ಹತ್ತು ವರ್ಷಗಳಲ್ಲಿ ದೇಶದಲ್ಲಿ 25 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರ ಬಂದಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆಯನ್ನು ನನ್ನ ಅವಧಿಯಲ್ಲಿ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿಕೆಯನ್ನು ಎಲ್ಲೆಡೆ ಕೊಂಡಾಡುತ್ರಿರುವ ಬಿಜೆಪಿ ಬೆಂಬಲಿಗರಿಗೆ ಕಾಂಗ್ರೆಸ್ ನಾಯಕ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು X ಮಾಡಿರುವ ಅವರು, ಭಕ್ತರೇ, ಕರ್ನಾಟಕ ರಾಜ್ಯದ ಏಳಿಗೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಋಣಿ ಎಂಬಂತೆ ವರ್ತಿಸುತ್ತಿದ್ದಾರೆ. WhatsApp ವಿಶ್ವವಿದ್ಯಾಲಯದ ಉಪಕುಲಪತಿಗಳತರಹ ವರ್ತಿಸಬೇಡಿ ಎಂದು ಟೀಕಿಸಿದ್ದಾರೆ.
ಮುಂದುವರೆದು, ಮೈಸೂರು ಸಂಸ್ಥಾನದ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಅವರ 1930ರ ದಶಕದಲ್ಲಿ ಬಹಳ ಪ್ರಸಿದ್ಧವಾದ ಮಾತನ್ನು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ,
“ಈ ಕಾರ್ಖಾನೆಗಳ ಉತ್ಪನ್ನಗಳ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಮೈಸೂರಿಗರು ಮೈಸೂರು ಸಾಬೂನಿನಿಂದ ತೊಳೆದು, ಮೈಸೂರ್ ಟವೆಲ್‌ನಿಂದ ವರ್ಸಿ, ಮೈಸೂರು ಸಿಲ್ಕ್‌ಗಳನ್ನು ಧರಿಸುತ್ತಾರೆ, ಮೈಸೂರು ಕುದುರೆ ಸವಾರಿ ಮಾಡುತ್ತಾರೆ, ಮೈಸೂರು ಆಹಾರವನ್ನು ತಿನ್ನುತ್ತಾರೆ, ಮೈಸೂರು ಸಕ್ಕರೆಯೊಂದಿಗೆ ಮೈಸೂರು ಕಾಫಿ ಕುಡಿಯುತ್ತಾರೆ, ಮೈಸೂರು ಪೀಠೋಪಕರಣಗಳಿಂದ ತಮ್ಮ ಮನೆಗಳನ್ನು ಅಲಂಕರಿಸುತ್ತಾರೆ, ಮೈಸೂರು ದೀಪಗಳಿಂದ ಬೆಳಗುತ್ತಾರೆ ಮತ್ತು ಮೈಸೂರು ಪೇಪರ್‌ನಲ್ಲಿ ಅವರ ಪತ್ರಗಳನ್ನು ಬರೆಯುತ್ತಾರೆ. ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತ್, ಕರ್ನಾಟಕ ಸ್ಥಳೀಯರಿಗೆ ಅಂದೇ ತಿಳಿದಿತ್ತು ಎಂದು ಹೇಳಿದ್ದಾರೆ.
HAL, NAL, ISRO, IISC, HMT, BEML, DARE, BHEL, ITI, ಕಾಫಿ ಬೋರ್ಡ್, LRDE, BEL, Antrix, KIOC, MRPL, IT ಹಬ್, ಸ್ಟಾರ್ಟ್‌ಅಪ್‌ಗಳು ಇತ್ಯಾದಿಗಳು #AmritKaal ಗಿಂತ ಮೊದಲು K’taka ದಲ್ಲಿ ಇದ್ದವು.. ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿ ಕನ್ನಡಿಗರಿಗೆ ಯಾವುದೇ ರೀತಿಯ ಸಹಾಯ ಮಾಡಿಲ್ಲ ಎಂದು ಹೇಳಿದ್ದಾರೆ.

                                    