ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಉಪರಾಷ್ಟ್ರಪತಿಗಳು ಮುಂದಿನ ಭೇಟಿ ಬಗ್ಗೆ ಎಚ್ಚರವಹಿಸಬೇಕಾಗಿ ಕೊಂದವರು ಯಾರು ಸಂಘಟನೆ ವಿನಂತಿಸಿ ಪತ್ರ

 ದಕ್ಷಿಣ ಕನ್ನಡ   :   ಉಪರಾಷ್ಟ್ರಪತಿಗಳ ಸಚಿವಾಲಯವು ಹೆಚ್ಚಿನ ಸಾಂವಿಧಾನಿಕ ಸೂಕ್ಷ್ಮತೆಯನ್ನು ತೋರಬೇಕಾಗಿ ಮತ್ತು ಧರ್ಮಸ್ಥಳದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವ ಬಗ್ಗೆ ಸೂಕ್ತ ಸ್ಪಷ್ಟೀಕರಣ ನೀಡುವ ಮೂಲಕ ಎಚ್ಚರ ವಹಿಸಬೇಕಾಗಿ ಎಂದು ಮಹಿಳಾ ಸಂಘಟನೆಗಳ ಮತ್ತು ಜಾಗೃತ ನಾಗರಿಕರ ಆಂದೋಲನ ಪತ್ರದ ಮೂಲಕ ವಿನಂತಿಸಿದೆ. 

ಪತ್ರದ ವಿವರ ಇಂತಿದೆ : 

ಕರ್ನಾಟಕದಲ್ಲಿರುವ ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ನಾಲ್ಕರಿಂದ ಐದು ದಶಕಗಳಲ್ಲಿ ನಡೆದ ವ್ಯವಸ್ಥಿತ ಹಿಂಸಾಚಾರ, ಲಿಂಗಾಧಾರಿತ ದೌರ್ಜನ್ಯಗಳು ಮತ್ತು ಸಾಂಸ್ಥಿಕ ಅಕ್ರಮಗಳಿಂದ ಸಂತ್ರಸ್ತರಾದವರಿಗೆ ಮತ್ತು ಮೃತಪಟ್ಟವರಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಿರುವ ಮಹಿಳಾ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಮತ್ತು ಜಾಗೃತ ನಾಗರಿಕರ ಆಂದೋಲನವಾದ ‘ಕೊಂದವರು ಯಾರು – Who Killed Women in Dharmasthala?’ದ ಪರವಾಗಿ ನಾವು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇವೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಕಟವಾಗುವ ಪ್ರಾದೇಶಿಕ ದಿನಪತ್ರಿಕೆಗಳಲ್ಲಿ ಮೇ 20 ರಂದು ಬಂದಿರುವ ಇತ್ತೀಚಿನ ವರದಿಗಳ ಮೂಲಕ, ಧರ್ಮಸ್ಥಳದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ತಾವು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದೀರಿ ಎಂಬ ವಿಷಯವು ನಮ್ಮ ಗಮನಕ್ಕೆ ಬಂದಿದೆ. ನಮ್ಮ ದೇಶದ ಸಾಂವಿಧಾನಿಕ ಚೌಕಟ್ಟನ್ನು ಅಪಾರವಾಗಿ ಗೌರವಿಸುವ ಜವಾಬ್ದಾರಿಯುತ ನಾಗರಿಕರಾಗಿ, ಈ ಭೇಟಿಯ ಔಚಿತ್ಯದ ಬಗ್ಗೆ ನಮಗಿರುವ ಗಂಭೀರವಾದ ಕಳಕಳಿಯನ್ನು ನಿಮ್ಮ ಗಮನಕ್ಕೆ ತರಲು ನಾವು ಈ ಮನವಿಯನ್ನು ಸಲ್ಲಿಸುತ್ತಿದ್ದೇವೆ. ಪ್ರಸ್ತುತ ನಡೆಯುತ್ತಿರುವ ಅಪರಾಧಗಳ ಕುರಿತ ತನಿಖೆಗಳು, ನ್ಯಾಯಾಲಯಗಳಲ್ಲಿ ಬಾಕಿ ಇರುವ ಕಾನೂನು ಪ್ರಕ್ರಿಯೆಗಳು ಮತ್ತು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಇರುವ ಗಂಭೀರ ಸಾರ್ವಜನಿಕ ಪ್ರಶ್ನೆಗಳ ಹಿನ್ನೆಲೆಯಲ್ಲಿ, ತಮ್ಮ ಗೌರವಾನ್ವಿತ ಸಚಿವಾಲಯವು ಈ ಭೇಟಿಯ ಬಗ್ಗೆ ಮರುಪರಿಶೀಲಿಸಬೇಕಾಗಿ ನಾವು ವಿನಂತಿಸಿಕೊಳ್ಳುತ್ತೇವೆ.

