Saturday, December 7, 2024

ತೆಲಂಗಾಣದಲ್ಲಿ ₹500ಗೆ ಸಿಲಿಂಡರ್​ ಗ್ಯಾಸ್; 200 ಯೂನಿಟ್​ ವಿದ್ಯುತ್​ ಉಚಿತ ಗ್ಯಾರಂಟಿ ಜಾರಿ

Most read

ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್​ ಸರ್ಕಾರ ಚುನಾವಣೆಗೂ ಮೊದಲು ನೀಡಿದ ಭರವಸೆಯಂತೆ ರಾಜ್ಯದಲ್ಲಿ ಮತ್ತೆರಡು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ಮತ್ತು 200 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಯೋಜನೆಯನ್ನು ಆರಂಭಿಸಿದೆ.

ಸರ್ಕಾರ ಈಗಾಗಲೇ ಎರಡು ಖಾತರಿಗಳಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಆರೋಗ್ಯಶ್ರೀ ಮಿತಿಯನ್ನು 5 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಇದರೊಂದಿಗೆ ಇನ್ನೆರಡು ಗ್ಯಾರಂಟಿಗಳನ್ನೂ ಜಾರಿಗೆ ಮಾಡಿದ್ದು, ಈ ಮೂಲಕ ಕೊಟ್ಟ ಭರವಸೆಯಂತೆ 4 ಗ್ಯಾರಂಟಿಗಳನ್ನು ಜಾರಿಗೆ ತಂದಂತಾಗಿದೆ.

ಎರಡು ಗ್ಯಾರಂಟಿಗಳನ್ನು ಮಂಗಳವಾರ ಅನುಷ್ಠಾನಗೊಳಿಸಿದ ಬಳಿಕ ಮಾತನಾಡಿದ ಸಚಿವ ಉತ್ತಮ್ ಕುಮಾರ್, ಕಾಂಗ್ರೆಸ್​ ಪಕ್ಷ ಚುನಾವಣೆಗೂ ಮೊದಲು ಘೋಷಿಸಿದ ಗ್ಯಾರಂಟಿಗಳಲ್ಲಿ ಒಂದಾದ 500 ರೂಪಾಯಿಗೆ ಸಿಲಿಂಡರ್​ ಗ್ಯಾಸ್​​ ಮತ್ತು ಪ್ರತಿ ಮನೆಗೆ 200 ಯೂನಿಟ್​ ವಿದ್ಯುತ್​ ಉಚಿತ ಯೋಜನೆಯು ಇಂದಿನಿಂದ ಜಾರಿಗೆ ಬರಲಿದೆ. ಇದು ರಾಜ್ಯದ ಜನರಿಗೆ ಪಕ್ಷ ನೀಡಿದ ಭರವಸೆಗಳನ್ನು ಪೂರೈಸುವಲ್ಲಿ ಇಟ್ಟ ದೊಡ್ಡ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.

More articles

Latest article