ಮೈಸೂರು ದಸರಾ ಸಂಭ್ರಮಕ್ಕೆ ಚಾಲನೆ: ಅರಮನೆಯತ್ತ ಹೆಜ್ಜೆ ಹಾಕಿದ ನಾಗರಹೊಳೆ ಆನೆಗಳು

ಮೈಸೂರು ದಸರಾದ ವಿಶೇಷ ಆಕರ್ಷಣೆಯಾದ ಆನೆಗಳನ್ನು ಸ್ವಾಗತಿಸುವ ಗಜಪಯಣ ಬುಧವಾರ ನಾಗರಹೊಳೆ ಅರಣ್ಯ ಪ್ರದೇಶದ ಗಡಿಯಿಂದ ಆರಂಭಗೊಂಡಿತು. ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳು ಆಗಮಿಸಿವೆ. ಕ್ಯಾಪ್ಟನ್ ಅಭಿಮನ್ಯು, ಭೀಮ, ಗೋಪಿ, ಧನಂಜಯ, ಕಂಜನ್‌, ರೋಹಿತ್, ಲಕ್ಷ್ಮೀ, ವರಲಕ್ಷ್ಮೀ, ಏಕಲವ್ಯ ಆನೆಗಳು ಆಗಮಿಸಿವೆ.

ಮೈಸೂರು- ಕೊಡಗು ಜಿಲ್ಲೆ ಗಡಿ ವೀರನಹೊಸಹಳ್ಳಿ ಬಳಿ ಆನೆಗಳನ್ನು ಅರಣ್ಯ ಇಲಾಖೆ ಹಾಗೂ ದಸರಾ ಸಮಿತಿಯಿಂದ ಬರ ಮಾಡಿಕೊಂಡಿದ್ದಾರೆ. ಸಂಸದ ಸುನಿಲ್‌ ಬೋಸ್, ಶಾಸಕರಾದ ಜಿಡಿ ಹರೀಶ್ ಗೌಡ, ಡಿ.ರವಿಶಂಕರ್, ಅನಿಲ್ ಚಿಕ್ಕಮಾದು, ಎಂಎಲ್​ಸಿ ವಿವೇಕಾನಂದ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಬಿಜೆಪಿ ಸಂಸದ ಯದುವೀರ್ ಒಡೆಯರ್ ಗೈರಾಗಿದ್ದರು.

ಇಂದು, ನಾಳೆ ಅಶೋಕಪುರಂ ಅರಣ್ಯ ಭವನ ಆವರಣದಲ್ಲಿ ಆನೆಗಳು ವಾಸ್ತವ್ಯ ಹೂಡಲಿವೆ. ಶುಕ್ರವಾರ ಗಜಪಡೆ ಮೈಸೂರು ಅರಮನೆ ಆವರಣ ಪ್ರವೇಶಿಸಲಿದೆ. ಆನೆಗಳು, ಮಾವುತರ ವಾಸ್ತವ್ಯಕ್ಕಾಗಿ ಅರಮನೆ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ದಸರಾ ಆನೆಗಳು ಹತ್ತು ತಿಂಗಳು ಕಾಡಿನಲ್ಲಿದ್ದರೆ. ಎರಡು ತಿಂಗಳು ಮೈಸೂರಿನಲ್ಲಿರಲಿವೆ. ಅವುಗಳಿಗೆ ವಿಶೇಷ ಆರೈಕೆಯನ್ನು ಈ ವೇಳೆ ಮಾಡಲಾಗುತ್ತದೆ.

ಸರಾದಲ್ಲಿ ಪಾಲ್ಗೊಳ್ಳಲು ಒಟ್ಟು ಹದಿನಾಲ್ಕು ಆನೆಗಳು ಮಾತ್ರ ಮೈಸೂರಿಗೆ ಆಗಮಿಸುತ್ತಿವೆ. ಅಗತ್ಯ ಬಿದ್ದರೆ ಮಾತ್ರ ಮೀಸಲು ಆನೆಗಳನ್ನು ಕರೆತರಲು ತೀರ್ಮಾ‌ನ ಕೈಗೊಳ್ಳಲಾಗಿದೆ.

More articles

Latest article

Most read