ಟೆಹ್ರಾನ್‌ನಲ್ಲಿ 10 ರಿಂದ 12 ಗಂಟೆಗಳ ಕಾಲ ಸಾಗಲಿದೆ ಖಮೇನಿ ಅಂತ್ಯಕ್ರಿಯೆ ಮೆರವಣಿಗೆ

ಟೆಹ್ರಾನ್:  ರಷ್ಯಾದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗಾಗಿ ಇರಾನ್ ನಲ್ಲಿ ಸೋಮವಾರ ತನ್ನ ರಾಜಧಾನಿ ಟೆಹ್ರಾನ್ ಮೂಲಕ ಮೆರವಣಿಗೆಯನ್ನು ಪ್ರಾರಂಭವಾಗಿದೆ.

ಕಳೆದೆರಡು ದಿನಗಳಿಂದ ಖಮೇನಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಿದ್ದ ಟೆಹ್ರಾನ್​ ಗ್ರಾಂಡ್​ ಮೊಸಲ್ಲಾ ಧಾರ್ಮಿಕ ಸಂಕೀರ್ಣದಿಂದ ಇಂದು ಬೆಳಗ್ಗೆ 6ಕ್ಕೆ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಿದೆ. 10 ರಿಂದ 12 ಗಂಟೆಗಳ ಕಾಲ ಸಾಗಲಿರುವ ಮೆರವಣಿಗೆ, ಮೆಹ್ರಾಬಾದ್ ವಿಮಾನ ನಿಲ್ದಾಣದ ಬಳಿ ಇರುವ ದಮಾವಂದ್ ಸ್ಟ್ರೀಟ್, ಇಮಾಮ್ ಹುಸೇನ್ ಸ್ಕ್ವೇರ್, ಎನ್ಕ್ವೆಲಾಬ್ ಸ್ಟ್ರೀಟ್, ಎನ್ಕ್ವೆಲಾಬ್ ಸ್ಕ್ವೇರ್, ಆಜಾದಿ ಸ್ಟ್ರೀಟ್, ಆಜಾದಿ ಸ್ಕ್ವೇರ್ ಮತ್ತು ಶಾಹಿದ್ ಲಷ್ಗರಿ ಹೆದ್ದಾರಿಯ ಮೂಲಕ 10 ಕಿಲೋಮೀಟರ್ ಸಾಗಲಿದೆ ವರದಿಯಾಗಿದೆ.

ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಪ್ರಾರಂಭಿಸಿದ ಯುದ್ಧದ ಆರಂಭದಲ್ಲಿ ಫೆಬ್ರವರಿ 28 ರಂದು ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಖಮೇನಿಗೆ ಧ್ವಜದಿಂದ ಹೊದಿಸಲಾದ ಶವಪೆಟ್ಟಿಗೆಯನ್ನು ಮತ್ತು ಅವರ ಕುಟುಂಬದವರನ್ನು ಟ್ರಕ್‌ನಲ್ಲಿ  ಸಾಗುತ್ತಿದ್ದಾರೆ. ಟೆಹ್ರಾನ್‌ನ ಮೆಹ್ರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ   ಕರೆದೊಯ್ಯಲಾಗುತ್ತಿದೆ. 

ಸರ್ಕಾರಕ್ಕೆ ಜನಪ್ರಿಯ ಬೆಂಬಲವನ್ನು ತೋರಿಸಲು ನಗರದಾದ್ಯಂತ ಸಮಾರಂಭದಲ್ಲಿ ಹೆಚ್ಚಿನ ಜನಸಮೂಹ ಭಾಗವಹಿಸುತ್ತಿದೆ. ಶೋಕಾಚರಣೆ ಹಿನ್ನಲೆ  ಅಧಿಕಾರಿಗಳು, ವಾಯುಪ್ರದೇಶ ಮತ್ತು ದೈನಂದಿನ ಜೀವನವನ್ನು ಸ್ಥಗಿತಗೊಳಿಸಿದ್ದಾರೆ. ಇದು ಶನಿವಾರ ಪ್ರಾರಂಭವಾಗಿದ್ದು, 86 ವರ್ಷದ ಖಮೇನಿ ಅವರ ಜನ್ಮಸ್ಥಳವಾದ ಮಶಾದ್‌ನಲ್ಲಿರುವ ಇಮಾಮ್ ರೆಜಾ ದೇಗುಲದಲ್ಲಿ  ಗುರುವಾರ  ಅಂತ್ಯಕ್ರಿಯೆ ನಡೆಯಲಿದೆ.

ಈ ಮಧ್ಯೆ, ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಪುನಃ ತೆರೆಯುವ, ತನ್ನ ವಿವಾದಿತ ಪರಮಾಣು ಕಾರ್ಯಕ್ರಮವನ್ನು ಹಿಂದಕ್ಕೆ ಪಡೆಯುವ ಮತ್ತು ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಇರಾನ್ ಜೊತೆಗಿನ ಮಾತುಕತೆಗಳನ್ನು ಅಮೆರಿಕ ಮುಂದುವರಿಸುತ್ತಿದೆ. 

ಆದಾಗ್ಯೂ, ಅಂತ್ಯಕ್ರಿಯೆ ನಡೆಯುತ್ತಿರುವಾಗ, ಖಮೇನಿಯವರ ಸಾವಿಗೆ ಸೇಡು ತೀರಿಸಿಕೊಳ್ಳಲು ಶೋಕತಪ್ತರಿಂದ ಬೆದರಿಕೆಗಳು ಹೆಚ್ಚಾಗಿ ಬರುತ್ತಿವೆ. ಶೋಕತಪ್ತರು ಮತ್ತು ಅವರು ಹೊತ್ತಿರುವ ಚಿಹ್ನೆಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಬ್ಬರಿಗೂ ಜೀವ ಬೆದರಿಕೆ ಇದೆ ಎನ್ನಲಾಗಿದೆ. 

“ನಮ್ಮ ನಾಯಕನ ಅಂತ್ಯಕ್ರಿಯೆಗಾಗಿ ನಾವು ಇಲ್ಲಿದ್ದೇವೆ, ಇದು ತುಂಬಾ ಕಠಿಣ ದಿನ” ಎಂದು ಸೋಮವಾರ ಬೆಳಿಗ್ಗೆ ದುಃಖತಪ್ತರಾದ ಫಾತಿಮಾ ಹಸನ್ ಹೇಳಿದರು. “ನಾವು ಅವರಿಗೆ ವಿದಾಯ ಹೇಳಲು ಇಲ್ಲಿಲ್ಲ, ಸೇಡು ತೀರಿಸಿಕೊಳ್ಳಲು ಇಲ್ಲಿದ್ದೇವೆ. ಮತ್ತು ನಾವು ಸೇಡು ತೀರಿಸಿಕೊಳ್ಳುತ್ತೇವೆ.”

More articles

Latest article

Most read