Saturday, July 27, 2024

ಬಾಂಬ್ ಸ್ಫೋಟದಿಂದ ತತ್ತರಿಸಿದ್ದ ರಾಮೇಶ್ವರಂ ಕೆಫೆ ಮಾರ್ಚ್ 8ಕ್ಕೆ ಪುನರಾರಂಭ: ಸಿಇಒ ರಾಘವೇಂದ್ರ ರಾವ್

Most read

ಬೆಂಗಳೂರಿನ ರಾಮೇಶ್ವರಂ ಕೆಫೆ ಐಇಡಿ ಸ್ಫೋಟಕ್ಕೆ ಶುಕ್ರವಾರ ಒಳಗಾಗಿದ್ದು, ಮಹಾಶಿವರಾತ್ರಿಯಂದು ಪುನರಾರಂಭವಾಗಲಿದೆ. ಮಾರ್ಚ್ 8 ರಿಂದ ಎಂದಿನಂತೆ ಸಾರ್ವಜನಿಕರು ಬರಬಹುದು ಎಂದು ಸಹ ಸಂಸ್ಥಾಪಕ ಮತ್ತು ಸಿಇಒ ರಾಘವೇಂದ್ರ ರಾವ್ ತಿಳಿಸಿದ್ದಾರೆ.

ಶನಿವಾರ ನೀಡಿದ ಪತ್ರಿಕಾ ಹೇಳಿಕೆಯಲ್ಲಿ ರಾವ್, “ನಾವು ಈ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಮ್ಮ ರಾಷ್ಟ್ರದ ಉತ್ಸಾಹವನ್ನು ಯಾವುದೇ ಶಕ್ತಿ ಕುಗ್ಗಿಸಲು ಸಾಧ್ಯವಿಲ್ಲ ಎಂದು ನಾವು ದೃಢವಾಗಿ ನಂಬುತ್ತೇವೆ. ದುರದೃಷ್ಟಕರ ಘಟನೆ ನಡೆದ ಒಂದು ವಾರದೊಳಗೆ ನಮ್ಮ ಬ್ರೂಕ್‌ಫೀಲ್ಡ್ ಔಟ್‌ಲೆಟ್ ಅನ್ನು ಪುನಃ ಆರಂಭಿಸಲು ನಾವು ನಿರ್ಧರಿಸಿದ್ದೇವೆ. ಅಂದರೆ ಮಾರ್ಚ್ 8 (ಶುಕ್ರವಾರ) ಮಹಾಶಿವರಾತ್ರಿಯ ಶುಭ ದಿನದಂದು ಆರಂಭವಾಗಲಿದೆ. ಎಲ್ಲಾ ಅಧಿಕಾರಿಗಳು ಮತ್ತು ಗ್ರಾಹಕರಿಗೆ ಆಹ್ವಾನವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

ರಮೇಶ್ವರಂ ಕೆಫಯ ಬ್ರೂಕ್‌ಫೀಲ್ಡ್ ಔಟ್‌ಲೆಟ್ ಸುಮಾರು ಒಂದು ವರ್ಷ ಮತ್ತು ಮೂರು ತಿಂಗಳ ಹಳೆಯದು. ಇದಕ್ಕೂ ಮುನ್ನ ಇಂದಿರಾನಗರ, ಜೆಪಿ ನಗರ ಮತ್ತು ರಾಜಾಜಿನಗರ ಸೇರಿದಂತೆ ಬೆಂಗಳೂರಿನ ಇತರ ಮೂರು ಸ್ಥಳಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಸ್ಫೋಟದ ದಿನದಂದು, ಸಂಸ್ಥಾಪಕರು ಇತರ ಶಾಖೆಗಳಲ್ಲಿದ್ದರು. ಸಹ-ಸಂಸ್ಥಾಪಕಿ ದಿವ್ಯಾ ರಾವ್ ಪ್ರಕಾರ, ಬ್ರೂಕ್ಫೀಲ್ಡ್ ಔಟ್ಲೆಟ್ನಲ್ಲಿ ಸುಮಾರು 150 ಉದ್ಯೋಗಿಗಳಿದ್ದಾರೆ.

ಹೋಟೆಲ್ ಸಿಬ್ಬಂದಿಗಳಲ್ಲಿ ಒಬ್ಬರಾದ ಫಾರೂಕ್ ಹುಸೇನ್ ಅವರ ದೇಹದ ಎಡಭಾಗ ತೀರ್ವ ಗಾಯಗಳಾಗಿವೆ ಇದರಿಂದ ಅವರು ಬಳಲುತ್ತಿದ್ದಾರೆ,. ಇದು ಸ್ಫೋಟದ ಸಮಯದಲ್ಲಿ ಛಿದ್ರಗೊಂಡ ಗಾಜಿನ ತುಂಡುಗಳು ಅಥವಾ ಇತರ ಕೆಲವು ವಸ್ತುಗಳ ಮುಚ್ಚಿಕೊಂಡಿರುವ ಕಾರಣದಿಂದಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ.

More articles

Latest article