ಫ್ರಾನ್ಸ್ : ಪ್ರಧಾನಿ ಮೋದಿ “ಕೊಲೆಗಾರ ಮತ್ತು ಕಠಿಣ ವ್ಯಾಪಾರಿ” ಎಂಬ ವಿಶೇಷಣಗಳನ್ನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿದ್ದಾರೆ. ಹಾಗೆಯೇ, ಆ ನಾಯಕನ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.
ಜಿ7 ಶೃಂಗಸಭೆಯ ಸಂದರ್ಭದಲ್ಲಿ ಫ್ರಾನ್ಸ್ನ ಎವಿಯನ್ ನಗರದಲ್ಲಿ ನಡೆದ ದ್ವಿಪಕ್ಷೀಯ ಭೇಟಿಯಲ್ಲಿ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಮಂತ್ರಿ ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದರು. ಮೋದಿ ಅವರನ್ನು “ಕಿಲ್ಲರ್ನಷ್ಟು ಕಠಿಣ” ಮತ್ತು “ಅತ್ಯಂತ ಚಾಣಾಕ್ಷ ವ್ಯಾಪಾರ ಮಾತುಕತೆಯ ನಾಯಕ ಎಂದು ಬಣ್ಣಿಸಿದ ಟ್ರಂಪ್, ಅವರ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದು ಹೇಳಿದರು.
ಟ್ರಂಪ್ ಮಾತನಾಡುತ್ತಾ, “ಈ ವ್ಯಕ್ತಿಯನ್ನು ನೋಡಿ. ಅವರು ತುಂಬಾ ಸುಂದರವಾಗಿ ಕಾಣುತ್ತಾರೆ. ದೇವದೂತನಂತೆ ಕಾಣುತ್ತಾರೆ. ಆದರೆ ವಾಸ್ತವದಲ್ಲಿ ಅವರು ಕಿಲ್ಲರ್ನಷ್ಟು ಕಠಿಣ ವ್ಯಕ್ತಿ. ಅವರು ಅಷ್ಟು ಚೆನ್ನಾಗಿ ಕಾಣುವುದರಿಂದ ಜನರು ಆಶ್ಚರ್ಯಪಡುತ್ತಾರೆ. ಇಂತಹವರು ತುಂಬಾ ಕಡಿಮೆ, ನಾನು ಅಧ್ಯಕ್ಷನಾಗಿರುವವರೆಗೆ ಭಾರತಕ್ಕೆ ಶ್ವೇತಭವನದಲ್ಲಿ ಒಬ್ಬ ಉತ್ತಮ ಸ್ನೇಹಿತನಿದ್ದಾನೆ. ಇಲ್ಲಿರುವ ಎಲ್ಲರೂ ಭಾರತವನ್ನು ಪ್ರೀತಿಸುತ್ತಾರೆ ಮತ್ತು ಮೋದಿ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ ಎಂದರು.
ಮೋದಿ ಅವರನ್ನು “ಒಳ್ಳೆಯ ವ್ಯಕ್ತಿ ಆದರೆ ತುಂಬಾ ಕಠಿಣ ನಾಯಕ” ಎಂದು ವರ್ಣಿಸಿದ ಟ್ರಂಪ್, “ಜನರು ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದು ಹೇಳುತ್ತಾರೆ. ಆದರೆ ನಾನು ಹೇಳುವುದೇನೆಂದರೆ ಅವರು ಅತ್ಯಂತ ಕಠಿಣ ಮಾತುಕತೆಯ ನಾಯಕ. ಅವರು ಭಾರತೀಯ ಜನರನ್ನು ಪ್ರೀತಿಸುತ್ತಾರೆ, ಜೊತೆಗೆ ಅಮೆರಿಕವನ್ನೂ ಪ್ರೀತಿಸುತ್ತಾರೆ. ಹ್ಯೂಸ್ಟನ್ನಲ್ಲಿ ನಡೆದ ‘Howdy Modi’ ಕಾರ್ಯಕ್ರಮದಲ್ಲಿ ಕ್ರೀಡಾಂಗಣ ಜನರಿಂದ ತುಂಬಿತ್ತು. ಭವಿಷ್ಯದಲ್ಲಿ ನಾವು ಭಾರತಕ್ಕೂ ಭೇಟಿ ನೀಡುತ್ತೇವೆ,” ಎಂದು ಹೇಳಿದರು.
