Saturday, July 27, 2024

ಅಸ್ಪೃಶ್ಯರಿಗೆ ಕೊಡಬೇಕಾದ ಸ್ವಾತಂತ್ರ್ಯದ ಬಗ್ಗೆ ಮೂಕನಾಯಕ ಪತ್ರಿಕೆ ಮಾತನಾಡುತ್ತದೆ : ಬಿ ಶ್ರೀಪಾದ್‌ ಭಟ್

Most read

ಬ್ರಿಟೀಷರಿಂದ ಸ್ವಾತಂತ್ರ್ಯ ಬೇಕು ಎಂಬ ಬಗ್ಗೆ ಟೀಕೆ ಮಾಡುವ ಬದಲು, ಇಲ್ಲಿನ ಶೋಷಿತ ಸಮುದಾಯಗಳಿಗೆ, ಅಸ್ಪೃಶ್ಯರಿಗೆ ಕೊಡಬೇಕಾದ ಸ್ವಾತಂತ್ರ್ಯದ ಬಗ್ಗೆ ಮೂಕನಾಯಕ ಪತ್ರಿಕೆ ಮಾತನಾಡುತ್ತದೆ ಮತ್ತು ಮೂಕನಾಯಕ ಪತ್ರಿಕೆಯ ಬಹು ದೊಡ್ಡ ವೈಶಿಷ್ಟ್ಯ ಎಂದರೆ ಇಲ್ಲಿನ ಅಸ್ಪೃಶ್ಯ ಸಮುದಾಯಕ್ಕೆ ಬರೆಯುವ ಹಕ್ಕನ್ನು ದೊರಕಿಸಿಕೊಟ್ಟಿರುವುದು ಎಂದು ಶಿಕ್ಷಣ ತಜ್ಞರಾದ ಬಿ ಶ್ರೀಪಾದ್‌ ಭಟ್‌ ಹೇಳಿದರು.

ಮೂಕನಾಯಕ ಪತ್ರಿಕೆ ಆರಂಭವಾಗಿ 104 ವರ್ಷಗಳಾದ ಸಂದರ್ಭದಲ್ಲಿ, ʼತಳ ಸಮುದಾಯಗಳು ಮತ್ತು ಮುಖ್ಯವಾಹಿನಿ ಮಾಧ್ಯಮ: ಅಂದು-ಇಂದುʼ ಎಂಬ ಕಾರ್ಯಕ್ರಮವನ್ನು ಬೆಂಗಳೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.‌ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಏರ್ಪಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʼಅಂಬೇಡ್ಕರ್‌ ಬಗ್ಗೆ ಮಾತನಾಡುತ್ತಿರುವವರು ಹಾಗು ಮಾತನಾಡಲು ಈಗ ಶುರು ಮಾಡಿರುವವರು, ಮತ್ತು ಪತ್ರಕರ್ತರು ಅಂಬೇಡ್ಕರನ್ನು ಆರಾಧಿಸುತ್ತಿದ್ದಾರೆ. ಅಂಬೇಡ್ಕರ್‌ ಬಗ್ಗೆ ಮಾತನಾಡುವ ಕೆಲವು ವಿದ್ವಾಂಸರು ಅವರ ಜಾತಿ ಹಾಗೂ ಬಡತನದಿಂದ ಬಂದಂತಹ ವ್ಯಕ್ತಿ ಎಂದು ಗುರುತಿಸುತ್ತಿದ್ದಾರೆ. ಬಾಬಾಸಾಹೇಬರು 21 ನೇ ಶತಮಾನದಲ್ಲಿ ಮತ್ತೆ ಮರುಹುಟ್ಟು ಪಡೆದಿದ್ದಾರೆ. ಇಂತಹ ಸಂದರ್ಭದಲ್ಲಿ ನಾವುಗಳು ಅಂಬೇಡ್ಕರ್‌ ಬರಹಗಳನ್ನು ಮರು ಓದಬೇಕು ಮತ್ತು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕುʼ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಮಾವಳ್ಳಿ ಶಂಕರ್‌ ಮಾತನಾಡಿ, ಚರಿತ್ರೆಯ ಹೆಜ್ಜೆಗಳನ್ನ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಹಾಗು ವಿ‍ಶ್ವವಿದ್ಯಾಲಯದ ಬೌದ್ಧಿಕ ಸಾಮಾರ್ಥ್ಯವನ್ನು ಹೆಚ್ಚುಸುವ ಜವ್ದಾರಿಯನ್ನು ಪ್ರತಿಯೊಬ್ಬರು ಬಾಬಾ ಸಾಹೇಬರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಎಂದರು.

