ಗುತ್ತಿಗೆದಾರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಇಂದು ನಿಧನರಾಗಿದ್ದಾರೆ. 84 ವರ್ಷ ವಯಸ್ಸಿನ ಅವರು ಬೆಂಗಳೂರಿನ ಜೋತಿಪುರ ನಿವಾಸದಲ್ಲಿ ನಿಧರಾಗಿದ್ದಾರೆ. ಹೃದಯಾಘಾತದಿಂದ ಕೆಂಪಣ್ಣ ಕೊನೆಯುಸಿರೆಳೆದಿದ್ದಾರೆ.
ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣನವರು ಗುತ್ತಿಗೆದಾರರ ಪರವಾಗಿ ನಿಂತಿದ್ದರು. ಈ ಹಿಂದೆ ಬಿಜೆಪಿ ಸರ್ಕಾರ ವಿರುದ್ಧ 40% ಆರೋಪ ಮಾಡಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ವಿರುದ್ಧ ಹೋರಾಡಿದ್ದರು. ಈ ವಿಚಾರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಗೆ ಹೊಡೆತ ನೀಡಿತ್ತು.
ಆದರೀಗ ಇವರ ಹಠಾತ್ ಸಾವು ಗುತ್ತಿಗೆದಾರರಿಗೆ ಬೇಸರ ತರಿಸಿದೆ. ಕೆಂಪಣ್ಣ ಅವರ ಸಾವಿಗೆ ಅನೇಕರು ಕಂಬನಿ ಸುರಿಸಿದ್ದಾರೆ. ಜೊತೆಗೆ ಬೇಸರ ವ್ಯಕ್ತಪಡಿಸಿದ್ದಾರೆ.