಪ್ರತಿ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂ., ಮಧುರೈನಲ್ಲಿ ಏಮ್ಸ್ ನಿರ್ಮಾಣ ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿಯ ಭರವಸೆಗಳು ಸುಳ್ಳು ಆಶ್ವಾಸನೆಗಳಲ್ಲದೆ ಬೇರೇನೂ ಅಲ್ಲ ಎಂದು ಡಿಎಂಕೆ ಕಾರ್ಯಕರ್ತರು ಟೀಕಿಸಿದ್ದಾರೆ.

More articles

Latest article