Friday, December 6, 2024

ಭಾರತವನ್ನು ಹಿಂದೂ ರಾಷ್ಟ್ರವೆಂದರೆ ತಪ್ಪೇನಿದೆ?: ಪೇಜಾವರ ಶ್ರೀ

Most read

ಕನ್ನಡಿಗರೇ ಹೆಚ್ಚಿರುವ ರಾಜ್ಯವನ್ನು ಕರ್ನಾಟಕ ಎಂದು ಕರೆಯಬಹುದಾದರೆ, ಹಿಂದೂಗಳು ಹೆಚ್ಚಿರುವ ಭಾರತವನ್ನು  ಹಿಂದೂ ರಾಷ್ಟ್ರ ಎಂದು ಕರೆಯುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಉಡುಪಿಯಲ್ಲಿ ಮಾತನಾಡಿದ ಅವರು, ಕನ್ನಡಿಗರು ಬಹುಸಂಖ್ಯಾರಾಗಿರುವ  ಕಾರಣ ಇದು ಕರ್ನಾಟಕವಾಗಿದೆ. ಇಲ್ಲಿ ಕನ್ನಡ ಭಾಷುಕರು ಬಿಟ್ಟು ಇನ್ನು ಹಲವು ಭಾಷೆ ಮಾತನಾಡುವವರು ಇದ್ದಾರೆ. ಅದಕ್ಕೆ ನಾವು ಕರ್ನಾಟಕ ಬದಲು ಬೇರೆ ಹೇಳೋಕೆ ಸಾಧ‌್ಯವ ಎಂದು ಪಗ್ರಶ್ನಿಸಿದ್ದಾರೆ.

ಭಾರತ ಹಿಂದೂ ಸಂಸ್ಕೃತ ಹುಟ್ಟಿದ ನೆಲ, ಇಲ್ಲಿ ಹಿಂದೂಗಳೆ ಬಹುಸಂಖ್ಯಾತರು. ದೇಶ ಹಿಂದೂಗಳಾದ ನಾವು ಇದು ಹಿಂದೂರಾಷ್ಟ್ರ ಎಂದು ಕರೆಯುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಸ್ವಾತಂತ್ರ್ಯ ದೊರಕಿ 75 ವರ್ಷದ ಮೇಲಾದರೂ ವಿಮೋಚನೆಗೊಳ್ಳಲಿ ಎಂದರು. ಮುಸ್ಲಿಮರಿಗೆ ಮೆಕ್ಕ, ಕ್ರಿಶ್ಚಿಯನ್ನರಿಗೆ ಜೆರುಸುಲೆಂ ಇರುವಂತೆ, ಹಿಂದೂಗಳು ನಿತ್ಯಪಠಿಸುವ ಮೋಕ್ಷದಾಯಕ ಕ್ಷೇತ್ರಗಳು ವಿಮೋಚನೆಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಶ್ರೀರಾಮಮಂದಿರ ಉಳಿಯಬೇಕಾದರೆ ಭಾರತ ಹಿಂದೂ ರಾಷ್ಟ್ರ ಆಗಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ  ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಸಮರ್ಥಿಸಿಕೊಂಡ ಶ್ರೀಗಳು, ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ತೀರ್ಪನ್ನು ಒಪ್ಪುವವರು ರಾಮಮಂದಿರ ನಿರ್ಮಾಣವನ್ನು ಒಪ್ಪುತ್ತಾರೆ. ಒಪ್ಪದವರು ವಿರೋಧಿಸುತ್ತಾರೆ ಎಂದು ಹೇಳಿದ್ದಾರೆ.

More articles

Latest article