ಗಣೇಶ ವಿಸರ್ಜನೆ ವೇಳೆ ಸಂಸದ ಯದುವೀರ್‌ಗೆ ನೀರು, ಮಜ್ಜಿಗೆ ನೀಡಿ ಉಪಚರಿಸಿದ ಮುಸ್ಲಿಮರು

ಬೆಂಗಳೂರು: ರಾಜ್ಯದ ವಿವಿಧೆಡೆ ಗಣೇಶ ವಿಸರ್ಜನೆ ಮೆರವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ ಮೈಸೂರು, ಹಾವೇರಿ ಹಾಗೂ ಹೊಸಪೇಟೆಯಲ್ಲಿ ವಿಭಿನ್ನ ಘಟನೆಗಳು ವರದಿಯಾಗಿವೆ.

ಮೈಸೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಸಿಲಿನ ತಾಪದಿಂದ ದಣಿದಿದ್ದ ವೇಳೆ ಅಶೋಕ ರಸ್ತೆಯ ಮಸೀದಿ ಬಳಿ ಸ್ಥಳೀಯ ಮುಸ್ಲಿಮರು ಅವರಿಗೆ ನೀರು ಹಾಗೂ ಮಜ್ಜಿಗೆ ನೀಡಿ ಆತಿಥ್ಯ ತೋರಿಸಿದ್ದಾರೆ. ಈ ವೇಳೆ ಕೆಲವರು ಯದುವೀರ್ ಅವರಿಗೆ ಕೈಮುಗಿದು ಗೌರವ ಸಲ್ಲಿಸಿದ್ದಾರೆ.

ಇತ್ತ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ರಾಜಬೀದಿಯಲ್ಲಿ ಗಣೇಶ ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಗಣೇಶ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಬೀದಿಯಲ್ಲಿರುವ ಮಸೀದಿ ಹಿನ್ನೆಲೆಯಲ್ಲಿ ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿದೆ ಎಂದು ಸಮಿತಿ ಸದಸ್ಯರು ಆರೋಪಿಸಿದ್ದಾರೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರೊಂದಿಗೆ ನಡೆದ ಮಾತುಕತೆ ಫಲಪ್ರದವಾಗದ ಹಿನ್ನೆಲೆಯಲ್ಲಿ ಗಣೇಶ ಸಮಿತಿ ಸದಸ್ಯರು ಗಣೇಶನನ್ನು ದೇಗುಲದಲ್ಲೇ ಮರುಪ್ರತಿಷ್ಠಾಪಿಸಿದ್ದಾರೆ. ಪರಿಸ್ಥಿತಿ ಹಿನ್ನೆಲೆಯಲ್ಲಿ ದೇವಾಲಯದ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇದೇ ವೇಳೆ ಹೊಸಪೇಟೆಯಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿಯ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ರಘು, ತಿಪ್ಪೇಶ್, ಉದಯ್ ಕುಮಾರ್, ದರ್ಶನ್, ಚಂದ್ರು, ಸೂರಿ ಹಾಗೂ ಹನುಮಂತ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಹೊಸಪೇಟೆಯ ಮೇನ್ ಮಾಸ್ಕ್ ಬಳಿ ಗಣೇಶ ವಿಸರ್ಜನೆ ವೇಳೆ ಯುವಕರ ನಡುವೆ ಹೊಡೆದಾಟ ನಡೆದಿತ್ತು ಎನ್ನಲಾಗಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿ ನೆಮ್ಮದಿಗೆ ಭಂಗ ತಂದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆ ಕುರಿತು ಮಾಧ್ಯಮ ವರದಿ ಪ್ರಸಾರವಾದ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

More articles

Latest article

Most read