 ಅಭಿಯಾನದ ಹಿನ್ನೆಲೆ ಮತ್ತು ವಾಸ್ತವ ಸ್ಥಿತಿ

ಅನೇಕ ದಶಕಗಳಿಂದ, ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಯುವತಿಯರ ಅಪಹರಣಗಳು, ಅತ್ಯಾಚಾರಗಳು, ಹಾಗೂ ಸ್ಥಳೀಯ ಮತ್ತು ದೇಶದ ಇತರ ಭಾಗಗಳಿಗೆ ಸೇರಿದ ಮುಗ್ಧ ಭಕ್ತಾದಿಗಳ ಕೊಲೆಗಳು ನಡೆದಿರುವ ಆತಂಕಕಾರಿ ಆರೋಪಗಳು ಕೇಳಿಬಂದಿವೆ. ಇವುಗಳ ಹಿಂದೆ ವ್ಯವಸ್ಥೆಯ ನಿರ್ಲಕ್ಷ್ಯವೇ ಆಗಿರಲಿ ಇಲ್ಲವೇ ಇವುಗಳನ್ನು ಮುಚ್ಚಿಡಬೇಕೆಂಬ ದುರುದ್ದೇಶಪೂರಿತ ಪ್ರಯತ್ನವೇ ಆಗಿರಲಿ, ಒಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳು ಈ ಪ್ರಕರಣಗಳ ಹಿಂದಿನ ಸತ್ಯವನ್ನು ಹೊರತರಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂಬುದಂತೂ ಸತ್ಯ. ಈ ಎಲ್ಲದರ ಪರಿಣಾಮ ಈ ಪ್ರದೇಶದಲ್ಲಿ ಸತತವಾಗಿ ಎಲ್ಲ ಸರ್ಕಾರಗಳ ಅವಧಿಯಲ್ಲೂ ಪರಿಸ್ಥಿತಿ ಉಲ್ಬಣಿಸುತ್ತಲೇ ಇದೆ.

2025ರ ಜುಲೈ ತಿಂಗಳಿನಲ್ಲಿ, ಸ್ಥಳೀಯ ಪೌರಕಾರ್ಮಿಕರೊಬ್ಬರು ಅಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಕೆಲವು ಸಂಗತಿಗಳನ್ನು ಬಹಿರಂಗಪಡಿಸಿದ ಬಳಿಕ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾನ್ಯ ಅಧ್ಯಕ್ಷರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಕಳೆದ ಹಲವು ದಶಕಗಳಿಂದ ನಾಪತ್ತೆಯಾಗಿರುವ ಮಹಿಳೆಯರು ಹಾಗೂ ನಾಗರಿಕರ ಪ್ರಕರಣಗಳು ಮತ್ತು ಮಹಿಳೆಯರ ಹಾಗೂ ಯುವತಿಯರ ಮೇಲಿನ ಅತ್ಯಾಚಾರಗಳು ಹಾಗೂ ಕೊಲೆಗಳ ಕುರಿತು ಸಮಗ್ರವಾದ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದರು. ಈ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕರ್ನಾಟಕ ಸರ್ಕಾರವು ಇದರ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ದಳವನ್ನು (SIT) ರಚಿಸಿತು. ಸಂತ್ರಸ್ತರ ಕುಟುಂಬಗಳು ನ್ಯಾಯ ದೊರಕುವ ಹೊಸ ಭರವಸೆಯೊಂದಿಗೆ ಎಸ್‌ಐಟಿಯನ್ನು ಸಂಪರ್ಕಿಸಲು ಪ್ರಾರಂಭಿಸಿದ್ದರೂ, ಈ ಇಡೀ ಪ್ರಕ್ರಿಯೆಯೇ ಈಗಲೂ ಅತ್ಯಂತ ಸೂಕ್ಷ್ಮ ಸನ್ನಿವೇಶದಲ್ಲಿದೆ.

