Sunday, July 14, 2024

ಜ.19 ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ : ರೋಡ್ ಶೋಗೆ ಸಿದ್ದತೆ!

Most read

ಪ್ರಧಾನಿ ನರೇಂದ್ರ ಮೋದಿ ಅವರು ನಾಡಿದ್ದು ಶುಕ್ರವಾರ (ಜ.19) ಬೆಂಗಳೂರಿಗೆ ಆಗಮಿಸಲಿದ್ದಾರೆ. ಪ್ರಧಾನಿ ಮೋದಿ ಅವರ ರೋಡ್ ಶೋ ನಡೆಸುವುದಕ್ಕೆ ಮನವಿ ಮಾಡಿ, ಮಾರ್ಗದ ನೀಲ ನಕ್ಷೆಯನ್ನು ಪ್ರಧಾನ ಮಂತ್ರಿ ಕಚೇರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ ಅವರು ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಜಾಗತಿಕ ಏರೋಸ್ಪೇಸ್ ಪ್ರಮುಖ ಬೋಯಿಂಗ್‌ನ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ.

ಪ್ರಧಾನಿಯವರ ಭೇಟಿಯು ಅಧಿಕೃತ ಕಾರ್ಯಕ್ರಮಕ್ಕೆ ಸೀಮಿತವಾಗಿದೆ. ಅವರು ಯಾವುದೇ ಪಕ್ಷಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ.

ಮಧ್ಯಾಹ್ನ 2.10ಕ್ಕೆ ಕೆಂಪೇಗೌಡ ಏರ್‌ ಪೋರ್ಟ್‌ ಗೆ ಆಗಮಿಸುವ ಮೋದಿ. ಮಧ್ಯಾಹ್ನ 2.15ಕ್ಕೆ ರಸ್ತೆ ಮಾರ್ಗವಾಗಿ ಭಟ್ಟರ ಮಾರನಹಳ್ಳಿಗೆ ಪ್ರಯಾಣ.

ಶುಕ್ರವಾರ ಮಧ್ಯಾಹ್ನ 2.45ಕ್ಕೆ ದೇವನಹಳ್ಳಿಯ ಭಟ್ಟರಮಾರನಹಳ್ಳಿ ತಲುಪಿ  BIETC  ಉದ್ಘಾಟನೆ ಮಾಡಿ ಮಧ್ಯಾಹ್ನ 3.45ಕ್ಕೆ ಭಟ್ಟರ ಮಾರನಹಳ್ಳಿಯಿಂದ ನಿರ್ಗಮಿಸಲಿದ್ದಾರೆ. ಮಧ್ಯಾಹ್ನ 3.55ಕ್ಕೆ ಕೆಂಪೆಗೌಡ ಏರ್‌ ಪೋರ್ಟ್ ಮೂಲಕ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ.

More articles

Latest article