ಪತ್ರಿಕೆಯನ್ನು ಆರಂಭ ಮಾಡುವ ಮೊದಲು ಎಷ್ಟು ಜನ ಇದನ್ನು ಓದುತ್ತಾರೆ ಎನ್ನುವುದು ಬಾಬಾಸಾಹೇಬರಿಗೆ ತಿಳಿದಿತ್ತು. ಆದರೂ ನನ್ನ ಸಮುದಾಯದ ಜನರನ್ನು ಹೆಚ್ಚು ಹೆಚ್ಚು ಅಕ್ಷರಸ್ಥರಾಗಿ ಮಾಡುವ ಏಕೈಕ ಗುರಿ ಎಂದು ನಂಬಿದ್ದರು. ಆದ್ದರಿಂದ ಮೂಕನಾಯಕ ಪತ್ರಿಕೆಯನ್ನು ಆರಂಭ ಮಾಡಿದರು. ಯಾವುದೇ ಒಂದು ಪತ್ರಿಕೆಯೂ ನ್ಯಾಯಯುತವಾಗಿರಬೇಕು, ಪೂರ್ವಗ್ರಹ ಪೀಡಿತರಹಿತವಾಗಿರಬೇಕು. ವಾಸ್ತವಾಂಶಗಳನ್ನ ಆಧಾರಿಸಿರಬೇಕು ಮತ್ತು ಉದಾತ್ತ ಧೈಯ್ಯವನ್ನು ಹೊಂದಿರಬೇಕು. ಅಂದು ಇಂದು ಎಂದೆಂದೂ ಮಾಧ್ಯಮಗಳು ದಲಿತಪರ ನಿಲ್ಲದೇ. ಆಳುವ ವರ್ಗದ ಹಿತಾಸಕ್ತಿ ಕಾಪಾಡುತ್ತ  ಪುರೋಹಿತಶಾಹಿಯಾಗಿ ಬದಲಾಗಿದೆ ಎಂದು ಉಪನ್ಯಾಸಕ ರವಿಕುಮಾರ್‌ ಬಾಗಿ ಹೇಳಿದರು.

ಅಂಬೇಡ್ಕರ್ ಎಂದ ತಕ್ಷಣ ನಮ್ಮ ತಲೆಗೆ ಬರುವುದು ಸಂವಿಧಾನ ಶಿಲ್ಪಿ, ಅರ್ಥಿಕ ತಜ್ಞ, ಕಾನೂನು ತಜ್ಞ ಇದೆಲ್ಲವೂ ಹೊರತುಪಡಿಸಿ ಅಂಬೇಡ್ಕರ್ ಅವರು ಒಬ್ಬ ಅಪ್ರತಿಮ ಪತ್ರಕರ್ತರಾಗಿದ್ದರು ಎಂದರು.

ಇದೇ ಸಂದರ್ಭದಲ್ಲಿ ಅಂಬೇಡ್ಕರ್‌ ವಾದ  ಎಂಬ ನಿಯತಕಾಲಿಕವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರಕಾಶಕಿ,ಕೌದಿ ಪ್ರಕಾಶನದ ಡಾ ಮಮತಾ ಕೆ ಎನ್‌, ಅಂಬೇಡ್ಕರ್‌ ಅ‍ಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಸಿ. ಬಿ. ಹೊನ್ನು ಸಿದ್ದಾರ್ಥ್‌, ಹೋರಾಟಗಾರರಾದ ಹ ರಾ ಮಹೇಶ್‌  ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

More articles

Latest article