ಕರ್ನಾಟಕದಲ್ಲಿ “ಮನೋಧೈರ್ಯ” ದಂತಹ ವಿಶೇಷ ಕಾಯ್ದೆ ಜಾರಿಗೆ ಬರಲಿ

ರಾಯಚೂರು ಜಿಲ್ಲೆಯ ನೂತನ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ ರಾತ್ರಿ ಹೊತ್ತು ಬಹಿರ್ದೆಸೆಗೆ ಹೋದ ಅಶ್ವಿನಿ ಎಂಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬಾವಿಗೆ ಎಸೆಯಲಾಗಿದೆ. ಲಿಂಗಸುಗೂರಿನ ಕರಡಕಲ್ ಗ್ರಾಮದ ರಾಣೆಮ್ಮ ಎಂಬ ಮಹಿಳೆಯ ಸರಣಿ ಕೊಲೆಗಳ ಬಗ್ಗೆ ವರದಿಯಾಗಿವೆ. ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಬೇಕು ಹಾಗೂ ಇಂತಹ ಮಹಿಳೆಯರ ಮೇಲೆ ಮತ್ತು ಬಾಲಕಿಯರ ಮೇಲೆ ಪುರುಷ ದಬ್ಬಾಳಿಕೆ ಮತ್ತು ಆತನ ನೀಚತನದ ಪರಮಾವಧಿಗೆ ಹಿಡಿದ ಕೈಗನ್ನಡಿಯಂತೆ ಇಂದು ರಾಷ್ಟ್ರದ ರಾಜಧಾನಿಯಿಂದ ಹಿಡಿದು ದೇಶದ ಮೂಲೆಮೂಲೆಗಳಲ್ಲಿ ಎಲ್ಲೆಂದರಲ್ಲಿ ಅತ್ಯಾಚಾರ ಪ್ರಕರಣಗಳು ಸಹಜವೆಂಬಂತೆ ವರದಿಯಾಗುತ್ತಿವೆ. ನಾಗರಿಕ ಪ್ರಪಂಚದಲ್ಲಿ ಇಂತಹ ಪೈಶಾಚಿಕ ಕೃತ್ಯಗಳು ತಲೆತಗ್ಗಿಸುವಂತಹವು. ಪುರುಷನ ವಿಕೃತ ಆನಂದದ ಮನೋಭಾವಕ್ಕೆ ಚಿಕಿತ್ಸೆಯ ಅಗತ್ಯವಿದೆ. ರಾಜ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸಬಾರದೆಂದರೆ ಸರಕಾರ ಗಂಭೀರವಾಗಿ ಚಿಂತಿಸಿ, ಕಠಿಣವಾದ ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕಿದೆ

ಇಂತಹ ನೀಚ ದುರ್ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಲು ಗೃಹ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರನ್ನು ಒತ್ತಾಯಿಸುತ್ತಾ; ಇದೇ ಸಂದರ್ಭದಲ್ಲಿ ಮಾನ್ಯ ಶ್ರೀ ಸಿದ್ದರಾಮಯ್ಯನವರ ಮೊದಲ ಸರ್ಕಾರದ ಅವಧಿಯಲ್ಲಿ ಶ್ರೀ ವಿ.ಎಸ್.ಉಗ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ನೀಡಲಾಗಿದ್ದ ʼಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಾಗಿʼ ವರದಿಯ ಶಿಫಾರಸುಗಳನ್ನು ಮಾನ್ಯ ಶ್ರೀ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಆಡಳಿತದ ರಾಜ್ಯ ಸರ್ಕಾರ ಜಾರಿ ಮಾಡಬೇಕೆಂದು ಈ ಮೂಲಕ ಸರ್ಕಾರವನ್ನು ಆಗ್ರಹಿಸುತ್ತೇನೆ.

