Sunday, September 8, 2024

ಲಾಲ್​ಬಾಗ್​ | ಈ ವರ್ಷ ವಚನ ಸಾಹಿತ್ಯಾಧಾರಿತ ಫಲಪುಷ್ಪ ಪ್ರದರ್ಶನ : ಸಿಎಂ ಸಿದ್ದರಾಮಯ್ಯ

Most read

ಗಣರಾಜ್ಯೋತ್ಸವ (Republic Day) ಪ್ರಯುಕ್ತ ಲಾಲ್​ಬಾಗ್​ನಲ್ಲಿ ಆಯೋಜಸಿರುವ 215ನೇ ಫ್ಲವರ್ ಶೋ (Lalbagh Flower Show) ವನ್ನು ಬಸವಣ್ಣನವರ ಪ್ರತಿಮೆಗೆ ಹೂ ಅರ್ಪಣೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು.

ಲಾಲ್ ಬಾಗ್ ಎಂದಿನಂತೆ ಈ ವರ್ಷವು ಫಲಪುಷ್ಪ ಪ್ರದರ್ಶನವನ್ನು ಗಣರಾಜ್ಯೋತ್ಸವದ ಪ್ರಯುಕ್ತ ಅಯೋಜನೆ ಮಾಡಿದ್ದಾರೆ. ಈ ವರ್ಷದ ಫ್ಲವರ್ ಶೋ ನಾ ನಾನು ಮತ್ತೆ ಡಿಸಿಎಂ ಉದ್ಘಾಟನೆ ಮಾಡಿದ್ದೇವೆ. 12 ಶತಮಾನದಲ್ಲಿದಲ್ಲಿ ಸಮಾನತೆಯನ್ನ ನಿರ್ಮಾಣ ಮಾಡುವ ಸಲುವಾಗಿ ಜಾತಿ ಹೋಗಲಾಡಿಸುವ ಸಲುವಾಗಿ ಬಸವಣ್ಣ ಮತ್ತವರ ಸಂಗಡಿಗರು ಹೋರಾಡಿದ್ದರು. ಇವುಗಳನ್ನ ಪರಿಚಯಿಸುವ ದೃಷ್ಟಿಯಿಂದ ತೋಟಗಾರಿಕೆ ಇಲಾಖೆ ಪ್ರದರ್ಶನ ಏರ್ಪಡಿಸಿದೆ ಎಂದರು.

ಈ ಫ್ಲವರ್ ಶೋ‌ಗೆ ಸುಮಾರು 35 ಲಕ್ಷ ಹೂಗಳನ್ನ ಬಳಕೆ ಮಾಡಿ ಫ್ಲವರ್ ಶೋ ಆಯೋಜನೆ ಮಾಡಿದ್ದಾರೆ. ಬಸವಣ್ಣನವರ ಸಂದೇಶವನ್ನ ಜನರಿಗೆ ತಲುಪಿಸುವ ಕೆಲಸವನ್ನ ತೋಟಗಾರಿಕೆ ಮಾಡಿದೆ.

ಬೆಂಗಳೂರು ಜನರು ಇದರ ಸದುಪಯೋಗ ಪಡೆದುಕೊಳ್ಳಿ. ಫಲಪುಷ್ಪ ಪ್ರದರ್ಶನದಲ್ಲಿ ಹಲವು ಬೆಳವಣಿಗೆಯ ಪರಿಚಯಿಸುವ ಕೆಲಸ ತೋಟಗಾರಿಕೆ ಇಲಾಖೆ ಮಾಡುತ್ತಿದೆ.

ಈ ತೋಟಗಾರಿಕೆ ಇಲಾಖೆ ಯಾವೆಲ್ಲ ಹೂ ಬೆಳಿತಾರೆ ಏನೆಲ್ಲಾ ಮಾಡ್ತಾರೆ ಎಂಬುದನ್ನು ಕೂಡ ಇಲ್ಲಿ ಪರಿಚಯ ಮಾಡಿಕೊಡುತ್ತಾರೆ. ಹೂ ನೋಡುವುದರ ಜೊತೆಗೆ ಅದನ್ನು ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.

ಕಾಕತಾಳೀಯ ಏನಂದ್ರೆ ಇವತ್ತು ಸಚಿವ ಸಂಪುಟ ಸಭೆ ಇತ್ತು ಅದರಲ್ಲಿ ನಾವು ಬಸವಣ್ಣ ಅವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ. ಇದಕ್ಕೆ ಅನೇಕ ಸ್ವಾಮಿಗಳು ಶರಣರು ಒತ್ತಾಯ ಮಾಡಿದ್ದರು. ಇಂದೇ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಇವತ್ತಿ‌ನಿಂದ ಬಸವಣ್ಣನವರು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಕರೆಯಬೇಕು ಎಂದು ಹೇಳಿದ್ದಾರೆ.

ಶಿಕರಿಪುರದ 46 ಎಕರೆ ಜೈಲಿನ ಜಾಗಕ್ಕೆ ಅಲ್ಲಮ ಪ್ರಭುಜಾಗಕ್ಕೆ ನಾಮಕರಣ ಮಾಡಿದ್ದೇವೆ. ಅನುಭವ ಮಂಟಪದ ಬಳಿ ಫ್ರಿಡಂ ಪಾರ್ಕ್ ಅಂತ ಪಾರ್ಕ್ ಇದೆ. ಆ ಪಾರ್ಕ್ ಗೆ ಅಲ್ಲಮ ಪ್ರಭು ಪಾರ್ಕ್ ಅಂತ ಕರೆಯಲಾಗುತ್ತೆ ಎಂದು ಹೇಳಿದ್ದಾರೆ.

More articles

Latest article