ರಾಜ್ಯ ಸರಕಾರ 36 ಶಾಸಕರನ್ನು ಮೊದಲ ಪಟ್ಟಿಯಲ್ಲಿ ನಿಗಮ- ಮಂಡಳಿಗಳ ಅಧ್ಯಕ್ಷರುಗಳಾಗಿ ನೇಮಿಸಿದ ಬೆನ್ನಲ್ಲೇ 34 ಕಾರ್ಯಕರ್ತರನ್ನು ಒಳಗೊಂಡ 2ನೇ ಪಟ್ಟಿಯೂ ಸಿದ್ಧವಾಗಿದೆ. 34 ಮಂದಿ ಕಾರ್ಯಕರ್ತರ ಪಟ್ಟಿಗೆ ಸಿಎಂ, ಡಿಸಿಎಂ ಸರ್ಜರಿ ಮಾಡಿದ್ದಾರೆ ಎನ್ನಲಾಗಿದೆ.
ಮಾಜಿ ಶಾಸಕ ಎಸ್. ರಾಮಪ್ಪ, ಡಾ.ರಶೀದ್, ರಮೇಶ್ ಬಾಬು, ಜಗದೇವ್ ಗುತ್ತೇದಾರ್, ಮೆಹರೋಜ್ ಖಾನ್ ಗೆ ನಿಗಮದಿಂದ ಕೊಕ್ ನೀಡಿ. ಹೊಸದಾಗಿ ಮೆಹಬೂಬ್ ಪಾಷ, ಸವಿತಾ ರಘು, ಜಿ.ಎಸ್. ಮಂಜುನಾಥ್ ಗೆ ನಿಗಮ ಹಂಚಿಕೆ ಮಾಡಿದ್ದಾರೆ. ಶೀಘ್ರದಲ್ಲೇ ಕಾರ್ಯಕರ್ತರಿಗೆ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆ ನೀಡುವ ಕುರಿತ ಅಧಿಸೂಚನೆ ಹೊರಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ಪಟ್ಟಿ ಪ್ರಕಾರ ಕಾಂತಾ ನಾಯಕ್, ಮುಂಡರಗಿ ನಾಗರಾಜ್, ವಿನೋದ್ ಎಸ್. ಅಸೂಟಿ, ಬಿ.ಎಚ್. ಹರೀಶ್, ಡಾ.ಅಂಶುಮಂಥ್, ಜೆ.ಎಸ್.ಆಂಜನೇಯುಲು, ಡಾ.ಬಿ.ಯೋಗೇಶ್ ಬಾಬು, ಡಾ.ಎಚ್.ಕೃಷ್ಣ, ಮರಿಗೌಡ, ದೇವಿಂದ್ರಪ್ಪ ಮರ್ತೂರು, ರಾಜಶೇಖರ್ ರಾಮಸ್ವಾಮಿ, ಕೆ.ಮರಿಗೌಡ, ಜಯಣ್ಣ, ಎಸ್.ಮನೋಹರ್, ಅಯ್ಯೂಬ್ ಖಾನ್, ಮಮತಾ ಗುಟ್ಟಿ, ಜಿ.ಪಲ್ಲವಿ, ಎಸ್.ಇ.ಸುಧೀಂದ್ರ, ಡಾ.ನಾಗಲಕ್ಷ್ಮೀ ಚೌಧರಿ, ಎಚ್.ಎಸ್. ಸುಂದರೇಶ್, ಆರ್.ಎಂ.ಮಂಜುನಾಥ್ ಗೌಡ, ಜಯಣ್ಣ, ಸಂಪತ್ ರಾಜ್, ಸವಿತಾ ರಘು, ಪದ್ಮಾವತಿ , ಶಾಕಿರ್ ಸನದಿ, ಸರೋವರ ಶ್ರೀನಿವಾಸ್, ಸೋಮಣ್ಣ ಬೇವಿನಮರದ್, ಬಿ.ಪುಷ್ಪಾ ಅಮರನಾಥ್, ಮಹಬೂಬ್ ಪಾಷ, ಕೀರ್ತಿ ಗಣೇಶ್, ಮಝರ್ ಖಾನ್, ಲಲಿತ್ ರಾಘವ್ ಮತ್ತು ಜಿ.ಎಸ್.ಮಂಜುನಾಥ್ ಅವರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಸಿಗುವುದು ಖಚಿತ ಎಂದು ಹೇಳಲಾಗುತ್ತಿದೆ.