ಮಹಿಳೆಯರು, ಯುವತಿಯರು ಮತ್ತು ಮುಗ್ಧ ಭಕ್ತಾದಿಗಳ – ಮಹಿಳೆಯರಾಗಿರಲಿ ಪುರುಷರಾಗಿರಲಿ – ಮೇಲೆ ನಡೆದಿರುವ ತೀವ್ರ ಸ್ವರೂಪದ ಅನ್ಯಾಯಗಳು, ಯಾವುದೇ ಸಾಮಾಜಿಕ – ಮತೀಯ ಅಥವಾ ರಾಜಕೀಯ ನಿರೂಪಣೆಗಳ ಕಾರಣದಿಂದ ಮುಚ್ಚಿಹೋಗದಂತೆ ನೋಡಿಕೊಳ್ಳುವುದಕ್ಕೆ ಮತ್ತು ಸಂತ್ರಸ್ತರ ಧ್ವನಿಯನ್ನು ಬಲಪಡಿಸುವುದಕ್ಕೆ ನಮ್ಮ ಆಂದೋಲನವು ಬದ್ಧವಾಗಿದೆ. ಅಲ್ಲದೆ, ಈ ಸಾವುಗಳಿಗೆ ಮತ್ತು ದುಃಖತಪ್ತ ಕುಟುಂಬಗಳಿಗೆ ನ್ಯಾಯ ಲಭಿಸುವಲ್ಲಿ ಉಂಟಾಗುತ್ತಿರುವ ಕಾರಣವೇ ಇಲ್ಲದ ವಿಳಂಬವನ್ನು ಸರಿಪಡಿಸಬೇಕಾದ ಅಗತ್ಯವಿದೆ. ಅದಕ್ಕಾಗಿ, ನಮ್ಮ ಸಾರ್ವಜನಿಕ ಹೋರಾಟಗಳು ಮತ್ತು ಸಾಮಾಜಿಕ ಒತ್ತಡದ ಮೂಲಕ  ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಯ ಉತ್ತರದಾಯಿತ್ವವನ್ನು ಖಾತ್ರಿಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ.

 ಗಂಭೀರ ಆರೋಪಗಳು ಮತ್ತು ನ್ಯಾಯಾಲಯದ ಪರಿಶೀಲನೆಯಲ್ಲಿರುವ (Sub Judice) ವಿಷಯಗಳು

ತಾವು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವ ಕಾರ್ಯಕ್ರಮದ ಸ್ಥಳವು ಪ್ರಸ್ತುತ ಗಂಭೀರವಾದ ಸಾರ್ವಜನಿಕ ಪರಿಶೀಲನೆಗೆ ಒಳಪಟ್ಟು, ಕಾನೂನು ಪ್ರಕ್ರಿಯೆಗಳಿಗೆ ಒಳಗಾಗಿದೆ ಮತ್ತು ಸಕ್ಷಮ ಪ್ರಾಧಿಕಾರಗಳ ಮುಂದೆ ತನಿಖೆಯನ್ನು ಎದುರಿಸುತ್ತಿದೆ. ಅವುಗಳಲ್ಲಿ ಪ್ರಮುಖವಾದವು:

