ಸಂಸತ್ತಿನ ಭದ್ರತಾ ಲೋಪಕ್ಕೆ ಸಂಬ0ಧಿಸಿದ0ತೆ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿದ್ದಕ್ಕೆ ಮತ್ತೆ ವಿರೋಧ ಪಕ್ಷದ 49 ಸದಸ್ಯರನ್ನು ಅಧಿವೇಶನದಿಂದ ಇಂದು(ಮ0ಗಳವಾರ) ಅಮಾನತುಗೊಳಿಸಲಾಗಿದೆ.
ಲೋಕಸಭಾ ಸ್ಪಿಕರ್ ಓಂ ಬಿರ್ಲಾ ಚಳಿಗಾಲದ ಅಧಿವೇಶನದಲ್ಲಿ ಸೋಮವಾರ ಕಲಾಪ ಮುಗಿಯುವವರೆಗೆ ಒಟ್ಟು 92 ಸಂಸದರನ್ನು ಅಮಾನತುಗೊಳಿಸಿದ್ದರು. ಇಂದು ಅಮಾನತುಗೊಂಡ 49 ಸದಸ್ಯರನ್ನು ಸೇರಿ ಸಂಸದರ ಸಂಖ್ಯೆ ೧೪೧ಕ್ಕೆ ಏರಿದೆ.
ಅಶಿಸ್ತಿನ ವರ್ತನೆ ಮತ್ತು ಸಭಾಪತಿಗಳ ನಿರ್ಣಯಗಳನ್ನು ಧಿಕ್ಕರಿಸಿದ್ದಾರೆ ಎಂದು ಸ್ಪಿಕರ್ ಸಂಸದರು ಅಮಾನತುಗೊಳಿಸಿದ್ದಾರೆ. ಸಂಸತ್ತಿನ ಉಭಯ ಸದನಗಳಿಂದ ಸಾಮೂಹಿಕ ಅಮಾನತು ಮಾಡಿರುವ ನರೇಂದ್ರ ಮೋದಿ ಸರ್ಕಾರವು ಪ್ರಜಾಪ್ರಭುತ್ವ ಮತ್ತು ಸಂಸತ್ತಿನಲ್ಲಿ ಧ್ವನಿ ಎತ್ತುವವರ ವಿರುದ್ಧ ನೇರವಾಗಿ ದಾಳಿ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಇಂದು ಅಮಾನತು ಆದವರಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್, ಮನೀಶ್ ತಿವಾರಿ ಹಾಗೂ ಸುಪ್ರಿಯಾ ಸುಳೆ ಸೇರಿ 49 ಸದಸ್ಯರು ಆಗಿರುತ್ತಾರೆ.