ವಾಸ್ತವವಾಗಿ ಹೇಳಬೇಕಾದರೆ, ಅತ್ಯಾಚಾರಕ್ಕೆ ನಿಖರ ಕಾರಣಗಳು ಇಲ್ಲ. ಆದಾಗ್ಯೂ ಖ್ಯಾತ ಪತ್ರಕರ್ತೆ ದಿ. ಗೌರಿ ಲಂಕೇಶ್ ಸಂದರ್ಶನವೊಂದರಲ್ಲಿ ಈ ರೀತಿ ಹೇಳುತ್ತಾರೆ; ‌ʻರೇಪ್ ಕ್ರೌರ್ಯದಿಂದ ಮಾಡಿದ್ದು, ಪ್ರೀತಿಯಿಂದಲ್ಲ. ಈ ಸಮಾಜ ರೇಪ್ ಮಾಡಿದವನ ಜೊತೆ ಬಾಳು, ಮದುವೆ ಆಗು ಅಂದರೆ ಆ ಕ್ರೌರ್ಯದ ವ್ಯಕ್ತಿ ಸಂತೋಷದಿಂದ ಅವಳನ್ನು ನೋಡಿಕೊಳ್ಳಲು ಅಸಾಧ್ಯ. ಯಾವುದೇ ಮಹಿಳೆಯ ದೇಹದ ಮೇಲೆ ನಮ್ಮ ಹಕ್ಕು ಇಲ್ಲ ಎಂದು ಪುರುಷರಲ್ಲಿ ಬಂದರೆ ಮಾತ್ರ ಈ ಸಮಾಜದಲ್ಲಿ ಅತ್ಯಾಚಾರಗಳು ನಿಲ್ಲುತ್ತವೆʼ ಎಂದು ಅವರು ಗಟ್ಟಿಯಾಗಿ ಹೇಳುತ್ತಾರೆ. ಇಂದು ಹೆಚ್ಚಾಗಿ ರೇಪ್ ಅಂಡ್ ಮರ್ಡರ್ ಸಂಭವಿಸುತ್ತಿರುವುದನ್ನು ಕಂಡರೆ ಅತ್ಯಂತ ಆತಂಕವಾಗುತ್ತದೆ.

ಮಹಾರಾಷ್ಟ್ರದಲ್ಲಿ ಮನೋಧೈರ್ಯ ಯೋಜನೆಯು ಅಪರಾಧದಿಂದ ಸಂತ್ರಸ್ತರಾದ ಮಹಿಳೆ ಅಥವಾ ಮಗುವಿಗೆ ಈಗಲೇ ಹಣ, ಚಿಕಿತ್ಸೆ, ಕಾನೂನು ನೆರವು, ಸಮಾಲೋಚನೆ ಮತ್ತು ಪುನರ್ವಸತಿ ಹೇಗೆ ಕೊಡಬೇಕು ಎಂದು ಹೇಳುತ್ತದೆ. ವಿ. ಎಸ್. ಉಗ್ರಪ್ಪ ಸಮಿತಿಯು ಅಪರಾಧ ನಡೆಯದಂತೆ ಮತ್ತು ನಡೆದರೆ ನ್ಯಾಯ ಸಿಗುವಂತೆ ಇಡೀ ವ್ಯವಸ್ಥೆಯನ್ನು ಹೇಗೆ ಬದಲಿಸಬೇಕು ಎಂದು ಹೇಳುತ್ತದೆ. ಯುವತಿಯರ ಅಪಹರಣ, ಸಾಮೂಹಿಕ ಅತ್ಯಾಚಾರ, ಕೊಲೆಯಂತಹ ಪ್ರಕರಣಗಳು ರಾಯಚೂರು ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಸಾಮಾನ್ಯವೆಂಬಂತೆ ಹೆಚ್ಚಾಗುತ್ತಿವೆ. ಈ ಹಿಂದೆ ಎಷ್ಟೋ ಅಲೆಮಾರಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರಗಳು ಕೂಡ ಬೆಳಕಿಗೆ ಬಾರದೇ ನಲುಗಿ ಹೋದವೆಷ್ಟೋ? ಬೆಳಕಿಗೆ ಬಂದ ಯಾವ ಪ್ರಕರಣಗಳೂ ತಾರ್ಕಿಕ ಅಂತ್ಯ ಕಾಣದೇ ಇರುವುದು ಸೋಜಿಗದ ಸಂಗತಿ. ಮಹಾರಾಷ್ಟ್ರ ರಾಜ್ಯದ ʼಮನೋಧೈರ್ಯʼ ಯೋಜನೆಯಂತೆ ಇಂತಹದಕ್ಕೆಲ್ಲಾ ಕಡಿವಾಣ ಹಾಕಲು ರಾಜ್ಯ ಸರ್ಕಾರವು ಕೂಡ ವಿ.ಎಸ್. ಉಗ್ರಪ್ಪ ಸಮಿತಿಯ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕಿದೆ.

ಶಿವರಾಜ್ ಮೋತಿ, ವಕೀಲರು

More articles

Latest article

Most read