ಒಂದು ಸಿನಿಮಾಗೆ ಟೈಟಲ್ ಬಹಳ ಮುಖ್ಯವಾಗುತ್ತದೆ. ಹೆಸರೇಳಿದ ಕೂಡಲೇ ವಾವ್ ಫೀಲ್ ಬಂದರೆ ಮೊದಲ ಹಂತದಲ್ಲಿ ಸಿನಿಮಾ ಗೆದ್ದಂತೆಯೇ ಸರಿ. ಶೀರ್ಷಿಕೆಯೇ ಕುತೂಹಲ ಮೂಡಿಸಿದರೆ ಕಥೆ ಸಹಜವಾಗಿಯೇ ಆಸಕ್ತಿ ತರಿಸುತ್ತದೆ. ಕುತೂಹಲದ ಜೊತೆಗೆ ಭಾವನೆಗಳು ಬೆರೆತ ಟೈಟಲ್ ಅಪರೂಪ. ಅಂತಹ ಅಪರೂಪದ ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ ‘ಬಯಕೆಗಳು ಬೇರೂರಿದಾಗ’. ಈ ಒಂದು ಶೀರ್ಷಿಕೆಯ ಸಾಲು ಎಲ್ಲರ ಜೀವನದಲ್ಲೂ ಕಾಡಿರುತ್ತದೆ. ಹೀಗಾಗಿಯೇ ಕೇಳಿದಾಕ್ಷಣ ಮನಸ್ಸಿಗೆ ಟಚ್ ಆಗುತ್ತದೆ. ಇಂಥ ಅದ್ಭುತ ಕಥೆಗೆ ಆಕ್ಷನ್ ಕಟ್ ಹೇಳಿರುವುದು ಎನ್. ಜ್ಯೋತಿ ಲಕ್ಷ್ಮೀ ಅವರು.
ಹೌದು ಚಂದನವನದಲ್ಲಿ ಚಿಗುರೊಡೆದ ಬಯಕೆಗಳು ಬೇರೂರಿದಾಗ ಸಿನಿಮಾ ಕಥಾ ಸಂಕಲನದಿಂದ ಆಯ್ದ ಭಾಗವಾಗಿದೆ. ಪ್ರತಿಯೊಬ್ಬರಿಗೂ ಸಂಬಂಧಗಳಲ್ಲಿ ಪ್ರೀತಿ ಎಂಬುದು ಎಷ್ಟು ಮುಖ್ಯವೆನ್ನುವ ನೀತಿಯನ್ನು ತುಂಬಾ ನಾಜುಕಾಗಿ ಮನ ಮುಟ್ಟುವ ಸಾರಾಂಶವನ್ನು ಒಳಗೊಂಡ ಒಂದು ಚಿತ್ರ ಇದಾಗಿದೆ. ಈಗಾಗಲೇ ಸಿನಿಮಾ ಸಿದ್ಧವಾಗಿದ್ದು, ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲು ಸಿದ್ದವಾಗಿದೆ.
ಕಥಾ ಸಂಕಲವನ್ನು ಆಧರಿಸಿದ ‘ಬಯಕೆಗಳು ಬೇರೂರಿದಾಗ’ ಸಿನಿಮಾಗೆ ಎನ್. ಸುದರ್ಶನ್ ಬಂಡವಾಳ ಹೂಡಿದ್ದಾರೆ. ರಿಲೀಸ್ ಗೂ ಮುನ್ನವೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿನಿಮಾ ಪ್ರದರ್ಶನಗೊಂಡಿದ್ದು, Penzance international film festival Cornwall UK- 2024, Hohe international film festival Germany -2024 ಸೇರಿದಂತೆ 21 ಅವಾರ್ಡ್ ಗಳನ್ನು ಸಿನಿಮಾ ಪಡೆದುಕೊಂಡಿದೆ. ರಾಜ್ಯಾದ್ಯಂತ ಏಪ್ರಿಲ್ ತಿಂಗಳಲ್ಲಿ ಥಿಯೇಟರ್ ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕ ಎನ್.ಸುದರ್ಶನ್ ಪ್ಲ್ಯಾನ್ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಆಕರ್ಷ್ ಆದಿತ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕರ್ಷ್ ಈಗಾಗಲೇ ಹತ್ತಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಾಯಕ ನಟನ ಪಾತ್ರವನ್ನು ನಿರ್ವಹಿಸಿದ್ದಾರೆ. ಶರಣ್ಯ ಈ ಸಿನಿಮಾದ ನಾಯಕಿ ಪಾತ್ರ ಮಾಡಿದ್ದಾರೆ. ನಾತಿಚರಾಮಿ ಚಿತ್ರದಲ್ಲಿ ಉತ್ತಮ ನಟಿ ಎಂಬ ಬಿರುದನ್ನು ಶರಣ್ಯ ತಮ್ಮದಾಗಿಸಿಕೊಂಡಿದ್ದಾರೆ. ಉಳಿದಂತೆ ಶೈಲಜಾ ಜೋಶಿ, ಮಾನಸ ಜೋಶಿ, ಅಜಯ್ ಸತ್ಯನಾರಾಯಣ, ಕಾರ್ತಿಕ್ ಸುಂದರಂ ಮುಖ್ಯ ಪಾತ್ರ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವೈ ಜೆ ಕೆ ಹಾಗೂ ಅರೋನ್ ಕಾರ್ತಿಕ್ ವೆಂಕಟೇಶ್ – ಸಂಗೀತ, ಶರತ್ ಕುಮಾರ್ – ಸಂಕಲನ ನೀಡಿದ್ದಾರೆ. ಆಕರ್ಷ್ ಆದಿತ್ಯ, ವಿ ಎಂ ಏನ್ ಆರ್, ಪ್ರಶಾಂತ್ ತಮ್ಮಯ್ಯ ಹಾಗೂ ಪೂರ್ಣಿಮಾ ದಿಲೀಪ್ ಸಾಹಿತ್ಯ ಬರೆದಿದ್ದಾರೆ. ಅಜಯ್ ವಾರಿಯರ್, ಮೆಹಬೂಬ ಸಾಬ್, ಎಂ.ಡಿ.ಪಲ್ಲವಿ ಹಾಡಿದ್ದಾರೆ. ಹೊಯ್ಸಳ ಹೇಮಂತ್ ಚಿತ್ರಕಥೆ ಬರೆದಿದ್ದಾರೆ.