ಬೆಂಗಳೂರಿನಲ್ಲಿ ತುಂತುರು ಮಳೆ, ಏ.30 ರವರೆಗೆ ಮಳೆಯಾಗುವ ಸಾಧ್ಯತೆ

ಬೆಂಗಳೂರು : ಕಾದು ಬೆಂಡಾಗಿರುವ ರಾಜ್ಯದಲ್ಲೀಗ ಮಳೆ ಆರಂಭವಾಗಿದೆ. ಸಂಜೆಯಿಂದಲೇ ಮೋಡಕವಿದ ವಾತಾವರಣವಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬಿಸಿಲಿನ ತಾಪಕ್ಕೆ ತತ್ತರಿಸಿದ ಜನತೆಗೆ ವರುಣ ತಂಪೆರೆದಿದ್ದಾನೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಉತ್ತರ ಭಾಗದಲ್ಲೂ ಮಳೆಯಾಗಿದೆ. ನಗರದ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಮತ್ತೆ ಹಲವೆಡೆ ಮೋಡ ಕವಿದ ವಾತಾವರಣವಿದೆ. ಬಾಣಸವಾಡಿ, ಕಲ್ಯಾಣನಗರ, ನಾಗವಾರ ಸುತ್ತಮುತ್ತ ತುಂತುರು ಮಳೆಯಾಗಿದೆ.
ಇನ್ನೂ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ  ಕೆಲವೆಡೆ ಆಲಿಕಲ್ಲು ಮಳೆಯಾಗುವ ಸಂಭವವಿದೆ.

ಚಿಕ್ಕಮಗಳೂರು ತಾಲೂಕು, ವಸ್ತಾರೆ, ಆಲ್ದೂರು, ಕೂದುವಳ್ಳಿ, ಮೂಡಿಗೆರೆ, ಕೊಟ್ಟಿಗೆಹಾರ, ಸಾರಗೋಡು, ಕುಂದೂರು, ಬಾಳೆಹೊನ್ನೂರು, ಕಣತಿ, ದೇವರ ಮನೆ, ಕೊಪ್ಪ, ಜಯಪುರ, ಎನ್ಆರ್ ಪುರ, ಸುತ್ತಮುತ್ತಲೂ ಧಾರಾಕಾರ ಮಳೆ ಸುರಿದಿದೆ. ಆಲಿಕಲ್ಲು ಮಳೆ ಬೀಳುತ್ತಿರುವುದು ಕಾಫಿ ಬೆಳೆಗಾರರಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.

ಬೇಸಿಗೆಯಲ್ಲೂ ಕೂಡ ವರುಣ ದೇವನ ಆರ್ಭಟಕ್ಕೆ ಮಲೆನಾಡು ಕಂಗಾಲಾಗಿದೆ. ಮಳೆರಾಯನ ಈ ವಿಚಿತ್ರ ಆಟ ಕಾಫಿನಾಡ ಜನರಲ್ಲಿ ಅಚ್ಚರಿ ಮತ್ತು ಆತಂಕ ಎರಡನ್ನೂ ಏಕಕಾಲಕ್ಕೆ ಸೃಷ್ಟಿಸಿದೆ. ಮಲೆನಾಡಲ್ಲಿ ಆಗಾಗ ಸುರಿಯುತ್ತಿರುವ ಆಲಿಕಲ್ಲು ಮಳೆ ಕಾಫಿ ಹಾಗೂ ಅಡಿಕೆ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಯಾದಗಿರಿಯಲ್ಲಿ 60 ಕುರಿಗಳ ಸಾವು : ಸಿಡಿಲು ಬಡಿದು 60 ಕುರಿಗಳು ಸಾವನ್ನಪ್ಪಿರುವ ಘಟನೆ ಯಾದಗಿರಿ  ಜಿಲ್ಲೆಯ ಗುರುಮಠಕಲ್  ತಾಲೂಕಿನ ಬುದುರು ಗ್ರಾಮದಲ್ಲಿ ನಡೆದಿದೆ, ಕುರಿಗಾಹಿಗಳಾದ ಮಲ್ಲಪ್ಪ, ಜಲ್ಲಪ್ಪ ಎಂಬುವವರಿಗೆ ಸೇರಿದ 60 ಕುರಿಗಳು ಮೃತಪಟ್ಟಿವೆ.  
ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಈ ವೇಳೆ ಕುರಿಗಳನ್ನು ಹೊಡೆದುಕೊಂಡು ಬರುವಾಗ ಈ ಅವಘಡ ಸಂಭವಿಸಿದೆ. ಅವಘಡದಲ್ಲಿ ಸಿಡಿಲು ಬಡಿದು 60 ಕುರಿಗಳು ಸಾವನ್ನಪ್ಪಿವೆ. ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

More articles

Latest article

Most read