ಮಹಿಳೆಯರ ಮೇಲಿನ ಬಗೆಹರಿಯದ ಸಾಂಸ್ಥಿಕ ಹಿಂಸಾಚಾರ: ಅತ್ಯಂತ ಬರ್ಬರವಾದ, ಇಂದಿಗೂ ತನಿಖೆಯಾಗದ ಮತ್ತು ಆರೋಪಿಗಳನ್ನು ಪತ್ತೆಹಚ್ಚದ ಹಳೆಯ ಪ್ರಕರಣಗಳಾದ ಶ್ರೀಮತಿ ವೇದವಲ್ಲಿ ಅವರ ಅತ್ಯಾಚಾರ ಮತ್ತು ಕೊಲೆ (1978), ಕಾಲೇಜು ವಿದ್ಯಾರ್ಥಿನಿ ಕುಮಾರಿ ಪದ್ಮಲತಾ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ (1986), ಹಾಗೂ ನಾರಾಯಣ ಮತ್ತು ಯಮುನಾ ಅವರ ಜೋಡಿ ಕೊಲೆ (2012) ಪ್ರಕರಣಗಳು ಸೇರಿವೆ.

 ಕುಮಾರಿ ಸೌಜನ್ಯ ಪ್ರಕರಣ: 17 ವರ್ಷದ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಮೇಲಿನ ಭೀಕರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ (2012) ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಬಾಲಕಿಯ ತಾಯಿ ಶ್ರೀಮತಿ ಕುಸುಮಾವತಿ ಗೌಡ ಅವರು ಮರುತನಿಖೆಗಾಗಿ ಸಲ್ಲಿಸಿರುವ ಅರ್ಜಿಯು ಪ್ರಸ್ತುತ ಭಾರತದ ಘನ ಸರ್ವೋಚ್ಚ ನ್ಯಾಯಾಲಯದ (Supreme Court) ಮುಂದೆ ಬಾಕಿ ಇದೆ.

ಅಕ್ರಮ ಶವಸಂಸ್ಕಾರಗಳ ಕುರಿತು ಎಸ್‌ಐಟಿ ಮತ್ತು ಪಿಐಎಲ್ ಪ್ರಕ್ರಿಯೆಗಳು: ಗುರುತು ಪತ್ತೆಯಾಗದ ನೂರಾರು ಶವಗಳನ್ನು ಅಕ್ರಮವಾಗಿ ಹೂತಿಟ್ಟಿರುವ ಬಗ್ಗೆ ಎಫ್‌ಐಆರ್ ದಾಖಲಿಸಿ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು (PIL)  ಕರ್ನಾಟಕ ಉಚ್ಚ ನ್ಯಾಯಾಲಯದ (High Court) ಮುಂದೆ ವಿಚಾರಣೆಯಲ್ಲಿದೆ. ಇದರೊಂದಿಗೆ ಇದಕ್ಕೆ ಸಂಬಂಧಿಸಿದ ಎಸ್‌ಐಟಿ ತನಿಖಾ ಪ್ರಕ್ರಿಯೆಯೂ ಮುಂದುವರಿದಿದೆ.

