F-16 ಯುದ್ಧ ವಿಮಾನ ಬಳಸುವ ಮೂಲಕ ಪಾಕ್‌ ಒಪ್ಪಂದ ಉಲ್ಲಂಘಿಸಿದೆ; ಪ್ರಕಾಶ್‌ ಅಂಬೇಡ್ಕರ್‌ ಆರೋಪ

ನವದೆಹಲಿ: ಭಾರತದ ವಿರುದ್ಧ ಪರೋಕ್ಷ ಯುದ್ಧ ಸಾರಿರುವ ಪಾಕಿಸ್ತಾನವು ವಾಯುಪಡೆಯು ಸೂಪರ್‌ಸಾನಿಕ್ ಮಲ್ಟಿರೋಲ್ ಫೈಟರ್ ವಿಮಾನ F-16 ಅನ್ನು ಬಳಸಿದೆ ಎಂದು ತಿಳಿದು ಬಂದಿದೆ. ಡಾ. ಬಿ.ಆರ್. ಅಂಬೇಡ್ಕ‌ರ್ ಅವರ ಮೊಮ್ಮಗ ಹಾಗೂ ವಂಚಿತ ಬಹುಜನ ಆಘಾಡಿ ಪಕ್ಷದ ಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಈ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ಕೊನೇ ಕ್ಷಣದಲ್ಲಿ ಮಾತ್ರವೇ ಬಳಸಬೇಕು ಎಂಬ ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ F-16 ಯುದ್ಧ ವಿಮಾನಗಳನ್ನು ಅಮೆರಿಕ ಪಾಕಿಸ್ತಾನಕ್ಕೆ ನೀಡಿದೆ. ಆ ಒಪ್ಪಂದದ ಪ್ರಕಾರ, F-16 ವಿಮಾನಗಳನ್ನು ಭಾರತ ವಿರುದ್ಧದ ಆಕ್ರಮಣಕಾರಿ ಕಾರ್ಯಾಚರಣೆಗಳಿಗೆ ಬಳಸುವಂತಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಎರಡು ಬಾರಿ ಲೋಕಸಭಾ ಸಂಸದ ಮತ್ತು ರಾಜ್ಯಸಭೆ ಸದಸ್ಯರಾಗಿ ಒಮ್ಮೆ ಆಯ್ಕೆಯಾಗಿದ್ದ ಪ್ರಕಾಶ್ ಅಂಬೇಡ್ಕರ್‌ ಪಾಕಿಸ್ತಾನವು ಭಾರತ ವಿರುದ್ಧದ ಕಾರ್ಯಾಚರಣೆಗೆ F-16 ಯುದ್ಧ ವಿಮಾನಗಳನ್ನು ಬಳಸಿದೆ. ಇದು, ಒಪ್ಪಂದದ ಘೋರ ಉಲ್ಲಂಘನೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಪಾಕಿಸ್ತಾನದ ನಡೆ ಕುರಿತು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕ‌ರ್ ಅವರು ಕೂಡಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚರ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಪಾಕಿಸ್ತಾನ ಮತ್ತು ಅದರ ಕುತಂತ್ರಗಳನ್ನು ವಿಶ್ವದ ಎದುರು ಬಯಲು ಮಾಡಬೇಕು ಎಂದೂ ಪ್ರಕಾಶ್‌ ಅಂಬೇಡ್ಕರ್‌ ಮನವಿ ಮಾಡಿದ್ದಾರೆ.

More articles

Latest article

Most read