ಇಂದಿನಿಂದ ನಾಲ್ಕು ದಿನ ಪೀಣ್ಯ ಫ್ಲೈಓವರ್‌ ಬಂದ್‌

ಬೆಂಗಳೂರು :  ದುರಸ್ತಿ ಕಾಮಗಾರಿಗಳ ಟೆಸ್ಟಿಂಗ್ ಸಲುವಾಗಿ ನಾಲ್ಕು ದಿನ  ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಎಲಿವೇಟೆಡ್ ಪ್ರೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ವೇತುವೆ)  ಬಂದ್ ಮಾಡಲಾಗುತ್ತಿದೆ.  ಮೇ 5 ರ ಬೆಳಗ್ಗೆ 5 ಗಂಟೆಯಿಂದ  ಮೇ8 ರ ಬೆಳಗ್ಗೆ 11 ಗಂಟೆವರೆಗೆ ಬಂದ್ ಆಗಿರಲಿದೆ.  ಎಲ್ಲಾ ವಾಹನಗಳನ್ನು ಪೀಣ್ಯ ಫ್ಲೈಓವರ್ ಮೇಲೆ ಸಂಚಾರ ನಿರ್ಬಂಧಿಸಲಾಗುತ್ತಿದೆ.

ಪೀಣ್ಯ ಫ್ಲೈಓವರ್ ಮೇಲೆ ಅಳವಡಿಸಲಾದ ಕೇಬಲ್‌ಗಳ ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿಗಳ ದುರಸ್ತಿಗಳ ಪರಿಶೀಲನೆ ನಡೆಯಲಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರೀಕ್ಷೆ ನಡೆಸಲಿದೆ.  ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಎಲಿವೇಟೆಡ್ ಫೈಓವರ್  ಮೇಲೆ ಕೆನ್ನಮೆಟಲ್ ವಿಡಿಯಾ ಅಪ್ಪರ್‌ ರ್ಯಾಂಪ್‌  ಎಸ್.ಆರ್.ಎಸ್ ಡೌನ್‌ ರ್ಯಾಂಪ್‌ ವರೆಗೆ ಎರಡು ಕಡೆಯಲ್ಲಿ ಫೈಓವರ್‌ ಮೇಲೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.

ಬದಲಿ ಮಾರ್ಗ ವ್ಯವಸ್ಥೆ

ನೆಲಮಂಗಲ ಬೆಂಗಳೂರು ಕಡೆಗೆ: ಕೆನ್ನಮೆಟಲ್ ಫ್ಯಾಕ್ಟರಿಹತ್ತಿರ ಫೈಓವರ್‌ನ ಫೈಓವರ್ ಕೆಳಭಾಗದ ಎನ್.ಹೆಚ್.4 ಮತ್ತು ಸರ್ವಿಸ್ ರಸ್ತೆ ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಮೂಲಕ 8ನೇ ಮೈಲಿ ಎಸ್.ಆರ್.ಎಸ್ ಜಂಕ್ಷನ್ ದಾಸರಹಳ್ಳಿ ಗೊರಗುಂಟೆಪಾಳ್ಯ

ಸಿಎಂಟಿಐ ನಿಂದ ನೆಲಮಂಗಲ ಕಡೆಗೆ : ಫೈಓವ‌ರ್ ಕೆಳಭಾಗದ ಎನ್.ಹೆಚ್.-4 ಮತ್ತು ಸರ್ವಿಸ್ ರಸ್ತೆ ಮೂಲಕ -ಎಸ್.ಆರ್.ಎಸ್ ಜಂಕ್ಷನ್ ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಜಾಲಹಳ್ಳಿ ಕ್ರಾಸ್ ದಾಸರಹಳ್ಳಿ 8ನೇ ಮೈಲಿ ಪಾರ್ಲೆಜಿ ಟೋಲ್

ಪೀಣ್ಯ ಮೇಲೇತುವೆ ಮೂಲಕ ಸಾಗುವ ವಾಹನಗಳ ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಮೇಲ್ಕಂಡ ಮಾರ್ಪಾಡುಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿನಂತಿಸಲಾಗಿದೆ. 

More articles

Latest article

Most read