Saturday, July 27, 2024

92 ಸಂಸದರ ಅಮಾನತು: ಪ್ರಧಾನಿ ಮೋದಿ – ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಇಂಡಿಯಾ ಒಕ್ಕೂಟ ಪ್ರತಿಭಟನೆ

Most read

ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿರುದ್ಧ ಧ್ವನಿ ಎತ್ತಿದ್ದ ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ವಿಪಕ್ಷಗಳ ಸದಸ್ಯರು ಮಂಗಳವಾರ ನೂತನ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿದರು.


ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ವಿರೋಧ ಪಕ್ಷದ ಸದಸ್ಯರನ್ನು ಡಿಸೆಂಬರ್ ೧೪ ರಂದು ಸಂಸತ್ತಿನಿಂದ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಇಂದು ಗಾಂಧಿ ಪ್ರತಿಮೆಯ ಎದುರು ಗೃಹ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಗೃಹ ಸಚಿವ ಅಮಿತ್ ಶಾ ರಿಂದ ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಪ್ರತಿಕ್ರಿಯೆಗೆ ಒತ್ತಾಯಿಸಿದ್ದಾರೆ.


ಸಂಸತ್ತಿನ ಒಳಗೆ ನುಗ್ಗಲು ಪಾಸ್ ನೀಡಿದ ಬಿಜೆಪಿ ಸಂಸದರನ್ನು ಮೊದಲು ಬಂಧಿಸಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಕ್ಷಣವೇ ರಾಜೀನಾಮೆ ಕೊಡಬೇಕು ಎಂದು ಅಮಾನತುಗೊಂಡ ಸದಸ್ಯರು ಹಾಗೂ ವಿರೋಧ ಪಕ್ಷದ ಹಲವು ಮುಖಂಡರು ಆಗ್ರಹಿಸಿದರು.


ಒಟ್ಟು ೭೮ ಪ್ರತಿಪಕ್ಷ ಸಂಸದರು, ಲೋಕಸಭೆಯಿಂದ ೩೩ ಸಂಸದರು ಮತ್ತು ರಾಜ್ಯಸಭೆಯಿಂದ ೪೫ ಸಂಸದರನ್ನು ಅಮಾನತುಗೊಳಿಸಲಾಗಿದೆ. ಸಂಸತ್ತಿನ ಇತಿಹಾಸದಲ್ಲಿಯೇ ಇಲ್ಲಿಯವರೆಗೂ ಒಂದೇ ಬಾರಿಗೆ ಒಟ್ಟು ೯೨ ಸಂಸದರನ್ನು ಅಮಾನತುಗೊಳಿಸಿದ್ದು ದಾಖಲಾಗಿದೆ.

More articles

Latest article