 ಸಾಂವಿಧಾನಿಕ ಔಚಿತ್ಯ ಮತ್ತು ಸಾರ್ವಜನಿಕ ನಂಬಿಕೆಯ ಕುರಿತಾದ ಆತಂಕ

ಉನ್ನತ ಹುದ್ದೆಗಳಲ್ಲಿರುವ ಗಣ್ಯರು ಇಂತಹ ವೇದಿಕೆಗಳನ್ನು ಹಂಚಿಕೊಳ್ಳುವುದನ್ನು ತಡೆಯಲು ಯಾವುದೇ ನೇರ ಶಾಸನಬದ್ಧ ನಿರ್ಬಂಧವಿಲ್ಲದಿದ್ದರೂ, ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳು ಲಿಖಿತ ಕಾನೂನುಗಳನ್ನು ಮೀರಿದ ಕೆಲವು ಮೂಲಭೂತ ಕಾನೂನು ಸಿದ್ಧಾಂತಗಳಿಗೆ ಬದ್ಧವಾಗಿರಬೇಕಾಗುತ್ತದೆ ಎಂಬ ನಮ್ಮ ತಿಳಿವಳಿಕೆಯನ್ನು ಇಲ್ಲಿ ತಮ್ಮ ಗಮನಕ್ಕೆ ತರಲು ಬಯಸುತ್ತೇವೆ:

ಕಾನೂನಿನ ಆಡಳಿತ ಮತ್ತು ಸಾಂಸ್ಥಿಕ ತಟಸ್ಥತೆ (The Rule of Law & Institutional Neutrality): ಗಂಭೀರ ವಿಷಯಗಳು ನ್ಯಾಯಾಲಯದ ಪರಿಶೀಲನೆಯಲ್ಲಿರುವಾಗ (Sub Judice), ಈ ಪ್ರಕರಣಗಳಿಗೆ ಸಂಬಂಧಿಸಿದ ವ್ಯಕ್ತಿಗಳು ಅಥವಾ ಸಂಸ್ಥೆಗಳೊಂದಿಗೆ ಅತ್ಯುನ್ನತ ಹುದ್ದೆಯಲ್ಲಿರುವವರು ಸಾರ್ವಜನಿಕವಾಗಿ ಕಾಣಿಸಿಕೊಂಡರೆ, ಅದು ಅವರಿಗೆ ಸರ್ಕಾರದ ಪರೋಕ್ಷ ಬೆಂಬಲ ಅಥವಾ ರಕ್ಷಣೆ ಇದೆ ಎಂಬ ಪ್ರಬಲ ಸಾರ್ವಜನಿಕ ಸಂದೇಶವನ್ನು ರವಾನಿಸುತ್ತದೆ. ಇದು ಉದ್ದೇಶಪೂರ್ವಕವಲ್ಲದಿದ್ದರೂ ಸಹ, ನ್ಯಾಯಾಂಗ ವ್ಯವಸ್ಥೆಯ ಸ್ವಾಯತ್ತತೆ ಮತ್ತು ನಿಷ್ಪಕ್ಷಪಾತತೆಯ ಮೇಲಿರುವ ಸಾರ್ವಜನಿಕ ವಿಶ್ವಾಸವನ್ನು ಕುಂದಿಸುವ ಅಪಾಯವನ್ನು ಹೊಂದಿರುತ್ತದೆ.

ಸಾರ್ವಜನಿಕ ನಂಬಿಕೆಯ ತತ್ವ (The Principle of Public Trust): “ನ್ಯಾಯವು ಕೇವಲ ಸಿಕ್ಕರೆ ಸಾಲದು, ಅದು ಸಿಗುತ್ತಿರುವುದು ಸಾರ್ವಜನಿಕವಾಗಿ ಕಾಣಿಸಬೇಕು” ಎಂಬ ಹೇಳಿಕೆಯು ಇಲ್ಲಿ ಅತ್ಯಂತ ಪ್ರಸ್ತುತವಾಗುತ್ತದೆ.

