Sunday, September 8, 2024

ಸದನದಲ್ಲಿ ಪ್ರತಿಧ್ವನಿಸಿದ ಪಾಕಿಸ್ತಾನ ಜಿಂದಾಬಾದ್

Most read

ನೆನ್ನೆ ರಾಜ್ಯಸಭೆ ಚುನಾವಣೆಯ ನಂತರ ವಿಧಾನಸೌಧದಲ್ಲಿ ಓರ್ವ ವ್ಯಕ್ತಿ ಪಾಕಿಸ್ತಾನ ಪರ‌ ಘೋಷಣೆ ಕೂಗಿದ್ದಾನೆ ಎಂದು ಮಾಧ್ಯಮಗಳು ಮಾಡಿದ ವರದಿಯ ಕುರಿತು ವಿಧಾನಸಭೆ ಅಧಿವೇಶನದ ಕಡೆಯ ದಿನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಭಾರಿ ಮಟ್ಟದ ಚರ್ಚೆ ನಡೆಯಿತು.

ಚರ್ಚೆಯ ನಂತರ ಸರ್ಕಾರದ ಪರವಾಗಿ ಉತ್ತರ ಕೊಡಲು ಬಂದ ಗೃಹ ಸಚಿವರಾದ ಜಿ ಪರಮೇಶ್ವರ್ ಅವರು, ಇಂತಹ ಗಂಭೀರ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ದುರಂತ. ಇದರ ಬಗ್ಗೆ ಮೊದಲು ನೈಜ ಸ್ಥಿತಿಯ ಬಗ್ಗೆ ಪರೀಶಿಲಸಬೇಕು ಎಂದರು.

ಕಾಂಗ್ರೆಸ್ ಪಕ್ಷ ತ್ಯಾಗ, ಬಲಿದಾನಗಳ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದೆ. ರಕ್ತಗತವಾಗಿ ದೇಶಭಕ್ತಿ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರಲ್ಲಿಯೂ ಇದೆ. ರಾಷ್ಟ್ರ ಭಕ್ತಿ ಎಂದರೆ ಕಾಂಗ್ರೆಸ್ ಯಾವಾಗಲೂ ಬದ್ದವಾಗಿರುತ್ತದೆ. ದೇಶಪ್ರೇಮದ ಬಗ್ಗೆ ನಿಮ್ಮಿಂದ (ಬಿಜೆಪಿ) ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಟೀಕಿಸಿದರು.

1971 ರಲ್ಲಿ ಪಾಕಿಸ್ತಾನ‌ದ ವಿರುದ್ದ ಯುದ್ಧ ಮಾಡಿದ್ದು ಕಾಂಗ್ರೆಸ್‌. ಪಾಕಿಸ್ತಾನ ಬಾವುಟವನ್ನು, ಪಾಕಿಸ್ತಾನದ ಪರ ಘೋಷಣೆಗಳು ಕೂಗಿದ್ದು ನಿಮ್ಮ(ಬಿಜೆಪಿ) ಕಾಲದಲ್ಲಿಯೇ. ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಶೆಡ್ಯೂಲ್‌ ಇಲ್ಲದೆ ಪಾಕಿಸ್ತಾನಕ್ಕೆ ಬೇಟಿ ಕೊಡುತ್ತಾರೆ. ಇದನ್ನು ಸಮರ್ಥಿಸಿಕೊಳ್ಳದ‌ ನೀವು ಮಾಡುತ್ತಿರುವ ಚರ್ಚೆ ಅಪ್ರಸ್ತುತ ಎಂದು ಗುಡುಗಿದರು.

ಮಾಧ್ಯಮದವರೇ ಎರಡು ರೀತಿಯ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಘಟನೆ ಆದ ತಕ್ಷಣವೇ ಸ್ವಯಂ ಪ್ರೇರಿತ ಕೇಸ್ ಅನ್ನು ಪೊಲೀಸರು ದಾಖಲಿಸಿದ್ದಾರೆ. ಮೊದಲು FSL ತನಿಖೆ ಆಗಿ ವೈಜ್ಞಾನಿಕವಾಗಿ ಉತ್ತರ ಬಂದಾಗ ಯಾರೇ ಅಪರಾಧಿ ಆಗಿದ್ದರು ತಕ್ಷಣವೇ ಕಾನೂನಿನ ಮೂಲಕ ಕಠಿಣ ಶಿಕ್ಷೆಯನ್ನು ಕಾಂಗ್ರೆಸ್ ಸರ್ಕಾರ ಕೊಡುತ್ತದೆ ಎಂದು ಪ್ರತಿಪಾದಿಸಿದರು.

ರಾಜ್ಯಸಭೆಗೆ ಆಯ್ಕೆಯಾದ ನಾಸಿರ್ ಹುಸೇನ್‌ ಅವರು‌ 25 ಜನ‌ ಬೆಂಬಲಿಗರಿಗೆ ಅನುಮತಿ ಪಡೆದಿದ್ದರು. ಅವರಲ್ಲಿ ಯಾರೇ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರೆ ಕಠಿಣ ಶಿಕ್ಷೆಯನ್ನು ಕೊಡಲು ನಾವು ಸಿದ್ದರಿದ್ದೇವೆ ಎಂದು ವಿಪಕ್ಷ ನಾಯಕ ಆರ್ ಆಶೋಕ್ ಅವರಿಗೆ ಮನವರಿಕೆ ಮಾಡಿಕೊಟ್ಟರು. ಗೃಹ ಸಚಿವರ ಮಾತಿಗೆ ಆರ್ ಆಶೋಕ್ ಕೂಡ ಸಹಮತ ಸೂಚಿಸಿದರು.

More articles

Latest article