ಬಳ್ಳಾರಿ: ಖ್ಯಾತ ಸಂಗೀತ ನಿರ್ದೇಶಕ ಹಾಗೂ ಚಲನಚಿತ್ರ ನಿರ್ದೇಶಕರಾದ ನಾದಬ್ರಹ್ಮ ಖ್ಯಾತಿಯ ಹಂಸಲೇಖಾ ಅವರು ಭಾನುವಾರ ಬಳ್ಳಾರಿಯಲ್ಲಿರುವ ರಾಬರ್ಟ್ ಬ್ರೂಸ್ ಫೂಟ್ ಪುರಾತತ್ವ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು.
ಇತಿಹಾಸ ಪೂರ್ವ ಕಾಲದ ಕರ್ನಾಟಕದ ವಸ್ತುಗಳ ಅದ್ಭುತ ಸಂಗ್ರಹವನ್ನು ನೋಡಿದ ಬಳಿಕ ಮ್ಯೂಸಿಯಂನ ರೂವಾರಿ ಪುರಾತತ್ವ ವಿಜ್ಞಾನಿ ಪ್ರೊ ಕೋರಿಶೆಟ್ಟರ್ ಅವರೊಂದಿಗೆ ತಮ್ಮ ಸಂತಸ ಹಂಚಿಕೊಂಡರು. ಪುರಾತನ ಕಾಲದ ಶ್ರೀಮಂತವಾದ ಸಂಸ್ಕೃತಿಯ ಸಂಗ್ರಹವನ್ನು ಅಚ್ಚುಕಟ್ಟಾಗಿ ನಡೆಸಿರುವುದಕ್ಕೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು . ಪ್ರಾಧ್ಯಾಪಕರಾದ ಪ್ರೊ ಸಂತೋಷ್ ಮಾರ್ಟಿನ್ ಜೊತೆಗಿದ್ದರು.