ನಡೆಯುತ್ತಿರುವ ತನಿಖೆಗಳ ಮೇಲಿನ ಪ್ರಭಾವ: ತಾವು ಮುಖ್ಯ ಅತಿಥಿಗಳಾಗಿ ಭಾಗವಹಿಸುವುದರಿಂದ ಸ್ಥಳೀಯ ಆಡಳಿತ, ಎಸ್‌ಐಟಿ ಮತ್ತು ನ್ಯಾಯಾಂಗಕ್ಕೆ, ತಿಳಿದೋ ತಿಳಿಯದೆಯೋ ಒಂದು ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯಿರುತ್ತದೆ. ಇದು ತನಿಖೆಯ ಗಂಭೀರತೆಯನ್ನು ಕಡಿಮೆ ಮಾಡಬಹುದು ಮತ್ತು ಈಗಾಗಲೇ ನೊಂದಿರುವ ಸಂತ್ರಸ್ತ ಕುಟುಂಬಗಳು ನ್ಯಾಯಕ್ಕಾಗಿ ಹೋರಾಡಲು ಮುಂದೆ ಬಾರದಂತೆ ಅವರನ್ನು ಧೃತಿಗೆಡಿಸಬಹುದು.

ನಮ್ಮ ಮನವಿ

ಈ ಮನವಿಯು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ವೈಯಕ್ತಿಕವಾಗಿ ಗುರಿ ಮಾಡುವ ಉದ್ದೇಶವನ್ನು ಹೊಂದಿಲ್ಲ. ಬದಲಿಗೆ, ಸಾಂವಿಧಾನಿಕ ಹುದ್ದೆಗಳ ಘನತೆಯನ್ನು ಎತ್ತಿಹಿಡಿಯುವುದು ಮತ್ತು ನ್ಯಾಯ ಹಾಗೂ ಆಡಳಿತ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕಾಪಾಡುವುದು ನಮ್ಮ ಆಶಯವಾಗಿದೆ.

ವ್ಯಾಪಕವಾಗಿರುವ ಸಾರ್ವಜನಿಕ ಆತಂಕ, ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳಲ್ಲಿ ಬಾಕಿ ಇರುವ ಮೊಕದ್ದಮೆಗಳು ಹಾಗೂ ಪ್ರಸ್ತುತ ನಡೆಯುತ್ತಿರುವ ಎಸ್‌ಐಟಿ ತನಿಖೆಯ ಹಿನ್ನೆಲೆಯಲ್ಲಿ, ಉಪರಾಷ್ಟ್ರಪತಿಗಳ ಸಚಿವಾಲಯವು ಹೆಚ್ಚಿನ ಸಾಂವಿಧಾನಿಕ ಸೂಕ್ಷ್ಮತೆಯನ್ನು ತೋರಬೇಕಾಗಿ ಮತ್ತು ಧರ್ಮಸ್ಥಳದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಾವು ಭಾಗವಹಿಸುವ ಬಗ್ಗೆ ಸೂಕ್ತ ಸ್ಪಷ್ಟೀಕರಣ ನೀಡುವ ಮೂಲಕ ಎಚ್ಚರ ವಹಿಸಬೇಕಾಗಿ  ವಿನಂತಿಸಿಕೊಳ್ಳುತ್ತೇವೆ. ತಮ್ಮ ಭೇಟಿಯ ಮಾಹಿತಿಯು ಒಂದು ವೇಳೆ ನಿಜವೇ ಆಗಿದ್ದಲ್ಲಿ, ಸಕ್ಷಮ ನ್ಯಾಯಾಲಯಗಳು ಮತ್ತು ತನಿಖಾ ಸಂಸ್ಥೆಗಳು ಈ ಗಂಭೀರ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸುವವರೆಗೆ ಇಂತಹ ಭೇಟಿಯನ್ನು ಮುಂದೂಡುವ ನಿರ್ಧಾರ ಕೈಗೊಂಡರೆ, ಅದು ನ್ಯಾಯಾಂಗವನ್ನು ಬಲಿಷ್ಠಗೊಳಿಸುತ್ತದೆ ಮತ್ತು ಕರ್ನಾಟಕದ ಸಂತ್ರಸ್ತ ಮಹಿಳೆಯರು ಹಾಗೂ ನಾಗರಿಕರಿಗೆ ಐತಿಹಾಸಿಕ ಬೆಂಬಲದ ಸಂದೇಶವನ್ನು ನೀಡುತ್ತದೆ.