ಇದೇ ವೇಳೆ, ಭಾರತದ ಮೇಲೆ ಯಾವುದೇ ದೇಶ ದಾಳಿ ಮಾಡಿದರೆ ಅಮೆರಿಕ ಸಹಾಯಕ್ಕೆ ಬರುತ್ತದೆ ಎಂದು ಟ್ರಂಪ್ ಹೇಳಿದರು. ಆದರೆ ಅದಕ್ಕೆ ಒಂದು ಷರತ್ತು ಇಟ್ಟರು: ಮೋದಿ ನಾಯಕತ್ವದಲ್ಲಿರಬೇಕು. ಇದು ಅತ್ಯುತ್ತಮ ಸಂಬಂಧವಾಗಿದೆ. ಭಾರತದ ಮೇಲೆ ದಾಳಿ ನಡೆದರೆ ನಾವು ಸಹಾಯಕ್ಕೆ ಬರುತ್ತೇವೆ. ಯಾರಾದರೂ ಮೋದಿ ಮೇಲೆ ದಾಳಿ ಮಾಡಿದರೆ ನಾವು ಅವರೊಂದಿಗೆ ಇರುತ್ತೇವೆ. ಭಾರತದ ಮೇಲೆ ದಾಳಿ ನಡೆದಾಗ ಅವರು ನಾಯಕನಾಗಿದ್ದರೆ, ನಾವು ಸಹಾಯ ಮಾಡಲು ಖಂಡಿತ ಬರುತ್ತೇವೆ ಎಂದು ಹೇಳಿದರು.
ಪಶ್ಚಿಮ ಏಷ್ಯಾದ ವಿಚಾರಗಳಲ್ಲಿ ಭಾರತದ ಪಾತ್ರದ ಬಗ್ಗೆ ಕೇಳಿದಾಗ, ಟ್ರಂಪ್, “ಹೌದು, ಭಾರತ ಮಹತ್ವದ ಪಾತ್ರ ವಹಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಮೋದಿ ನಾಯಕತ್ವದಲ್ಲಿರುವವರೆಗೆ ಭಾರತವು ಎಲ್ಲ ಕ್ಷೇತ್ರಗಳಲ್ಲೂ ದೊಡ್ಡ ಪಾತ್ರ ವಹಿಸುತ್ತದೆ ಎಂದು ಹೇಳಿದರು.
“ಭಾರತದ ಪ್ರಧಾನಮಂತ್ರಿ ಮೋದಿ ಅವರೊಂದಿಗೆ ನಾವು ಅತ್ಯಂತ ಉತ್ತಮ ಮಾತುಕತೆಗಳನ್ನು ನಡೆಸಿದ್ದೇವೆ. ನಾವು ವ್ಯಾಪಾರ ಒಪ್ಪಂದಗಳ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ಅಮೆರಿಕ ಮತ್ತು ಭಾರತದ ನಡುವೆ ಅನೇಕ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.
ಅಮೆರಿಕ ಈಗ ಇತಿಹಾಸದಲ್ಲೇ ಅತ್ಯುತ್ತಮ ಆರ್ಥಿಕ ಸಾಧನೆ ಮಾಡುತ್ತಿದೆ. ನಮ್ಮ ದೇಶಕ್ಕೆ 19.2 ಟ್ರಿಲಿಯನ್ ಡಾಲರ್ಗಿಂತ ಹೆಚ್ಚು ಹೂಡಿಕೆ ಹರಿದು ಬರುತ್ತಿದೆ. ನಾವು ಕಾರ್ಖಾನೆಗಳನ್ನು ನಿರ್ಮಿಸುತ್ತಿದ್ದೇವೆ, ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದೇವೆ.
ಪ್ರಧಾನಮಂತ್ರಿ ಮೋದಿ ಅವರು ಕೂಡ ಅಮೆರಿಕದಲ್ಲಿ ಸಾಕಷ್ಟು ಹೂಡಿಕೆ ಮಾಡುತ್ತಿದ್ದಾರೆ. ಅವರು ಅಮೆರಿಕದಲ್ಲಿ ದೊಡ್ಡ ಪ್ರಮಾಣದ ಯೋಜನೆಗಳಿಗೆ ಹಣ ಖರ್ಚು ಮಾಡುತ್ತಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿದ್ದೇವೆ.
ನಾನು ಹೇಳಬೇಕೆಂದರೆ, ಅವರು ಬಹಳ ವರ್ಷಗಳಿಂದ ನನ್ನ ಸ್ನೇಹಿತರಾಗಿದ್ದಾರೆ. ನಮ್ಮಿಬ್ಬರ ನಡುವೆ ಯಾವಾಗಲೂ ಉತ್ತಮ ಸಂಬಂಧವಿದೆ. ನಿಮ್ಮೊಂದಿಗೆ ಇಲ್ಲಿ ಇರಲು ನನಗೆ ಸಂತೋಷವಾಗುತ್ತಿದೆ,” ಎಂದು ಟ್ರಂಪ್ ಹೇಳಿದರು.

