Wednesday, May 22, 2024

ಶೃಂಗೇರಿ ಶಾರದಾ ಮಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಅಯೋಧ್ಯೆಗೆ ಹೋಗುವುದಿಲ್ಲ: ಶ್ರೀ ಮಠದ ಸ್ಪಷ್ಟನೆ

Most read

ಶೃಂಗೇರಿ: ದಕ್ಷಿಣಾಮ್ನಾಯ ಪೀಠವೇಂದು ಹೆಸರಾಗಿರುವ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಜ.22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಶ್ರೀಮಠ ತಳ್ಳಿಹಾಕಿದೆ. ಇದು ಸಂಪೂರ್ಣ ತಪ್ಪು ಸಂದೇಶವಾಗಿದ್ದು ಇಂತಹ ಯಾವುದೇ ಸುದ್ದಿ ಸತ್ಯಕ್ಕೆ ದೂರವಾಗಿದ ಎಂದು ಶೃಂಗೇರಿ ಮಠದ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದೆ.

ಶಿವಮೊಗ್ಗ ಸಮೀಪದ ಕೂಡಲಿ ಮಠವನ್ನೇ ಶೃಂಗೇರಿ ಮಠ ಎಂದು ತಪ್ಪಾಗಿ ಬಿಂಬಿಸಲಾಗಿದೆಯಲ್ಲದೇ, ಶೃಂಗೇರಿ ಮಠದ ಶಂಕರಾಚಾರ್ಯರ ಭಾವಚಿತ್ರವನ್ನು ಬಳಸಿಕೊಳ್ಳಲಾಗಿದೆಯಲ್ಲದೇ ಶೃಂಗೇರಿ ಮಠದ ಶಂಕರಾಚಾರ್ಯರು ಅಯೋಧ್ಯೆ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎಂದು ಸುದ್ದಿ ಪ್ರಕಟಿಸಿ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡಿದೆ ಎಂದು ವೆಬ್ ಸೈಟ್ ಪ್ರಕಟಣೆಯಲ್ಲಿ ತಿಳಿಸಿದೆ.

ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥರ ನಿರ್ದೇಶನದಂತೆ ಶೃಂಗೇರಿ ಮಠದ ಆಡಳಿತಾಧಿಕಾರಿ  ವಿ ಆರ್ ಗೌರಿಶಂಕರ್ ಅಯೋಧ್ಯೆಯ ಕಾರ್ಯಕ್ರಮದಲ್ಲಿ ಮಠವನ್ನು ಪ್ರತಿನಿಧಿಸಲಿದ್ದಾರೆ ಎಂದೂ ತಿಳಿಸಲಾಗಿದೆ.

More articles

Latest article