ಧನ್ಯವಾದಳು. 

‘ಕೊಂದವರು ಯಾರು – Who Killed Women in Dharmasthala?’ ಅಭಿಯಾನದ ಪರವಾಗಿ 

ಮಹಿಳಾ ಹಕ್ಕುಗಳ ಹೋರಾಟಗಾರರು ಮತ್ತು ಸಂಶೋಧಕರು  ಆಶಾ ರಮೇಶ್‌,  ಮಹಿಳಾ ಹೋರಾಟಗಾರರು ಮತ್ತು ಪತ್ರಕರ್ತರು, ದಕ್ಷಿಣ ಕನ್ನಡ  ಗುಲಾಬಿ ಬಿಳಿಮಲೆ, ರಾಜ್ಯ ಅಧ್ಯಕ್ಷರು, ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್ (NFIW)  ಜ್ಯೋತಿ ಎ., ಮಾನಸ ಮಹಿಳಾ ಸಂಘಟನೆ ಚಂಪಾವತಿ, ರಾಮನಗರದ ಪದ್ಮರೇಖಾ ಎಸ್.,  ದಕ್ಷಿಣ ಕನ್ನಡ ಮದ್ಯನಿಷೇಧ ಆಂದೋಲನ ಸ್ವರ್ಣ ಭಟ್, ರಾಷ್ಟ್ರೀಯ ಅಧ್ಯಕ್ಷರು, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ (AIPWA) ಇ. ರತಿ ರಾವ್ ಮೈಸೂರು,  ಪ್ರೇರಣಾ ವಿಕಾಸ ವೇದಿಕೆ ರೂಪಾ ಹಾಸನ, ಜನದನಿ ಜಯಲಕ್ಷ್ಮಿ ಪಾಟೀಲ್,  ಪಿಯುಸಿಎಲ್ (PUCL), ನಾ. ದಿವಾಕರ್,   ಲೇಖಕರು, ರಂಗಕರ್ಮಿ ದು. ಸರಸ್ವತಿ,  ಸ್ತ್ರೀ ಜಾಗೃತಿ ಸಮಿತಿ , ಕಾರ್ಯದರ್ಶಿ – ಗೃಹ ಕಾರ್ಮಿಕರ ಹಕ್ಕುಗಳ ಒಕ್ಕೂಟದ ಅಧ್ಯಕ್ಷರು  ಗೀತಾ ಮೆನನ್ ,  ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ (AIPWA) ನಿರ್ಮಲಾ,  ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ (AIPWA) ಶಿಲ್ಪಾ ಪ್ರಸಾದ್,  ರಾಜ್ಯ ಉಪಾಧ್ಯಕ್ಷರು, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (AIDWA) ಗೌರಮ್ಮ, ಸಾಮಾಜಿಕ ಕಾರ್ಯಕರ್ತರು ಲಕ್ಷ್ಮಿ ಬಾವ್ಗೆ  ಬೀದರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿ ಸದಸ್ಯರು  ಆಶಾ ಸಂತೋಷ್  ಮೂಡಿಗೆರೆ, ಚಿಕ್ಕಮಗಳೂರು, ನಿವೃತ್ತ ಬ್ಯಾಂಕ್ ಉದ್ಯೋಗಿ, ರಂಗಕರ್ಮಿ ಗೀತಾ ಸುರತ್ಕಲ್,  ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (AIDWA)  ಪ್ರಧಾನ ಕಾರ್ಯದರ್ಶಿ, ದೇವಿ,  ಸಮತಾ ಭಾರತ ಜ್ಞಾನ ವಿಜ್ಞಾನ ಸಮಿತಿ ಮಮತಾ ಶಿವು,  ಕಲಾವಿದೆ ಪೂರ್ಣಿಮಾ,  ತಾಳಗುಪ್ಪ, ಸಾಗರ, ಶಿವಮೊಗ್ಗ

More articles

Latest article

Most read