Sunday, July 14, 2024

ಅತೀ ಹೆಚ್ಚು ಮೊತ್ತಕ್ಕೆ ಐಪಿಎಲ್‌ ಹರಾಜಿನಲ್ಲಿ ಖರೀದಿಯಾದ  ಆಟಗಾರರು ಯಾರ್ಯಾರು ಗೊತ್ತಾ?

Most read

ಐಪಿಎಲ್‌-2024 ಇತಿಹಾಸದಲ್ಲೇ ಬರೋಬ್ಬರಿ  24.75 ಕೋಟಿ ಮೊತ್ತಕ್ಕೆ ಕೆಕೆಆರ್‌ ತಂಡ ಆಸ್ಟ್ರೇಲಿಯಾ ತಂಡದ ಆಟಗಾರ ಮಿಚೆಲ್‌ ಸ್ಟಾರ್ಕ್‌ ಖರೀದಿ ಮಾಡಿದ್ದಾರೆ.

ಈ ಬಾರಿಯ ಗರಿಷ್ಠ ಮೊತ್ತಕ್ಕೆ ಖರೀದಿಯಾದವರಲ್ಲಿ ಮಿಚೆಲ್‌ ಸ್ಟಾರ್ಕ್‌ ಮೊದಲಿಗರಾಗಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮ್ಮಿನ್ಸ್‌ 20.50 ಕೋಟಿ ಮೊತ್ತಕ್ಕೆ ಹೈದ್ರಾಬಾದ್‌ ತಂಡಕ್ಕೆ ಖರೀದಿಯಾಗಿದ್ದರು.  ಇದು ಐಪಿಎಲ್‌ ಇತಿಹಾಸದಲ್ಲಿ ಗರಿಷ್ಠ ಎಂದಾಗಿತ್ತು. ಕಮ್ಮಿನ್ಸ್‌ನ ದಾಖಲೆಯನ್ನೆ ಸ್ಟಾರ್ಕ್‌ ಮುರಿದಿದ್ದಾರೆ.

ಐಪಿಎಲ್ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಖರೀದಿಯಾದ ಮೊದಲು 10 ಆಟಗಾರರು.

  1.  ಮಿಚೆಲ್‌ ಸ್ಟಾರ್ಕ್‌ – 24.75 ಕೋಟಿ
  2.  ಪ್ಯಾಟ್‌ ಕಮ್ಮಿನ್ಸ್‌ – 20.50 ಕೋಟಿ
  3.  ಸ್ಯಾಮ್‌ ಕರ್ರನ್‌ – 18.50 ಕೋಟಿ
  4. ಕ್ಯಾಮರೋನ್‌ ಗ್ರೀನ್‌ – 17.50 ಕೋಟಿ
  5. ಬೆನ್‌ ಸ್ಟೋಕ್ಸ್‌ – 16.25 ಕೋಟಿ
  6. ಕ್ರಿಸ್‌ ಮೋರಿಸ್‌ – 16.25 ಕೋಟಿ
  7. ನಿಕೋಲಸ್‌ ಪೂರನ್‌ – 16 ಕೋಟಿ
  8. ಯುವರಾಜ್‌ ಸಿಂಗ್‌ – 16 ಕೋಟಿ
  9.  ಪ್ಯಾಟ್‌ ಕಮ್ಮಿನ್ಸ್‌ – 15.50 ಕೋಟಿ
  10. ಇಶಾನ್‌ ಕಿಶನ್‌ – 15.25 ಕೋಟಿ

More articles

Latest article