Friday, December 6, 2024

ಪಾ. ರಂಜಿತ್ ಮತ್ತು ವಿಕ್ರಂ ಜೋಡಿಯ ತಂಗಲಾನ್ ಬಿಡುಗಡೆ ಏಪ್ರಿಲ್ ಗೆ ಮುಂದೂಡಿಕೆ: ಒಟಿಟಿಯಲ್ಲಿ ಅಬ್ಬರಿಸಲಿದೆ ರಕ್ತಸಿಕ್ತ ಚರಿತ್ರೆ

Most read

ಇದೇ ಜನವರಿ 26ರಂದು ಬಿಡುಗಡೆಯಾಗುತ್ತದೆ ಎಂದು ಭಾರೀ ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿರುವ ಪಾ.ರಂಜಿತ್ ನಿರ್ದೇಶನದ ತಮಿಳು ಸಿನಿಮಾ ತಂಗಲಾನ್ (Tangalaan) ಬಿಡುಗಡೆ ಮುಂದೂಡಿಕೆಯಾಗಿದೆ. ಈ ಕುರಿತು ಸಾಮಾಜಿಕ ಮಾದ್ಯಮವಾದ X ನಲ್ಲಿ ಪೋಸ್ಟರ್ ಬಿಡುಗಡೆ ಮಾಡಿರುವ ನಿರ್ದೇಶಕ ಪಾ.ರಂಜಿತ್ (Pa.Ranjit)  ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುವ ಮಾಹಿತಿ ನೀಡಿದ್ದಾರೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ. ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ ಕೂಡಾ X ವೇದಿಕೆಯಲ್ಲಿ History awaits to be written in blood and gold ಎಂಬ ಸಾಲಿನೊಂದಿಗೆ ಮಾಹಿತಿ ಹಂಚಿಕೊಂಡಿವೆ.

ಸಧ್ಯದಲ್ಲೇ ಬಿಡುಗಡೆಯಾಗಲಿರುವ ಸೂರ್ಯ (Suriya) ಅಭಿನಯದ ಕಾಂಗುವಾ (Kanguva) ಸಿನಿಮಾಕ್ಕೆ ಡಿಕ್ಕಿ ಹೊಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ತಂಗಲಾನ್ ಮುಂದೂಡಿರಬಹುದು ಎಂಬುದು ಸಿನಿವಲಯದ ಊಹೆಯಾಗಿದೆ.

2024ರಲ್ಲಿ ಬಿಡುಗಡೆಯಾಗಲಿರುವ ಅತ್ಯಂತ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ತಂಗಲಾನ್ ಕೂಡಾ ಒಂದು. ರಕ್ತ ಮತ್ತು ಚಿನ್ನದಲ್ಲಿ ಅದ್ದಿದ ಚರಿತ್ರೆಯನ್ನು ತೋರಿಸಲಿರುವ ತಂಗಲಾನ್ ಕೆಜಿಎಫ್ ಕಾರ್ಮಿಕರ ಇತಿಹಾಸ ಹೇಳುವ ಸಿನಿಮಾ ಎನ್ನಲಾಗಿದೆ. ತಂಗಲಾನ್ ಸಿನಿಮಾದ ಟೀಸರ್ ಬಹಳ ಕುತೂಹಲ ಹುಟ್ಟಿಸಿದ್ದು ಸುಳ್ಳಲ್ಲ.

ಇದೀಗ ಒಟಿಟಿ (OTT) ವೇದಿಕೆಯಾಗಿರುವ ನೆಟ್ ಫ್ಲಿಕ್ಸ್ (Netflix) ತಂಗಲಾನ್ ಸಿನಿಮಾದ ಹಕ್ಕುಗಳನ್ನು ಪಡೆದುಕೊಂಡಿದೆ. ಏಪ್ರಿಲ್ ನಲ್ಲಿ ಟಾಕೀಸುಗಳಲ್ಲಿ ಬಿಡುಗಡೆಯಾ ಬಿಡುಗಡೆಯಾದ ನಂತರದಲ್ಲಿ ಒಟಿಟಿಗಳಲ್ಲಿ ಸಿನಿಮಾ ಬಿಡುಗಡೆಯಾಗಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕಾಲಾ, ಕಬಾಲಿ, ಅಟ್ಟಕತ್ತಿ, ಸರಪಟ್ಟಾ ಪರಂಪರೈ ಸಿನಿಮಾಗಳ ಮೂಲಕ ದೇಶದ ಅತ್ಯಂತ ಪ್ರತಿಭಾವಂತ ಮತ್ತು ಸಾಮಾಜಿಕ ಬದ್ಧತೆಯ ಸಿನಿಮಾ ನಿರ್ದೇಶಕರಲ್ಲಿ ಮುಂಚೂಣಿಯಲ್ಲಿರುವ ಪಾ.ರಂಜಿತ್ ಹಾಗೂ ಸಿನಿಮಾ ದೈತ್ಯ ಚಿಯಾನ್ ಕಾ ವಿಕ್ರಂ ಜೋಡಿ ಖಂಡಿತಾ ಮ್ಯಾಜಿಕ್ ಸೃಷ್ಟಿಸಲಿದೆ ಎಂಬುದೇ ಸಿನಿಪ್ರೇಮಿಗಳ ಅಂಬೋಣ.

More articles

Latest article