Thursday, July 25, 2024

ಗುಜರಾತ್’ನಲ್ಲಿ ಘೋರ ದುರಂತ ; ಬೋಟ್ ಮುಳುಗಿ 13 ಮಕ್ಕಳು ಸೇರಿ 15 ಸಾವು!

Most read

ಗುಜರಾತ್‌ನ ವಡೋದರಾದಲ್ಲಿ ದೋಣಿ ಮುಳುಗಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ.

ಗುರುವಾರ ಮಧ್ಯಾಹ್ನ ಹರ್ನಿ ಕೆರೆಯಲ್ಲಿ ಈ ಅವಘಡ ಸಂಭವಿಸಿದೆ. ಮೃತರಲ್ಲಿ ಕನಿಷ್ಠ 13 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸೇರಿದ್ದಾರೆ. ದೋಣಿಯಲ್ಲಿದ್ದ ಇತರರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ಪ್ರತ್ಯಕ್ಷದರ್ಶಿಗಳ ಪ್ರಕಾರ, ದೋಣಿ ಸವಾರಿ ಮಾಡುವಾಗ ಯಾರೂ ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂದು ವರದಿಯಾಗಿದೆ.

ಸನ್‌ರೈಸ್ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನ ಗುರುವಾರ ಪಿಕ್‌ನಿಕ್‌ಗೆ ಕರೆದುಕೊಂಡು ಹೋಗಲಾಗಿತ್ತು. ಬೋಟಿನಲ್ಲಿ 23 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಇದ್ದರು. ಸಮತೋಲನ ತಪ್ಪಿ ಬೋಟ್ ಪಲ್ಟಿಯಾಗಿದೆ. ಯಾವ ಮಕ್ಕಳೂ ಲೈಫ್ ಜಾಕೆಟ್ ಧರಿಸಿರಲಿಲ್ಲ. ಮಕ್ಕಳಿಗೆ ಈಜು ಬಾರದೇ ಇದ್ದುದರಿಂದ ನೀರಿನಲ್ಲಿ ಮುಳುಗತೊಡಗಿದರು. ಸ್ಥಳದಲ್ಲಿದ್ದವರು ಮಕ್ಕಳನ್ನ ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ. ಕೆಲವರನ್ನು ರಕ್ಷಸಿದ್ದಾರೆ ನಂತರ ನಾವು ಸ್ಥಳಕ್ಕೆ ಬಂದು ಕಾರ್ಯಚರಣೆ ನಡೆಸಿದ್ದೇನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

More articles

Latest article