ಎರಡು ವಾರದ ಹಿಂದೆ ಜಮ್ಮು ಕಾಶ್ಮಿರದ ಪಹಲ್ಗಾಮ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಹಿನ್ನಲೆಯಲ್ಲಿ ಭಾರತವು ಉಗ್ರರಿಗೆ ಪಾಠವನ್ನು ಕಲಿಸಲು ಭಾರತ ಸರ್ಕಾರವು ತೀರ್ಮಾನಿಸಿ ಸರ್ವ ಪಕ್ಷಗಳ ಸಭೆ ನಡೆಸಿದ್ದವು. ಇದರಲ್ಲಿ Operation Sindoor ಕಾರ್ಯಚರಣೆ ನಡೆಸಿ ಎರಡು ದಿನದ ಹಿಂದೆ ಪಾಕ್ ಮೇಲೆ ದಾಳಿ ಮಾಡಿ ಯಶಸ್ಸನ್ನು ಭಾರತ ಕಂಡಿತ್ತು.
Operation Sindoor ಕಾರ್ಯಚರಣೆ ಯಶಸ್ವಿ ಬೆನ್ನಲ್ಲೆ ಮತ್ತೊಮ್ಮೆ ಭಾರತ ಸರ್ಕಾರವು ಇಂದು ಸರ್ವ ಪಕ್ಷಗಳ ಸಭೆ ನಡೆಸಿದ್ದವು. ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸರ್ವಪಕ್ಷಗಳ ಸಭೆಯಲ್ಲಿ ಮುಂದಾಳ್ವವನ್ನು ವಹಿಸಿದ್ದರು.
ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರದಲ್ಲಿ ಯಾವೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಸರ್ಕಾರ ಮತ್ತು ಸೇನೆಯ ಮುಂದಿನ ನಡೆ ಏನು? ಒಂದು ವೇಳೆ ಪಾಕಿಸ್ತಾನ ದಾಳಿ ನಡೆದಿರೆ ಕ್ರಮಗಳೇನು? ಎಂಬ ಬಗ್ಗೆ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿವರಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚವ ಜೆ.ಪಿ.ನಡ್ಡಾ, ವಿದೇಶಾಂಗ ಸಚಿವ ಎಸ್. ಜೈಶಂಕರ್, ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ ಅವರು ಸರ್ಕಾರದ ಪರವಾಗಿ ಹಾಜರಾಗಿದ್ದರು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಿಂದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ದೇಶದ ಎಲ್ಲಾ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.